ಮುಂಬಯಿ ಮಹಾನಗರದ ಪ್ರತಿಷ್ಠಿತ ಸಂಘಟನೆ ಎಸೋಸಿಯೇಷನ್ ಆಫ್ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್ಸ್ ಮುಂಬಯಿ ವತಿಯಿಂದ ಮುಲುoಡ್ ಪಶ್ಚಿಮದ ಶಿಲ್ಪಾ ರೆಸಿಡೆನ್ಸಿ ಹೋಟೆಲ್ ನ ಬ್ಯಾಂಕ್ವೆಟ್ ಹಾಲ್ ನಲ್ಲಿ ಅಕ್ಟೋಬರ್ 25 ರಂದು ರವಿವಾರ ಬೆಳಗ್ಗೆ 10.30 ಕ್ಕೆ ವಿಚಾರ ಸಂಕಿರಣ, ಉಪನ್ಯಾಸ ಅಧಿವೇಶನ ಕಾರ್ಯಕ್ರಮವು ಸಂಘಟನೆಯ ಅಧ್ಯಕ್ಷರಾದ ಸಿಎ ಜಗದೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಲಿದೆ. ಈ ಸಂದರ್ಭ ‘ಕೋಡ್ ಆಫ್ ಎಥಿಕ್ಸ್ -ಪ್ರಾಕ್ಟಿಕಲ್ ಎಸ್ಪೆಕ್ಟ್ಸ್’ ವಿಷಯದ ಬಗ್ಗೆ ಚರ್ಚೆ ನಡೆಯಲಿದ್ದು, ಹಿರಿಯ ಲೆಕ್ಕ ಪರಿಶೋಧಕರಾದ ಸಿಎ ಚಂದ್ರಶೇಖರ್ ವಝ ಅವರಿಂದ ಎಐ ಟೂಲ್ಸ್ ಯೂಸ್ಡ್ ಬೈ ಸಿಎ’ಸ್ ಇನ್ ಪ್ರಾಕ್ಟೀಸ್ ವಿಷಯದ ಬಗ್ಗೆ ವಿಚಾರ ಸಂಕಿರಣ, ಉಪನ್ಯಾಸ ನಡೆಯಲಿದೆ.
ಆ ಪ್ರಯುಕ್ತ ಮಹಾನಗರದ ಎಲ್ಲಾ ಲೆಕ್ಕ ಪರಿಶೋಧಕರು ಹಾಗೂ ಬಂಟ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿರಬೇಕಾಗಿ ಎಸೋಸಿಯೇಷನ್ ಆಫ್ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್ಸ್ ಮುಂಬಯಿ ಅಧ್ಯಕ್ಷ ಸಿಎ ಜಗದೀಶ್ ಶೆಟ್ಟಿ, ಸಂಚಾಲಕ ಸಿಎ ಶಂಕರ್ ಶೆಟ್ಟಿ, ಉಪಾಧ್ಯಕ್ಷ ಸಿಎ ರಮೇಶ್ ಬಿ ಶೆಟ್ಟಿ, ಕಾರ್ಯದರ್ಶಿ ಸಿಎ ರೋಹಿತ್ ಶೆಟ್ಟಿ, ಕೋಶಾಧಿಕಾರಿ ಸಿಎ ಮಹೇಶ್ ಶೆಟ್ಟಿ ಮತ್ತು ಸರ್ವ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ವಿನಂತಿಸಿದ್ದಾರೆ.





















































































































