ಕುಂತಳ ನಗರದ ಗ್ರಾಮೀಣ ಬಂಟರ ಸಂಘದ ಡೆವಲೆಪ್ಮೆಂಟ್ ಸೆಂಟರ್ನಲ್ಲಿ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮದ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು.
ಅವರು ಈ ಸಂದರ್ಭ ಮಾತನಾಡಿ, ಉಚಿತವಾಗಿ ಡಿಜಿಟಲ್ ಸಾಕ್ಷರತೆ, ಕೌಶಲ್ಯ ಅಭಿವೃದ್ಧಿ, ಉದ್ಯೋಗಾಧಾರಿತ ತರಬೇತಿ ನೀಡುವ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಇದರ ಸಿಲ್ಕ್ ಡೆವಲಪ್ ಮೆಂಟ್ ಸೆಂಟರ್ ನ ಸೇವೆಯು ಮಕ್ಕಳ ಭವಿಷ್ಯವನ್ನು ಕಟ್ಟಿಕೊಳ್ಳಲು ಪರಿಣಾಮಕಾರಿ ಹಾಗೂ ಮಾದರಿ ಯೋಜನೆಯಾಗಿದೆ ಎಂದರು.
ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಟ್ರಸ್ಟ್ ವತಿಯಿಂದ ಈಗಾಗಲೇ 200 ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ನೀಡಲಾಗಿದೆ. ರೈತರಿಗಾಗಿ ಕೃಷಿ ಮೇಳ ಮತ್ತು ಉದ್ಯೋಗ ಮೇಳವನ್ನು ಎರಡನೇ ಬಾರಿಗೆ ಆಯೋಜಿಸಲಾಗುತ್ತದೆ ಎಂದರು.
ವೇದಿಕೆಯಲ್ಲಿ ಕೆ.ವಿ.ಕೆ ಬ್ರಹ್ಮಾವರದ ನಿರ್ದೇಶಕ, ಹಿರಿಯ ವಿಜ್ಞಾನಿ ಡಾ. ಧನಂಜಯ್ ಬಿ., ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಅಲ್ ಕಾರ್ಗೋ ಲಾಜಿಸ್ಟಿಕ್ಸ್ ನ ಎಕ್ಸಿಕ್ಯೂಟಿವ್ ಸಿಎಸ್ಆರ್ ಸವಿಸ್ತಾರ್ ಆಳ್ವ, ಕೃಷಿಕ ಗಣೇಶ್ ಶೆಟ್ಟಿ, ಉಡುಪಿ ಗ್ರಾಮೀಣ ಬಂಟರ ಸಂಘದ ಮಾಜಿ ಅಧ್ಯಕ್ಷ, ಟ್ರಸ್ಟಿಗಳಾದ ಡಾ. ಎಚ್. ಬಿ. ಶೆಟ್ಟಿ ಮತ್ತು ಹೇಮಂತ್ ಶೆಟ್ಟಿ, ಜಗದೀಶ್ ಹೆಗ್ಡೆ, ರಂಜಿನಿ ಹೆಗ್ಡೆ, ಹರೀಂದ್ರ ಹೆಗ್ಡೆ, ರಮೇಶ್ ಶೆಟ್ಟಿ ಮಣಿಪುರ, ಸತೀಶ್ ಶೆಟ್ಟಿ ಮಣಿಪುರ, ಸದಾನಂದ ಶೆಟ್ಟಿ ಮಾರ್ಪಳ್ಳಿ, ಗೋಪಾಲ ಶೆಟ್ಟಿ ಬೆಳ್ಳೆ, ಗಿರೀಶ್ ಶೆಟ್ಟಿ ಪಳ್ಳಿ, ಅಶೋಕ್ ಶೆಟ್ಟಿ ಕೆಮ್ತೂರು ಇದ್ದರು.
ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಟ್ರಸ್ಟ್ ಕೋಶಾಧಿಕಾರಿ ವಿಜಿತ್ ಶೆಟ್ಟಿ ವಂದಿಸಿದರು. ಟ್ರಸ್ಟಿ, ಪ್ರೋಗ್ರಾಂ ಕೋ ಆರ್ಡಿನೇಟರ್ ಪದ್ಮನಾಭ ಹೆಗ್ಡೆ ನಿರೂಪಿಸಿದರು.