
ಬಂಟರ ಯಾನೆ ನಾಡವರ ಮಾತೃ ಸಂಘದ ಮಾರ್ಗದರ್ಶನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಸಮಿತಿಯ ನೇತೃತ್ವದಲ್ಲಿ ‘ಬಂಟ್ಸ್ ಲೆಜೆಂಡ್ ಕಪ್’ ಫೆಬ್ರವರಿ 7 ಮತ್ತು 8ಕ್ಕೆ ಕೊಂಬೆಟ್ಟಿನಲ್ಲಿರುವ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ಯುವ ಬಂಟರ ವಿಭಾಗದ ಸಾರಥ್ಯದಲ್ಲಿ ‘ಬಂಟ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾಟವು ಮಹಿಳಾ ಬಂಟರ ವಿಭಾಗ, ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದೊಂದಿಗೆ ನಡೆಯಲಿದೆ ಎಂದು ಬಂಟರ ಸಂಘ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಬೆಳಿಗ್ಗೆ 7.30 ಕ್ಕೆ ನಡೆಯುವ ಪಂದ್ಯಾಟ ಉದ್ಘಾಟನಾ ಸಮಾರಂಭವನ್ನು ಬಂಟರ ಸಂಘದ ನಿರ್ದೇಶಕ ‘ಸಹಕಾರಿ ರತ್ನ’ ದಂಬೆಕ್ಕಾನ ಸದಾಶಿವ ರೈ ಅವರು ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಲಿದ್ಧಾರೆ. ಬಂಟ್ವಾಳ ತಾಲೂಕಿನ ವಿಶ್ರಾಂತ ಶಿಕ್ಷಣ ಸಂಯೋಜಕ ಪದ್ಮನಾಭ ಆಳ್ವ ಗುತ್ತಿಮಾರು ಉದ್ಘಾಟಿಸಲಿದ್ದಾರೆ. ಸಂಘದ ನಿರ್ದೇಶಕ ಸುಧೀರ್ ಶೆಟ್ಟಿ ತೆಂಕಿಲ, ಮಾಜಿ ಉಪಾಧ್ಯಕ್ಷ ಜಗಜೀವನ್ದಾಸ್ ರೈ ಚಿಲ್ಮೆತ್ತಾರು, ಎಂ.ಆರ್ ಜಯಕುಮಾರ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ ಗಂಟೆ 1೦.3೦ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಸಮಾಜದ ಜಿಲ್ಲಾ ಮತ್ತು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಿದ್ದಾರೆ. ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಜಿಲಾ ರಾಜ್ಯೋತ್ಸವ ಪುರಸ್ಕೃತರಾಗಿರುವ ಪ್ರಗತಿಪರ ಕೃಷಿಕ ಮೋಹನ್ ರೈ ‘ನಂದಾದೀಪ’ ನರಿಮೊಗರು, ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ, ಕಬಡ್ಡಿ ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್, ಕಲಾವಿದ ಸುಂದರ ರೈ ಮಂದಾರ ಮತ್ತು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ವಿದ್ಯಾಮಾತಾದ ಸ್ಥಾಪಕ ಭಾಗ್ಯೇಶ್ ರೈ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಮನಾಥ ಶೆಟ್ಟಿ ಕಾವು ಹೇಳಿದರು. ಫೆಬ್ರವರಿ 8 ರಂದು ಪಂದ್ಯಾಟದ ಸಮಾರೋಪ ಸಮಾರಂಭ ನಡೆಯಲಿದೆ. ಕ್ರಿಕೆಟ್ ಪಂದ್ಯಾಟದ ಪ್ರಧಾನ ಪ್ರಾಯೋಜಕಿ ಡಾ. ಆಶಾ ಶಂಕರ್ ಭಂಡಾರಿ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ. ಅನೇಕ ಮಂದಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದ ಹೇಮನಾಥ ಶೆಟ್ಟಿಯವರು, ಬಂಟ್ಸ್ ಲೆಜೆಂಡ್ ಟೀಮ್ ಮತ್ತು ಬಂಟ್ಸ್ ಪ್ರೀಮಿಯರ್ ಲೀಗ್ ಪಂದ್ಯಾಟ ತಂಡದ ಮಾಲಕತ್ವದ ಮೂಲಕ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಯುವ ಬಂಟರ ಸಂಘದ ಅಧ್ಯಕ್ಷ ಭಾಗ್ಯೇಶ್ ರೈ, ಬಂಟ್ಸ್ ಕ್ರಿಕೆಟ್ನ ಸಿಇಒ ದಯಾನಂದ ರೈ ಕೋರ್ಮಂಡ, ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕ್ರಿಕೆಟ್ ಟೂರ್ನಮೆಂಟ್ನ ಸಂಚಾಲಕ ಕಾರ್ತಿಕ್ ರೈ, ಬಂಟರ ಸಂಘದ ನಿರ್ದೇಶಕ ರವಿ ಪ್ರಸಾದ್ ಶೆಟ್ಟಿ ಉಪಸ್ಥಿತದ್ದರು.
ಚಿತ್ರ, ವರದಿ : ಉಮಾಪ್ರಸಾದ್ ರೈ ನಡುಬೈಲು





















































































































