ಪುತ್ತೂರು ಬಂಟರ ಭವನದಲ್ಲಿ ತಾಲೂಕು ಮಹಿಳಾ ಬಂಟರ ಸಂಘದ ಮಾಸಿಕ ಸಭೆಯು ಸೆಪ್ಟೆಂಬರ್ 10 ರಂದು ಜರಗಿತು. ಕುತ್ತಾಡಿ ಸತೀಶ್ ರೈ ತನ್ನ ಸಹೋದರಿ ಸ್ವರ್ಣಲತಾ ಜೆ ರೈ ರವರ ಮೂಲಕ ಮಹಿಳಾ ಬಂಟರ ವಿಭಾಗದ ನೇತೃತ್ವದಲ್ಲಿ 5 ಜನ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಕಳೆದ 6 ವರ್ಷಗಳಿಂದ ನೀಡುತ್ತಿದ್ದು, ಈ ವರ್ಷವೂ ಕೂಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ವೆಚ್ಚವನ್ನು ಮಹಿಳಾ ಬಂಟರ ಮಾಸಿಕ ಸಭೆಯಲ್ಲಿ ವಿತರಿಸಲಾಯಿತು.
ಪುತ್ತೂರು ಬಂಟರ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಕೋಶಾಧಿಕಾರಿ ಸಂತೋಷ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕಿ ವಾಣಿ ಎಸ್ ಶೆಟ್ಟಿ, ನಿಕಟಪೂರ್ವ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ, ಸಂಘದ ಪದಾಧಿಕಾರಿ ಜಯಂತಿ ಎಂ ರೈ, ಉಪಸ್ಥಿತರಿದ್ದರು. ಭವ್ಯ ಅಮ್ಮಣ್ಣ ರೈ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ ಶೆಟ್ಟಿ ವರದಿ ವಾಚಿಸಿದರು. ಕೋಶಾಧಿಕಾರಿ ಅರುಣಾ ಡಿ. ರೈ ಆಟಿದ ಕೂಟ ಕಾರ್ಯಕ್ರಮದ ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕಾರಿ ಸಮಿತಿಯ ಅನುರಾಧ ಆರ್ ಶೆಟ್ಟಿ, ಕೃಷ್ಣವೇಣಿ ಕೆ ರೈ ಸಲಹೆ ಸೂಚನೆ ನೀಡಿದರು. ಅಧ್ಯಕ್ಷೆ ಗೀತಾ ಮೋಹನ್ ರೈ ಸ್ವಾಗತಿಸಿ, ಕೋಶಾಧಿಕಾರಿ ಅರುಣಾ ಡಿ ರೈ ವಂದಿಸಿದರು.