ಅಯ್ಯಪ್ಪ ಸ್ವಾಮಿ ಮಂದಿರ ಆಸೈಗೋಳಿ ವತಿಯಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮುಂದಾಳು, ಸಹಕಾರಿ ಧುರೀಣ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು ಅವರನ್ನು ಅಭಿನಂದಿಸಲಾಯಿತು. ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆಯ ನಿವೃತ ಮುಖ್ಯ ಶಿಕ್ಷಕರು ರವೀಂದ್ರ ರೈ ಅವರು ಅಭಿನಂದನಾ ಭಾಷಣ ಮಾಡಿ, ಸಮಾಜ ಸೇವೆಯಿಂದ ಸಂತೃಪ್ತಿ ಸಿಗುತ್ತದೆ. ಅಂಥ ವ್ಯಕ್ತಿತ್ವ ಕೃಷ್ಣ ಶೆಟ್ಟಿ ಅವರದ್ದಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ, ಯಾವುದೇ ಪ್ರತಿಫಲ ಬಯಸದೆ ಮಾಡಿದ ಸೇವೆ ಭಗವಂತನ ಸೇವೆಯಾಗಿ ಉಳಿಯುತ್ತದೆ ಎಂದರು.
ಅಯ್ಯಪ್ಪ ಸ್ವಾಮಿ ಮಂದಿರದ ಗೌರವ ಅಧ್ಯಕ್ಷ ಸುರೇಶ್ ಚೌಟ, ಅಸೈಗೋಳಿ ವ್ಯವಸಾಯ ಕ್ರೆಡಿಟ್ ಕೊ- ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಭಾಸ್ಕರ್ ದಾಸರಮೂಲೆ, ಮಂದಿರದ ಟ್ರಸ್ಟಿಗಳಾದ ಮಂಜುನಾಥ್ ಆಳ್ವ, ವಿಶ್ವನಾಥ್ ನಾಯ್ಕ್, ಗಣೇಶ್ ಸೈಟ್, ರಾಮಕೃಷ್ಣ ಪಟ್ಟೋರಿ, ಸುಧಾಕರ್ ಭಟ್, ಮಂದಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ರಮೇಶ್ ರೈ ಕೆಳಗಿನ ಮನೆ ಪಟ್ಟೋರಿ, ವಸಂತ್ ಪಟ್ಟೋರಿ, ಮಂದಿರದ ಗುರುಸ್ವಾಮಿ ಜಗನ್ನಾಥ್, ವನಿತಾ ಇದ್ದರು. ಸಮಿತಿಯ ಕೋಶಾಧಿಕಾರಿ ಆನಂದ ಕೆ.ಆಸೈಗೋಳಿ ಸ್ವಾಗತಿಸಿದರು. ಮಂದಿರದ ಪ್ರಧಾನ ಕಾರ್ಯದರ್ಶಿ ತ್ಯಾಗಮ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು.