Author: admin

ಚಿತ್ರ, ವರದಿ : ಕಿರಣ್ ಬಿ ರೈ ಕರ್ನೂರು ಪುಣೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ  ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ  ಸುನಿಲ್ ಕುಮಾರ್ ಇವರ ಪರಿಕಲ್ಪನೆಯೊಂದಿಗೆ ಕರ್ನಾಟಕದ  ೬೭ ನೇ ರಾಜ್ಯೋತ್ಸವವನ್ನು ಒಂದು ವಿಶೇಷ ರೀತಿಯಲ್ಲಿ ಆಚರಿಸಿ ವಿಶ್ವದಾದ್ಯಂತ ಇರುವ ಕನ್ನಡಿಗರನ್ನು ನಮ್ಮ ಭಾಷಾ ಅಸ್ಮಿತತೆಯೊಂದಿಗೆ ಒಗ್ಗೂಡಿಸುವ ಉದ್ದೇಶ ಹೊಂದಿದ ಕೋಟಿ ಕಂಠ ಗಾಯನ ಎನ್ನುವುದು ಒಂದು ಅರ್ಥಪೂರ್ಣವಾದ ಕಾರ್ಯಕ್ರಮವಾಗಿದ್ದು ನಾವು ಪುಣೆಯಲ್ಲಿರುವ ಕನ್ನಡಿಗರೆಲ್ಲ ಸೇರಿಕೊಂಡು ಈ ಸಂಭ್ರಮದಲ್ಲಿ ಭಾಗಿಗಳಾಗುತ್ತಿರುವುದು ನಮಗೆಲ್ಲ ಹೆಮ್ಮೆಯ ಕ್ಷಣಗಳಾಗಿವೆ . ಇದೊಂದು ಸತ್ಚಿಂತನೆಯ ಕಾರ್ಯಕ್ರಮವಾಗಿದ್ದು ನಾವು ಮಹಾರಾಷ್ಟ್ರದ ಮಣ್ಣಿನಲ್ಲಿದ್ದರೂ ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಯೊಂದಿಗೆ ಬೆರೆತುಕೊಂಡು  ನಮ್ಮ  ನಾಡಿನ ಭಾಷೆ ಹಾಗೂ ಸಂಸ್ಕೃತಿಯನ್ನೂ ಪೋಷಿಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದೇವೆ . ಇಂತಹ ಕಾರ್ಯಕ್ರಮ ನಮ್ಮ ರಾಜ್ಯೋತ್ಸವದ  ಮೆರಗನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ನುಡಿದರು . ಅವರು  ಕರ್ನಾಟಕ…

Read More

ನಿವೃತ್ತ ಶಿಕ್ಷಕಿ ಪುಷ್ಪಲತಾ ಬಾಲಕೃಷ್ಣ ಶೆಟ್ಟಿ ಅವರಿಗೆ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯಿಂದ ಸುರತ್ಕಲ್ ವಲಯ ಸಂಘಟನೆಯ ಕಾರ್ಯಕ್ರಮದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ‌ಪುಷ್ಪಲತಾ ಶೆಟ್ಟಿ ಅವರು ಮಹಿಳಾ ವೇದಿಕೆಯ ಮಾಜೀ ಕಾರ್ಯದರ್ಶಿಯಾಗಿ ದುಡಿದಿದ್ದರು. ಮಹಿಳಾ ವೇದಿಕೆ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಮಹಿಳಾ ವೇದಿಕೆಯನ್ನು ಸಂಘಟನಾತ್ಮಕವಾಗಿ ಕಟ್ಟಿ ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇವರ ಹಿರಿತನ ಮತ್ತು ಮಹಿಳಾ ವೇದಿಕೆಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಅವರನ್ನು ಮಹಿಳಾ ವೇದಿಕೆಯಿಂದ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಪುಷ್ಪಲತಾ ಶೆಟ್ಟಿ ಅವರು ಮಾತನಾಡಿ ಮಹಿಳಾ ವೇದಿಕೆ ಇಂದು ಸಂಘಟನಾತ್ಮಕವಾಗಿ ಬೆಳೆದಿದೆ. ಮಹಿಳೆಯರ ಒಗ್ಗಟ್ಟು ಇದೇ ರೀತಿ ಮುಂದುವರಿಯಲಿ. ಸಂಘದ ಬೆಳವಣಿಗೆಗೆ ಮಹಿಳಾ ವೇದಿಕೆ ಸಹಕಾರಿಯಾಗಿ ಕೆಲಸ ಮಾಡಲಿ ಎಂದರು. ಜೊತೆ ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ ಸಂಘ ಮತ್ತು ಸಂಘಟನೆ ವಿಚಾರದಲ್ಲಿ ಕಾರ್ಯಾಗಾರ ನಡೆಸಿದರು. ಸಭೆಯ ಅಧ್ಯಕ್ಷತೆಯನ್ನು ಮಹಿಳಾ ವೇದಿಕೆಯ ಅಧ್ಯಕ್ಷೆ ಚಿತ್ರಾ ಜೆ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ವೇದಿಕೆಯ ಉಪಾಧ್ಯಕ್ಷೆ…

Read More

ಮೆಲೋಡಿ ಹಾಡುಗಳು ಎಂದಿಗೂ ಜನರ‌ ಜೀವನದ ಅವಿಭಾಜ್ಯ ಅಂಗವಾಗಿರುತ್ತವೆ. ಎಲ್ಲಾ ಕಾಲದಲ್ಲೂ ಎಲ್ಲರನ್ನೂ ಆಕರ್ಷಿಸುವ ಹಲವಾರು ಮೆಲೋಡಿ ಹಾಡುಗಳ ಗುಂಪಿಗೆ “ರವಿಕೆ ಪ್ರಸಂಗ” ಚಿತ್ರದ “ಮನಸಲಿ ಜೋರು ಕಲರವ” ಎಂಬ ಅದ್ಭುತವಾದ ಮೆಲೋಡಿ ಹಾಡನ್ನು ನೂರಾರು ಎವರ್ ಗ್ರೀನ್ ಸೂಪರ್ ಹಿಟ್ ಮೆಲೋಡಿ ಹಾಡುಗಳನ್ನು ನೀಡಿರುವ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಶೆಟ್ಟಿ ಅವರು ಬಿಡುಗಡೆ‌ ಮಾಡಿದ್ದಾರೆ. ಈ ವರ್ಷದ ಅತ್ಯುತ್ತಮ ಮೆಲೋಡಿ ಹಾಡುಗಳ ಪಟ್ಟಿಯಲ್ಲಿ ಅಗ್ರಸ್ಥಾನ‌ ಪಡೆಯುವ ಎಲ್ಲಾ ಅಂಶಗಳನ್ನು ಹೊಂದಿರುವ ಈ ಹಾಡಿಗೆ ಕಿರಣ್ ಕಾವೇರಪ್ಪ ಅವರ ಅದ್ಭುತ ಸಾಹಿತ್ಯ, ಮಾನಸ ಹೊಳ್ಳ ಅವರು ಮಧುರವಾದ ಧ್ವನಿ ಹಾಗೂ ವಿನಯ್ ಶರ್ಮಾ ಅವರ ಇಂಪಾದ ಸಂಗೀತ ಇದೆ. ಸಂತೋಷ್ ಕೊಡಂಕೇರಿ ಅವರ ಚಿತ್ರಕಥೆ ನಿರ್ದೇಶನದಲ್ಲಿ, ಪಾವನ ಸಂತೋಷ್ ಅವರ ಕಥೆ ಸಂಭಾಷಣೆ ಇರುವ “ರವಿಕೆ ಪ್ರಸಂಗ” ಚಿತ್ರವನ್ನು “ದೃಷ್ಟಿ ಮಿಡಿಯಾ & ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿಲಾಗಿದೆ. ಚಿತ್ರದ ಎಲ್ಲಾ ಕೆಲಸಗಳು ಮುಕ್ತಾಯವಾಗಿದ್ದು ಬಿಡುಗಡೆಯ ಹೊಸ್ತಿಲಲ್ಲಿ ಜನರನ್ನು ರಂಜಿಸಲಿದೆ.

Read More

ವಿಶ್ವ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ವಿಶ್ವ ಬಂಟ ಸಮ್ಮೇಳನದ ಸಮಾರೋಪ ಸಮಾರಂಭ ಅಮ್ಮಣ್ಣಿ ರಾಮಣ್ಣ ತೆರೆದ ಮೈದಾನದಲ್ಲಿನ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ರವಿವಾರ ಸಂಜೆ ನೆರವೇರಿತು. ಕಾರ್ಯಕ್ರಮದ ವೇದಿಕೆಯಲ್ಲಿ ರಾಜ್ಯ ಗೃಹಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು, “ನಾನು ಬಹಳ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಆಡು ಮುಟ್ಟದ ಸೊಪ್ಪಿಲ್ಲ, ಬಂಟರು ಮುಟ್ಟದ ಕ್ಷೇತ್ರವೇ ಇಲ್ಲ. ಕೈಗಾರಿಕೋದ್ಯಮ, ಬ್ಯಾಂಕಿಂಗ್ ಕ್ಷೇತ್ರ, ಸಿನಿಮಾ, ಕಲೆ, ಕೃಷಿ, ಹೋಟೆಲ್ ಹೀಗೆ ಎಲ್ಲದರಲ್ಲೂ ಬಂಟರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಮ್ಮ ದೇಶಕ್ಕೆ ಕೀರ್ತಿಯನ್ನು ತಂದವರು ಬಂಟರು. ಅವರನ್ನು ಎಷ್ಟು ಹೊಗಳಿದರೂ ಅತಿಶಯವಾಗಲಾರದು. ಎಲ್ಲರನ್ನು ಪ್ರೀತಿಸಿ ಗೌರವಿಸುವ ಬಂಟರ ಸಮ್ಮೇಳನ ಯಶಸ್ವಿಯಾಗಲಿ” ಎಂದರು. “ಮಂಗಳೂರು ಬೆಂಗಳೂರು ಕಾರಿಡಾರ್ ಆದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ವೇಗವಾಗಿ ಅಭಿವೃದ್ಧಿಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಟ ನಿಗಮ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ. ನಾವು ಕೊಟ್ಟ ಮಾತಿನಂತೆ…

Read More

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆಯು ಸೆಪ್ಟೆಂಬರ್ 10 ಬೆಳಿಗ್ಗೆ ಗಂಟೆ 10.00ಕ್ಕೆ ಮೂಡಬಿದಿರೆಯ ಸೃಷ್ಠಿ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ. ನೂತನ ಕಂಬಳ ಜಿಲ್ಲಾ ಸಮಿತಿ ರಚನೆ ಹಾಗೂ 2023-24 ನೇ ಋತುವಿನ ವಿವಿಧ ಕಂಬಳದ ದಿನಾಂಕಗಳನ್ನು ಅದೇ ದಿನ ನಿರ್ಧರಿಸಲಾಗುವುದು. ಕಂಬಳ ವ್ಯವಸ್ಥಾಪಕರು, ಕೋಣಗಳ ಯಜಮಾನರು, ತೀರ್ಪುಗಾರರು, ಓಟಗಾರರು, ಕಂಬಳ ಸಹಕಾರಿ ವರ್ಗದವರು ಭಾಗವಹಿಸುವಂತೆ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳ್ ರೋಹಿತ್‌ ಹೆಗ್ಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಅ.೧೩ ರಂದು ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಆಟಿದ ಕೂಟ ಹಾಗೂ ಚಿನ್ನದ ಪದಕ ನೀಡಿ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ಪುತ್ತೂರು ಎಂ. ಸುಂದರರಾಮ್‌ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ ಎಂದು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್‌ ರೈ ಬಾಲ್ಯೊಟ್ಟು ಹೇಳಿದರು. ಅವರು ಜು. ೧೮ ರಂದು ಪುತ್ತೂರು ಬಂಟರ ಭವನದಲ್ಲಿ ಜರಗಿದ ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ ಬಂಟರ ಸಂಘದ ಆಶ್ರಯದಲ್ಲಿ ಜರಗಿದ ಶಾಸಕ ಆಶೋಕ್‌ ರೈ ಅವರ ಅಭಿನಂದನಾ ಸಮಾರಂಭವು ಅಭೂತ ಪೂರ್ವ ಯಶಸ್ಸು ಕಂಡಿದ್ದು, ಇದೇ ರೀತಿಯಲ್ಲಿ ಮಂದೆಯೂ ಬಂಟ ಸಮಾಜ ಬಾಂಧವರು ಹೆಚ್ಚಿನ ಪ್ರೋತ್ಸಾಹವನ್ನು ನೀಡುವಂತೆ ವಿನಂತಿಸಿದರು. ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಬೂಡಿಯಾರ್‌ ರಾಧಾಕೃಷ್ಣ ರೈರವರು ಮಾತನಾಡಿ ಬಂಟರ ಸಂಘದಿಂದ ಸಮಾಜದಲ್ಲಿ ಸಾಧನೆ ಮಾಡಿದವರು ತುಂಬಾ ಮಂದಿ ಇದ್ದಾರೆ ಅವರನ್ನು ಗುರುತಿಸಲು ಇನ್ನೂ ಹೆಚ್ಚಿನ ಮಂದಿ ದಾನಿಗಳು ಮುಂದೆ ಬರುವಂತೆ ವಿನಂತಿಸಿದರು. ಬಂಟರ ಯಾನೆ…

Read More

ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇಲ್ಲಿ ಪದಗ್ರಹಣ ಸಮಾರಂಭ ಮತ್ತು ಮಹಿಳಾ ವೇದಿಕೆಗೆ 25 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಮಾಜಿ ಅಧ್ಯಕ್ಷರುಗಳನ್ನು ಅಭಿನಂದಿಸುವ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು. ಮಹಿಳಾ ವೇದಿಕೆಯ ನಿಕಟಪೂರ್ವ ಅಧ್ಯಕ್ಷೆ ಚಿತ್ರಾ ಜೆ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ದಿವಂಗತ ಮಾಜಿ ಅಧ್ಯಕ್ಷೆ ಪುಷ್ಪಾ ಶೇಣವ ಅವರು ಮಹಿಳಾ ವೇದಿಕೆಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಲಾಯಿತು. ಮಹಿಳಾ ವೇದಿಕೆಯ ಮಾಜಿ ಅಧ್ಯಕ್ಷರುಗಳಾದ ಅಂಜನಾ ಶೆಟ್ಟಿ, ಮಮತಾ ಶೆಟ್ಟಿ, ಆಶಾ ಆರ್ ಶೆಟ್ಟಿ, ಚಂದ್ರಕಲಾ ಬಿ ಶೆಟ್ಟಿ, ಬೇಬಿ ಎನ್ ಶೆಟ್ಟಿ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪುಷ್ಪ ಶೇಣವ ಅವರ ಸ್ಮರಣಿಕೆಯನ್ನು ಅವರ ಪುತ್ರಿ ಸರಾಯು ಶೆಟ್ಟಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ 2021-23 ನೇ ಸಾಲಿನಲ್ಲಿ ಅಧ್ಯಕ್ಷೆಯಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿರುವ ಚಿತ್ರಾ ಜೆ ಶೆಟ್ಟಿ ಅವರ ಸಂಘಟನಾ ಕಾರ್ಯವನ್ನು ಶ್ಲಾಘಿಸಿ ಸನ್ಮಾನಿಸಲಾಯಿತು. 2023-25 ನೇ ಸಾಲಿನ ಮಹಿಳಾ ವೇದಿಕೆಯ ಪದಾಧಿಕಾರಿಗಳಾದ ಅಧ್ಯಕ್ಷೆ ಭವ್ಯಾ…

Read More

ಈಗಾಗಲೇ ಹಲವಾರು ಚಿತ್ರೋತ್ಸವದಲ್ಲಿ ಪ್ರಶಂಸೆಗೆ ಒಳಗಾದ ಬಹ್ಮಕಮಲ ಸಿನಿಮಾಕ್ಕೆ ಮತ್ತೊಂದು ಗರಿ ಬಂದಿದೆ. ಹೌದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್​ ಗೆ ಆಯ್ಕೆಯಾಗಿದೆ. ದಾರಿ ಯಾವುದಯ್ಯ ವೈಕುಂಠಕ್ಕೆ ಚಿತ್ರದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಗಮನ ಸೆಳೆದ ನಿರ್ದೇಶಕ ಸಿದ್ದು ಪೂರ್ಣಚಂದ್ರ ಬ್ರಹ್ಮಕಮಲ ಚಿತ್ರ ಮಾಡಿದ್ದಾರೆ. ಬ್ರಹ್ಮಕಮಲ ಚಿತ್ರ ಬಿಡುಗಡೆಗೂ ಮುಂಚೆ ಸಾಕಷ್ಟು ಫಿಲ್ಮ್ ಫೆಸ್ಟಿವಲ್​ಗಳಲ್ಲಿ ಪ್ರದರ್ಶನಗೊಳ್ಳುವ ಮೂಲಕ ಸಿನಿ ವಿಮರ್ಶಕರ ಮೆಚ್ಚುಗಗೆ ಪಾತ್ರವಾಗಿದೆ. ಈಗಾಗಲೇ ಫ್ರಾನ್ಸ್​ನಲ್ಲಿ ನಡೆದ ಈಡಿಪ್ಲೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ, ಸಿಡ್ನಿಯ ವಂಡರ್ ಲ್ಯಾಂಡ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಬೆಸ್ಟ್ ಫೀಚರ್ ಫಿಲ್ಮ್ ಪ್ರಶಸ್ತಿ, ನೇಪಾಳದ ಓಲ್ಡ್ ಮಂಕ್ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್​ನಲ್ಲೂ ಬೆಸ್ಟ್ ಫೀಚರ್ ಫಿಲ್ಮ್ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಲಭಿಸಿದೆ. ಇಂಡೋ‌ ಸಿಂಗಪುರ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಅದ್ವಿತಿ ಶೆಟ್ಟಿಗೂ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದೆ. ದಾದಾ ಸಾಹೇಬ್ ಫಾಲ್ಕೆ, ಅರುಣೋದಯ, ಕಲಕರಿ, ಚಲನಚಿತ್ರೋತ್ಸವಗಳನ್ನು…

Read More

ಈ ಬಾರಿ ಮಾತ್ರ ಚುನಾವಣೆಗೆ ನೀವೆಲ್ಲರೂ ಮತ ಕೇಳಲು ಜನರ ಬಳಿ ಹೋಗಿ ನನಗೆ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಿ. ಸತ್ಯದ ಹಾದಿಯಲ್ಲಿ ಅಭಿವೃದ್ಧಿ ಏನು ಎಂಬುವನ್ನು ಮಾಡಿ ತೋರಿಸುತ್ತೇನೆ. ಮುಂದಿನ 5 ವರ್ಷ ಬಿಟ್ಟು ಯಾರೂ ಕೂಡಾ ಮತ ಕೇಳಲು ಹೋಗುವುದು ಬೇಡ. ಜನ ಅಭಿವೃದ್ಧಿ ನೋಡಿ ಅವರೇ ಸ್ವಯಂ ಪ್ರೇರಿತವಾಗಿ ಮತದಾನ ಮಾಡುವಂತೆ ಕರ್ನಾಟಕದಲ್ಲಿ ಕಾರ್ಕಳದ ಚರಿತ್ರೆ ನಿರ್ಮಾಣ ಮಾಡುತ್ತೇನೆ ಎಂದು ಕಾರ್ಕಳ ವಿಧಾನ ಸಭಾ ಕೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮುನಿಯಾಲು ಉದಯಕುಮಾರ್‌ ಶೆಟ್ಟಿ ಹೇಳಿದರು. ಅವರು ಪಳ್ಳಿ – ನಿಂಜೂರಿನಲ್ಲಿ ಬೂತ್‌ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅಭಿನಂದನ್‌ ಶೆಟ್ಟಿ ಹಾಗೂ ಜಗದೀಶ್‌ ಪೂಜಾರಿ ಇವರ ಮುಂದಾಳತ್ವದಲ್ಲಿ 106 ಮಂದಿ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ಬಾರಿ ಕಾರ್ಕಳ ಜನ ಬದಲಾವಣೆ ಬಯಸಿದ್ದಾರೆ ಎನ್ನುವುದು ಜನ ಬೆಂಬಲದಿಂದ ಗೊತ್ತಾಗುತ್ತಿದೆ. ಈಗಾಗಲೇ ಕಾರ್ಕಳ ಹಾಗೂ ಹೆಬ್ರಿ ಭಾಗದಲ್ಲಿ ನೂರಾರು ಬಿಜೆಪಿ…

Read More

ಬಂಟ ಸಮಾಜದ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವ ಕಾರ್ಯ ಅತಿ ಅಗತ್ಯವಾಗಿದ್ದು, ಗುತ್ತು ಮನೆತನದ ಗೌರವವನ್ನು ಉಳಿಸಿಕೊಂಡು ಬರುವ ಜವಾಬ್ದಾರಿ ಇದೆ.‌ ಜಾಗತಿಕ ಬಂಟರ ಸಂಘದ ವತಿಯಿಂದ ಮನೆ ಕೊಡುವ ಕಾರ್ಯ, ಮಕ್ಕಳ ಶಿಕ್ಷಣ, ಆರೋಗ್ಯ, ವಿವಾಹಕ್ಕೆ ನೆರವು ನೀಡುವ ಕಾರ್ಯ ನಡೆಯುತ್ತಿದೆ ಎಂದು ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು. ಅವರು ತುಂಬೆ ವಳವೂರಿನ ಬಂಟವಾಳದ ಬಂಟರ ಭವನದಲ್ಲಿ ನಡೆದ ಬಂಟ್ವಾಳ ತಾಲೂಕು ಬಂಟರ ಸಂಘದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಂಟ್ವಾಳ ಬಂಟರ ಭವನದ ನಮ್ಮ ದೊಡ್ಡ ಶಕ್ತಿಯಾಗಿ ಕಂಗೊಳಿಸುತ್ತಿದೆ‌ ಎಂದರು. ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಉದ್ಯಮಿ ಏರ್ಯ ಬಾಲಕೃಷ್ಣ ಹೆಗ್ಡೆ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಅರಿಯುವ ಕಾರ್ಯ ಅಗತ್ಯವಾಗಿದ್ದು, ಮಕ್ಕಳಿಗೆ ಅದನ್ನು ಕಲಿಸುವ ಕಾರ್ಯ ಅತಿ ಅಗತ್ಯ ಎಂದರು. ಹುಬ್ಬಳ್ಳಿ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ, ಬಂಟ್ವಾಳ ಬಂಟರ ಸಂಘ ಶಿಸ್ತಿನ ಮೂಲಕ ಖ್ಯಾತಿ…

Read More