ಫಾರ್ಚ್ಯೂನ್ ಅಕಾಡೆಮಿ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಆಡಳಿತಕ್ಕೊಳಪಟ್ಟ ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಹಾಗೂ ಬಿ.ಡಿ. ಶೆಟ್ಟಿ ಕಾಲೇಜು ಮಾಬುಕಳ ಇದರ ವಾರ್ಷಿಕೋತ್ಸವಕ್ಕೆ ಜೂನ್ 2 ರಂದು ನಿವೃತ್ತ ಪ್ರಾಂಶುಪಾಲ ಡಾ.ಬಿ ಜಗದೀಶ್ ಶೆಟ್ಟಿಯವರು ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವಿವೇಕಾನಂದರ ಆದರ್ಶ ತತ್ತ್ವ ಹಾಗೂ ಮೌಲ್ಯ ಅಳವಡಿಸಿಕೊಂಡು, ಸಮಾಜದಲ್ಲಿ ಪ್ರಾಮಾಣಿಕ ವ್ಯಕ್ತಿಯಾಗಿ ಬೆಳೆಯಬೇಕು ಎಂದರು.
ಫಾರ್ಚ್ಯೂನ್ ಅಕಾಡೆಮಿಕ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ದೈವಿಕ್ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಛೇರ್ಮನ್ ತಾರಾನಾಥ್ ಶೆಟ್ಟಿ ಅವರು ವಿವಿಧ ಸ್ವರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಚೇತನಾ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ, ವಿದ್ಯಾರ್ಥಿ ನಾಯಕರಾದ ಕೋಟೇಶ್, ಎಂ.ವಿ. ಹರಿಕೃಷ್ಣ ಪ್ರಾಂಶುಪಾಲೆ ಸ್ಮಿತಾ ಮೋಲ್, ಉಪನ್ಯಾಸಕರಾದ ಅನುರಾಧಾ, ಅಂಬಿಕಾ, ಪ್ರೀತಿಕಾ ಇದ್ದರು. ಉಪನ್ಯಾಸಕಿ ಅಮಿಷಾ ಸ್ವಾಗತಿಸಿ, ವೀಣಾ ನಿರೂಪಿಸಿದರು. ಉಪನ್ಯಾಸಕ ಸುಕುಮಾರ್ ಶೆಟ್ಟಿಗಾರ್ ವಂದಿಸಿದರು.