ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಉಡುಪಿ ತಾಲೂಕು ಸಮಿತಿ ಆಶ್ರಯದಲ್ಲಿ ದಿ. ಕೆ ಸತೀಶ್ಚಂದ್ರ ಹೆಗ್ಡೆಯವರ 90ನೇ ಜನ್ಮದಿನದ ಸಂಸ್ಮರಣೆ, 5ನೇ ವರ್ಷದ ವಿದ್ಯಾರ್ಥಿವೇತನ ವಿತರಣೆ ಹಾಗೂ ಬಂಟ ಸಮ್ಮಿಲನವು ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಅಕ್ಟೋಬರ್ 25 ರಂದು ಪೂರ್ವಾಹ್ನ 9:30 ಕ್ಕೆ ನಡೆಯಲಿದೆ. ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿವಿ ವಿಶ್ರಾಂತ ಕುಲಪತಿ ಪ್ರೊ. ಎಸ್ ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅವರು ಸತೀಶ್ಚಂದ್ರ ಹೆಗ್ಡೆಯವರ ಸಾಕ್ಷ ಚಿತ್ರ ಅನಾವರಣಗೊಳಿಸುವರು. ಸತೀಶ್ಚಂದ್ರ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಪ್ರೇಮಲತಾ ಸತೀಶ್ಚಂದ್ರ ಹೆಗ್ಡೆ ವಿದ್ಯಾರ್ಥಿ ವೇತನ ವಿತರಿಸಲಿದ್ದಾರೆ.




ಮುಖ್ಯ ಅತಿಥಿಯಾಗಿ ಬಂಟರ ಯಾನೆ ನಾಡವರ ಮಾತೃ ಸಂಘ ಉಡುಪಿ ಮಾಜಿ ಸಂಚಾಲಕ ಬಿ. ಜಯರಾಜ್ ಹೆಗ್ಡೆ ಉಪಸ್ಥಿತರಿರುವರು. ರವೀಂದ್ರನಾಥ ಜಿ ಹೆಗ್ಡೆ ಪಡುಬಿದ್ರಿ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಾಧಕರಾದ ಪ್ರಭಾಕರ ಶೆಟ್ಟಿ ಅವರಾಲು ಬೊಳಿಂಜೆ ಗುತ್ತು (ಕೃಷಿ), ಡಾ. ಚಿಂತನ್ ರೋಹಿತ್ ಹೆಗ್ಡೆ (ವೈದ್ಯಕೀಯ), ರಿಷಾ ಆರ್. ಶೆಟ್ಟಿ (ಯೋಗ), ತನ್ವಿ ಶೆಟ್ಟಿ (ಇಂಜಿನಿಯರಿಂಗ್ ಚಿನ್ನದ ಪದಕ ), ಭೂಮಿಕಾ (ದ್ವಿ ಪಿಯುಸಿ ಕಾಮರ್ಸ್ 7ನೇ ರ್ಯಾಂಕ್), ಸಾನ್ವಿ ದಿನೇಶ ಶೆಟ್ಟಿ (ದ್ವಿ ಪಿಯುಸಿ ವಿಜ್ಞಾನ ಶೇ.99.17 ಅಂಕ) ಅವರನ್ನು ಸಮ್ಮಾನಿಸಲಾಗುವುದು ಎಂದು ಸಂಚಾಲಕ ದಿನಕರ ಶೆಟ್ಟಿ ಹೆರ್ಗ, ಸಹ ಸಂಚಾಲಕ ಬಿ ಮಿಥುನ್ ಆರ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


















































































































