ಪುಣೆ ; ಯೋಗ ಆಧ್ಯಾತ್ಮಿಕ ಚಿಕಿತ್ಸೆಯಾಗಿ ಮನುಷ್ಯನ ವಿಕಾಸದ ಪ್ರಕ್ರೀಯೆಗೆ ಸಾರ್ವರ್ತಿಕ ಪ್ರಾಯೋಗಿಕದ ಒಂದು ವಿಧಾನ ,ವ್ಯಕ್ತಿಯ ಶಕ್ತಿಯನ್ನು ಸಂತುಲಿತ ರೀತಿಯಲ್ಲಿ ಸುಧಾರಿಸಲು ಮತ್ತು ಸದೃಡಗೊಳಿಸುವಲ್ಲಿ ರಾಮ ಬಾಣವಾಗಿ ಯೋಗ ಇಂದು ನಮ್ಮ ದೇಶ ಮತ್ತು ವಿದೇಶದಲ್ಲಿ ಪ್ರಚಲಿತವಾಗಿದೆ .ಮಾನ್ಯ ಮೋದಿಯವರ ಸಂಕಲ್ಪದಂತೆ ಭಾರತದಲ್ಲಿ ಯೋಗ ದಿನಾಚರಣೆಯ ಪರ್ವ ಶುರುವಾಗಿ ಇಂದು ಪ್ರಪಂಚದ ಮೂಲೆ ಮೂಲೆಯಲ್ಲೂ ಯೋಗಕ್ಕೆ ಮಾನ್ಯತೆ ಸಿಕ್ಕೀದೆ ಯೋಗದಿಂದ ಆಗುವ ಅನುಕೂಲಗಳನ್ನು ಅರಿತಿದ್ದಾರೆ .ನಮ್ಮ ದೇಶದ ಪ್ರತಿ ಕಡೆಯೂ ಯೋಗದ ಮಹತ್ವವನ್ನು ಅರಿತವರು ಅರೋಗ್ಯ ಪೂರ್ಣ ಜೀವನ ನಡೆಸುತಿದ್ದಾರೆ . ಆರೋಗ್ಯದ ದೃಷ್ಟಿಯಲ್ಲಿ ಭಕ್ತಿ ,ಜಪ ,ಕರ್ಮ,ರಾಜ ,ನಾಡಿ ,ಕುಂಡಲಿನಿ ,ಮತ್ತು ಅಷ್ಟಾಂಗ ಯೋಗ ಮೊದಲಾದ ಯೋಗಗಳ ಹಾದಿಗಳ ಮೂಲಕ ಮನುಷ್ಯನ ಶಾರೀರಿಕ ಸಮತೋಲನ ಕಾಪಾಡುವಲ್ಲಿ ಯೋಗ ಮಹತ್ತರವಾದ ಸ್ಥಾನವನ್ನು ಪಡೆದಿದೆ . ನಮ್ಮ ಮಕ್ಕಳಿಗೆ ಸಣ್ಣ ಪ್ರಾಯದಲ್ಲೇ ಯೋಗದ ಮಹತ್ವವನ್ನು ತಿಳಿಸುವ ಅಗತ್ಯತೆ ಇದೆ .ಒಟ್ಟಾರೆಯಾಗಿ ಯೋಗ ನಮ್ಮ ದೇಹದ ಆರೋಗ್ಯಕ್ಕೆ ಪರಿಪೂರ್ಣ ಶಕ್ತಿಯನ್ನು ನೀಡುವ ಪ್ರಕ್ರಿಯೆಯಂತೆ ಕೆಲಸ ಮಾಡುತ್ತದೆ .ನಮ್ಮ ಬಂಟ್ಸ್ ಅಸೋಸಿಯೇಷನ್ ನ ಕೆಮ್ತೂರು ಸುಧಾಕರ್ ಶೆಟ್ಟಿಯವರು ಭಾರತೀಯ ಯೋಗ ಸಂಸ್ಥಾನ ಪುಣೆ ವಿಭಾಗದ ಮೂಲಕ ಉಚಿತವಾಗಿ ಯೋಗ ತರಗತಿಗಳನ್ನು ನಡೆಸುತಿದ್ದು ಉತ್ತಮ ಘನ ಸೇವೆಯನ್ನು ಮಾಡುತಿದ್ದಾರೆ ಇಂದು ಕೂಡಾ ಅವರ ಮಾರ್ಗದರ್ಶನದಲ್ಲಿ ಯೋಗ ದಿನಾಚರಣೆ ಆಚರಿಸುತಿದ್ದೇವೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರು ನುಡಿದರು .
ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ವತಿಯಿಂದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 21 ಬುಧವಾರದಂದು ವಾನ್ ವಾಡಿಯ ಮಹಾತ್ಮ ಪುಲೆ ಸಾಂಸ್ಕ್ರತಿಕ ಭವನ ದಲ್ಲಿ ,ಭಾರತೀಯ ಯೋಗ ಸಂಸ್ಥಾನದ ಪುಣೆ ವಿಭಾಗದ ತರಬೇತುದಾರರಾದ ಕೆಮ್ತೂರು ಸುಧಾಕರ್ ಶೆಟ್ಟಿ ಯವರ ನೇತ್ರತ್ವದಲ್ಲಿ ಯೋಗ ದಿನಾಚಾರಣೆ ನಡೆಯಿತು . ಮೊದಲಿಗೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಗಣೇಶ್ ಹೆಗ್ಡೆ ಮಹಿಳಾ ವಿಬಾಗದ ಅಧ್ಯಕ್ಷೆ ಉಷಾ ಯು .ಶೆಟ್ಟಿ ಮತ್ತು ಪದಾಧಿಕಾರಿಗಳು ಭಾರತೀಯ ಯೋಗ ಸಂಸ್ಥಾನದ ಪುಣೆ ವಿಭಾಗದ ಸದಸ್ಯರು ಸೇರಿ ದೀಪ ಪ್ರಜ್ವಲಿಸಿ ಯೋಗ ದಿನಾಚರಣೆಗೆ ಚಾಲನೆ ನೀಡಿದರು .ಶ್ರೀಮತಿ ಲತಾ ಎಸ್.ಶೆಟ್ಟಿ ಪ್ರಾರ್ಥನೆ ಗೈದರು , ಪ್ರಧಾನ ಕಾರ್ಯದರ್ಶಿ ಅರವಿಂದ್ ರೈ ಸ್ವಾಗತಿಸಿದರು . ಜೊತೆ ಕಾರ್ಯದರ್ಶಿ ಕೆಮ್ತೂರು ಸುಧಾಕರ್ ಶೆಟ್ಟಿಯವರು ಯೋಗ ಮತ್ತು ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಪ್ರಗತಿಯನ್ನು ಹೊಂದುವುದಲ್ಲದೆ ನಮ್ಮ ಜೀವನ ಶೈಲಿಯನ್ನು ಕೂಡಾ ಪರಿವರ್ತಿಸುವಲ್ಲಿ ಸಹಕರಿಸುತ್ತದೆ ಎಂದು ಯೋಗದ ಬಗ್ಗೆ ವಿವಿರಣೆ ನೀಡಿದರು .
ನಂತರ ಸುಧಾಕರ ಶೆಟ್ಟಿ ಯವರ ಮಾರ್ಗದರ್ಶನದಲ್ಲಿ ಭಾರತೀಯ ಯೋಗ ಸಂಸ್ಥಾನದ ಪುಣೆ ವಿಭಾಗದ ಸದಸ್ಯರ ಸಹಭಾಗಿತ್ವದಲ್ಲಿ ಯೋಗದ ವಿವಿದ ಆಸನಗಳನ್ನು ಮತ್ತು ಪ್ರಾಣಾಯಾಮವನ್ನು ಸೇರಿದ ಎಲ್ಲಾ ಸಮಾಜ ಭಾಂದವರು ಮಾಡಿದರು . ಈ ಸಂದರ್ಭದಲ್ಲಿ ಬಂಟ್ಸ್ ಅಸೋಸಿಯೇಷನ್ ಪುಣೆ ಯುವ ವಿಬಾಗದವರು ಬಾಗವಹಿಸಿದ ಎಲ್ಲಾ ಯೋಗಾಭ್ಯಾರ್ಥಿಗಳಿಗೆ ಸಸಿಗಳನ್ನೂ ವಿತರಿಸಿದರು . ಈ ಸಂದರ್ಭದಲ್ಲಿ ಪುಣೆ ಬಂಟ್ಸ್ ಅಸೋಸಿಯೇಷನ್ ನ ಪ್ರಮುಖರಾದ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ ,ಉಪಾಧ್ಯಕ್ಷರುಗಳಾದ ಸತೀಶ್ ರೈ ಕಲ್ಲಂಗಳ ಗುತ್ತು,ರೋಹಿತ್ ಶೆಟ್ಟಿ ನಗ್ರಿಗುತ್ತು ,ಕೋಶಾಧಿಕಾರಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ ,ಸಾಂಸ್ಕ್ರತಿಕ ವಿಬಾಗದ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ,ಜೊತೆ ಕೋಶಾಧಿಕಾರಿ ರವೀಂದ್ರ ಎನ್ .ಶೆಟ್ಟಿ ,ದಿನೇಶ್ ಶೆಟ್ಟಿ ಹಡಪ್ಸರ್ ಮತ್ತು ಪಧಾಧಿಕಾರಿಗಳು,ಮಹಿಳಾ ವಿಬಾಗದ ಪ್ರಮುಖರಾದ ಮಾಜಿ ಅಧ್ಯಕ್ಷರುಗಳಾದ ಸುಜಾತಾ ಎಸ್.ಹೆಗ್ಡೆ ,ಸುಧಾ ಎನ್.ಶೆಟ್ಟಿ ,ಸರೋಜಿನಿ ಜೆ .ಶೆಟ್ಟಿ ,ಮಲ್ಲಿಕಾ ಎ .ಶೆಟ್ಟಿ ,ದೀಪಾ ಎ .ರೈ,ಕಾರ್ಯದರ್ಶಿ ಲತಾ ಎಸ್.ಶೆಟ್ಟಿ ,ಕೋಶಾಧಿಕಾರಿ ಪ್ರಸಾಧಿನಿ,ಎಸ್.ಶೆಟ್ಟಿ ,ಮಹಿಳಾ ಕ್ರೀಡಾಧ್ಯಕ್ಷೆ ಆಶಾ ಡಿ.ಶೆಟ್ಟಿ ಯುವ ವಿಬಾಗದ ಅಧ್ಯಕ್ಷ ರೋಹನ್ ಶೆಟ್ಟಿ ,ಉಪಾಧ್ಯಕ್ಷರುಗಳಾದ ನಿಖಿಲ್ ಎನ್.ಶೆಟ್ಟಿ ,ಅದೀಪ್ ಶೆಟ್ಟಿ ,ಕಾರ್ಯದರ್ಶಿಗಳಾದ ಕೃತಿ ಎಲ್.ಶೆಟ್ಟಿ ,ಶರಣ್ ಶೆಟ್ಟಿ ಮತ್ತು ಪದಾಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯ ಯೋಗಾಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಅರವಿಂದ್ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು .ನಂತರ ಉಪಾಹಾರ ನಡೆಯಿತು .
ಚಿತ್ರ ವರದಿ : ಹರೀಶ್ ಮೂಡಬಿದ್ರಿ