ತುಳು ಚಿತ್ರರಂಗದ ಭರವಸೆಯ ಯುವನಟ, ಪಿಲಿ ತುಳು ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ, ಚಿತ್ರದ ಕಥೆಯನ್ನೂ ಬರೆದ ಭರತ್ ಭಂಡಾರಿ ನಟನೆಯ ಪಿಲಿ ತುಳು ಸಿನಿಮಾ ಮುಂಬಯಿಯಾದ್ಯಂತದ 9ನೇ ಪ್ರದರ್ಶನವು ಜೂನ್ 18 ರಂದು ಕನಕಿಯ ಮೂವಿಮೆಕ್ಸ್ ಥಿಯೇಟರ್ ನಲ್ಲಿ ತೆರೆ ಕಂಡಿತು. ಬಹು ಜನರ ಬೇಡಿಕೆಯಂತೆ ಏಕ ಕಾಲಕ್ಕೆ 2 ಪರದೆಯಲ್ಲಿ ಪ್ರದರ್ಶನ ಕಂಡ ಸಾಹಸ, ಪ್ರೇಮ, ಹಾಸ್ಯ, ಲವಲವಿಕೆಯಿಂದ ಕೂಡಿದ ಈ ಪಿಲಿ ಪ್ರದರ್ಶನದ ಶುಭಾರಂಭದ ನಿಮಿತ್ತ ನಡೆದ ಸರಳ ಸಮಾರಂಭಕ್ಕೆ ವಿಶೇಷ ಗಣ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರು ಮಾತನಾಡುತ್ತಾ ನಾಯಕ ನಟ ಭರತ್ ಭಂಡಾರಿಯವರ ಇದು ಮೊದಲ ತುಳು ಸಿನೆಮಾ. ಯುವ ಹಾಗೂ ಪ್ರತಿಭಾವಂತನ ಈ ಸಾಹಸಕ್ಕೆ ಇನ್ನೂ ಹೆಚ್ಚಿನ ಜನಮನ್ನಣೆ ಪ್ರಾಪ್ತಿಯಾಗಲಿ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ವಿವಿಧ ಚಲನಚಿತ್ರಗಳು ತೆರೆ ಕಾಣಲಿ ಎಂದು ಶುಭ ಹಾರೈಸಿದರು.
ಗಣ್ಯ ಅತಿಥಿಯಾಗಿ ಆಗಮಿಸಿದ ಐಕಳ ಹರೀಶ್ ಶೆಟ್ಟಿಯವರು ಚಿತ್ರರಂಗದಲ್ಲಿ ಭರತ್ ಭಂಡಾರಿಯವರು ಹೆಚ್ಚಿನ ಯಶಸ್ಸು ಹಾಗೂ ಮನ್ನಣೆಯನ್ನು ಗಳಿಸಲಿ,
ಭಗವಂತನ ಕೃಪೆ ಸದಾ ಅವರೊಂದಿಗಿರಲಿ ಎಂದು ಆಶಿಸಿದರು. ಅತಿಥಿ ಕರ್ನಿರೆ ವಿಶ್ವನಾಥ ಶೆಟ್ಟಿಯವರು ತನ್ನ ಅನಿಸಿಕೆಯಲ್ಲಿ ಭರತ್ ಭಂಡಾರಿಯವರ ಯಶಸ್ವಿಯಲ್ಲಿ ನಾವೆಲ್ಲಾ ಭಾಗಿಯಾಗೊಣ ಎಂದು ಶುಭ ಹಾರೈಸಿದರು. ಅತಿಥಿಗಳಾಗಿ ಗಿರೀಶ್ ಶೆಟ್ಟಿ ತೆಳ್ಳಾರ್, ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು, ಡಾ. ಅರುಣೋದಯ ರೈ, ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ರಮೇಶ್ ಶೆಟ್ಟಿ ಸಿದ್ಧಕಟ್ಟೆ, ಸುನೀಲ್ ಶೆಟ್ಟಿ, ಉದಯ ಶೆಟ್ಟಿ ಪೆಲತ್ತೂರು, ಸಂಪತ್ ಶೆಟ್ಟಿ ಪಂಜದಗುತ್ತು, ಜಿ.ಕೆ.ಕೆಂಚನಕೆರೆ, ಸುರೇಶ್ ಶೆಟ್ಟಿ ಗಂಧರ್ವ, ಡಾ. ರವಿರಾಜ್ ಸುವರ್ಣ, ವಸಂತಿ ಎಸ್. ಶೆಟ್ಟಿ ಹಾಗೂ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರಂಗ ನಟ ಬಾಬಾಪ್ರಸಾದ್ ಅರಸರವರು ನಿರ್ವಹಿಸಿದರು.
ಆಯೋಜಕರಾದ ವೈ. ಟಿ. ಶೆಟ್ಟಿ ಹೆಜಮಾಡಿ, ರವೀಂದ್ರ ಶೆಟ್ಟಿ ದೇರಳಕಟ್ಟೆ ಮತ್ತು ಉಮೇಶ್ ಶೆಟ್ಟಿ ಬೆಳ್ಳಂಪಳ್ಳಿ, ಸುಜಾತ ಜೆ. ಕೋಟ್ಯಾನ್, ಆಶಾಲತಾ ಪಿ. ಶೆಟ್ಟಿ, ಲೀಲಾ ಗಣೇಶ್ ಕಾರ್ಕಳ, ಅಮಿತಾ ಬಿ. ಶೆಟ್ಟಿ ಮೊದಲಾದವರು ಚಿತ್ರ ಪ್ರದರ್ಶನದ ಯಶಸ್ಸಿಗೆ ಸಹಕರಿಸಿರು.