ಅಂಬಲ್ಪಾಡಿ ಪರಿಸರದಲ್ಲಿರುವ ಭಾಸ್ಕರ್ ಶೆಟ್ಟಿ ಮತ್ತು ಅರುಣ ಶೆಟ್ಟಿ ದಂಪತಿಯವರ ಮನೆಯು ತುಂಬಾ ಅಜೀರ್ಣಾವಸ್ಥೆಯಲ್ಲಿರುವುದನ್ನು ಮನಗಂಡು ಬಂಟರ ಯಾನೆ ನಾಡವರ ಮಾತೃಸಂಘ (ರಿ) ಉಡುಪಿ ತಾಲೂಕು ಸಮಿತಿಯ ನಿಕಟಪೂರ್ವ ಸಂಚಾಲಕರಾದ ಜಯರಾಜ್ ಹೆಗ್ಡೆಯವರ ನೇತೃತ್ವದಲ್ಲಿ, ಪಳ್ಳಿ ನಟರಾಜ್ ಹೆಗ್ಡೆ, ಮನೋಹರ್ ಶೆಟ್ಟಿ ಅಂಬಲ್ಪಾಡಿ ಹಾಗೂ ಈಗಿನ ತಾಲೂಕು ಸಮಿತಿಯ ಸಂಚಾಲಕರಾದ ಶಿವಪ್ರಸಾದ್ ಹೆಗ್ಡೆ, ಉಪ ಸಂಚಾಲಕರಾದ ಕೋಡು ದಿನೇಶ್ ಹೆಗ್ಡೆ ಹಾಗೂ ತಾಲೂಕು ಸಮೀತಿಯ ಸದಸ್ಯರು ಹಾಗೂ ಊರ ಮತ್ತು ಪರ ಊರ ದಾನಿಗಳ ಸಹಕಾರದಿಂದ ಭಾಸ್ಕರ್ ಶೆಟ್ಟಿ ದಂಪತಿಯವರಿಗೆ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಯನ್ನು ಕಿದಿಯೂರು ಪಂಚಾಯತ್ ನ ಪ್ರಥಮ ಪ್ರಜೆ ಸುಜಾತ ಶೆಟ್ಟಿಯವರು ದೀಪ ಬೆಳಗಿಸಿ, ಮನೆಯ ಕೀ ಕೊಡುವ ಮೂಲಕ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಶಕ್ತಿ ಬೀಡಿ ಮಾಲಕರಾದ ಶಶಿಕಾಂತ್ ಶೆಣೈ, ನಗರಸಭೆಯ ಸದಸ್ಯರಾದ ಹರೀಶ್ ಶೆಟ್ಟಿ, ತಾಲೂಕು ಸಮಿತಿಯ ಸದಸ್ಯರುಗಳಾದ ಮಿಥುನ್ ಹೆಗ್ಡೆ, ಪ್ರಸಾದ್ ಹೆಗ್ಡೆ ಮಾರಳಿ ದಂಪತಿ, ಸುಭಾಸ್ ಬಲ್ಲಾಳ್, ಶ್ರೀಧರ್ ಶೆಟ್ಟಿ, ನಿರುಪಮ ಪ್ರಸಾದ್ ಹೆಗ್ಡೆ, ಮುರಳಿ ಕಿಶೋರ್ ಶೆಟ್ಟಿ, ಹರೀಶ್ ಶೆಟ್ಟಿ ಚೇರ್ಕಾಡಿ, ಶೆಟ್ಟಿ ಲಂಚ್ ಹೋಮ್ ಇದರ ಮಾಲಕರಾದ ರಮಾನಂದ ಶೆಟ್ಟಿ, ಕಟಪಾಡಿ ಬಂಟರ ಮಹಿಳಾ ಸಂಘದ ಅಧ್ಯಕ್ಷರಾದ ವೀಣಾ ಶೆಟ್ಟಿ, ಅಕ್ಷಯ್ ಶೆಟ್ಟಿ, ಯೋಗೀಶ್ ಶೆಟ್ಟಿ, ಹರಿಂದ್ರನಾಥ್ ಶೆಟ್ಟಿ, ಬಾಲಚಂದ್ರ ಶೆಟ್ಟಿ ಹಾಗೂ ಊರ ಮಹನೀಯರು ಉಪಸ್ಥಿತರಿದ್ದರು.