ತುಳು ರಂಗಭೂಮಿ ಅನ್ಯ ಭಾಷಾ ರಂಗಭೂಮಿಗಳಿಗೆ ಸರಿಸಮನಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಪ್ರಾರಂಭಗೊಂಡ ಕೆಮ್ತೂರು ನಾಟಕ ಪ್ರಶಸ್ತಿಗಾಗಿ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ 22ನೇ ವರ್ಷದ ಸ್ಪರ್ಧೆಯನ್ನು 2024ರ ಜನವರಿ ಮೊದಲ ವಾರದಿಂದ ಉಡುಪಿಯಲ್ಲಿ ಆಯೋಜಿಸಲಾಗಿದೆ.
ದೇಶದ ಯಾವುದೇ ಪ್ರದೇಶದ ಯೋಗ್ಯ ತುಳು ಹವ್ಯಾಸಿ ನಾಟಕ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಗರಿಷ್ಠ 7 ನಾಟಕಗಳನ್ನು ಆಯ್ಕೆ ಮಾಡಲಾಗುವುದು.
ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳೊಂದಿಗೆ ರೂ.20,000/-, ರೂ.15,000/- ಮತ್ತು ರೂ.10,000/- ನಗದು ಬಹುಮಾನ ಅಲ್ಲದೇ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ಪ್ರಥಮ ರೂ.1,000/- ಮತ್ತು ದ್ವಿತೀಯ, ತೃತೀಯ ಬಹುಮಾನ ಕೊಡಲಾಗುವುದು. ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ ರೂ.5,000/- ಮತ್ತು ಹೊರರಾಜ್ಯದ ತಂಡಗಳಿಗೆ ರೂ.10,000/- ಭತ್ತೆಯೊಂದಿಗೆ ಊಟ ಉಪಚಾರ ಮತ್ತು ಉತ್ತಮ ಸೌಕರ್ಯ ಒದಗಿಸಲಾಗುವುದು.
ಭಾಗವಹಿಸಲಿಚ್ಛಿಸುವ ಕ್ರಿಯಾಶೀಲ ತುಳು ಹವ್ಯಾಸಿ ರಂಗತಂಡಗಳು ಮುದ್ರಿತ ಪ್ರವೇಶ ಪತ್ರ ಮತ್ತು ನಿಯಮಾವಳಿಗಳ ಬಗ್ಗೆ ಬಿ. ಪ್ರಭಾಕರ ಭಂಡಾರಿ, ‘ಪ್ರಕೃತಿ’, 5-940, 76ನೇ ಬಡಗುಬೆಟ್ಟು, ಬೈಲೂರು, ಉಡುಪಿ- 576101 ವಿಳಾಸಕ್ಕೆ ಬರೆಯಬೇಕು. ಪ್ರವೇಶ ಪತ್ರಗಳನ್ನು ಸ್ವೀಕರಿಸಲು ದಿನಾಂಕ 05-11-2023 ಕೊನೆಯ ದಿನವಾಗಿರುತ್ತದೆ.