ಪುಣೆ ತುಳು ಕೂಟ ಯುವ ವಿಬಾಗ ಬಾಕ್ಸ್ ಕ್ರಿಕೆಟ್ ಪಂದ್ಯಾಟ ವೈಷ್ಣವಿ ಎ ತಂಡ ಚಾಂಪಿಯನ್
ಯುವಕರಿಗೆ ಪ್ರೋತ್ಸಾಹ ನೀಡುವುದು ಕ್ರೀಡಾಭಿಮಾನಿಗಳಾದ ನಮ್ಮ ಕರ್ತವ್ಯ -ಪ್ರವೀಣ್ ಶೆಟ್ಟಿ ಪುತ್ತೂರು
ಪುಣೆ ; ಪುಣೆಯಲ್ಲಿ ನೆಲೆಸಿರುವ ತುಳು ಕನ್ನಡಿಗ ಯುವ ಜನತೆಯ ಒಗ್ಗಟಿಗೆ ಹೇಳಿಮಾಡಿಸಿದಂತಹ ಕೂಟ ಈ ಬಾಕ್ಸ್ ಕ್ರಿಕೆಟ್ ,ತುಳುಕೂಟ ಪುಣೆ ಪ್ರತಿ ವರ್ಷ ಇಂತಹ ಕ್ರೀಡಾ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತಿದೆ ನಾನು ಕೂಡ ಇದನ್ನು ಕಂಡವ ,ಇಲ್ಲಿ ಜಾತಿ ಮತ ಬೇದ,ಬಡವ ಬಲ್ಲಿದ ಎಂಬ ಪ್ರಶ್ನೆಯೇ ಬರದೆ ಯುವಕ ಯುವತಿಯರು ಸೇರಿಕೊಂಡು ಕ್ರೀಡಾ ಸ್ಪೂರ್ತಿಯಿಂದ ಆಡುವ ಆಟ ನೋಡಲು ಬಹಳ ಸುಂದರವಾಗಿದೆ ,ಪರಿಚಯ ಇಲ್ಲದ ನಮ್ಮ ತುಳು ಭಾಂಧವರು ಕೂಡಾ ಸೇರುತ್ತಾರೆ ,ಅದ್ದರಿಂದ ಇಲ್ಲಿ ಪರಿಚಯ ಮಿತ್ರತ್ವ ,ಬೆಳೆದು ಅದು ಒಬ್ಬರಿಗೊಬ್ಬರು ಕಷ್ಟ ಸುಖಗಳನ್ನು ಹೇಳಿಕೊಂಡು ಸಹಾಯ ಹಸ್ತ ನೀಡುವ ವರೆಗೆ ಹೋಗುತ್ತದೆ. ಜೀವನದಲ್ಲಿ ನಾವು ಒಬ್ಬರಿಗೊಬ್ಬರು ಮಾನವೀಯ ದೃಷ್ಟಿಯಿಂದ ಸಹಾಯ ಮಾಡುವುದು ದೇವರ ಕೆಲಸವೆಂದೇ ತಿಳಿಯಬೇಕು .
ತುಳು ಕನ್ನಡಿಗ ಎಲ್ಲಾ ಕ್ರಿಕೆಟ್ ಆಟಗಾರರು , ಅಭಿಮಾನಿಗಳು ,ಆಸಕ್ತರು ಒಂದೇ ಸೂರಿನಡಿ ಸೇರಿ ಈ ಒಂದು ದೊಡ್ಡ ಮಟ್ಟದ ಟೂರ್ನ ಮೆಂಟ್ ನ್ನು ಬಾಗವಸಿದ ಈ ಸಂದರ್ಭವನ್ನು ನೋಡಿ ದಾಗ ಮನಸ್ಸಿಗೆ ತುಂಬಾ ಅನಂದವಾಗುತ್ತದೆ, ಇಲ್ಲಿ ಪ್ರತಿಯೊಬ್ಬರ ,ಕ್ರೀಡಾ ಅಭಿಮಾನವನ್ನು ಕಂಡಾಗ ಕ್ರೀಡೆಗೆ ಎಂತಹ ಗೌರವ ಕೊಡುತ್ತಾರೆ ಎಂದು ತಿಳಿಯುತ್ತದೆ .ಯುವ ಕ್ರೀಡಾ ಪ್ರತಿಭೆಗಳಿಗೆ ನಾವು ಪ್ರೋತ್ಸಾಹ ನೀಡಬೇಕು ಎಂದು ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅದ್ಯಕ್ಷರಾದ ಪ್ರವ್ವೆನ್ ಶೆಟ್ಟಿ ಪುತ್ತೂರು ನುಡಿದರು ,
ಪುಣೆ ತುಳುಕೂಟದ ಯುವ ವಿಬಾಗದ ವತಿಯಿಂದ ಸೂಪರ್ ಸೆವೆನ್ ಸೀಸನ್ ಫೈವ್ ಬಾಕ್ಸ್ ಕ್ರಿಕೆಟ್ ಪಂದ್ಯಾಟವು ಏಪ್ರಿಲ್ 2ರಂದು ಪುಣೆ ಗರ್ವಾರೆ ಕಾಲೇಜ್ ಹತ್ತಿರದ ಸೆಂಟ್ರಲ್ ಮಾಲ್ ನ ರೂಪ ಟಾಪ್ ಬಾಕ್ಸ್ ಕ್ರಿಕೆಟ್ ಮೈದಾನದಲ್ಲಿ ಜರಗೀತು .ಯುವ ವಿಬಾಗದ ಅಧ್ಯಕ್ಷ ಅಬಿಜಿತ್ ವಿ .ಶೆಟ್ಟಿ ಮತ್ತು ಸದಸ್ಯರ ಮುಂದಾಳತ್ವದಲ್ಲಿ ಜರಗಿದ ಈಬಾಕ್ಸ್ ಕ್ರಿಕೆಟ್ ಪಂದ್ಯಾಟವನ್ನು ಬೆಳಿಗ್ಗೆ ತುಳುಕೂಟದ ಅಧ್ಯಕ್ಷ ಮೋಹನ್ ಶೆಟ್ಟಿ ಮಹಿಳಾ ವಿಬಾಗದ ಅಧ್ಯಕ್ಷೆ ಸುಜಾತ ಡಿ.ಶೆಟ್ಟಿ ಮತ್ತು ಪದಾಧಿಕಾರಿಗಳು ,ಯುವ ವಿಬಾಗದ ಸದಸ್ಯರು ಸೇರಿ ಉದ್ಘಾಟಿಸಿದರು .
ಈ ಬಾಕ್ಸ್ ಕ್ರಿಕೆಟ್ ನಲ್ಲಿ ಅಯ್ಕೆಯಾದ ಪ್ರಮುಖ 18 ತಂಡಗಳು ಈ ಕೂಟದಲ್ಲಿ ಬಾಗವಹಿಸಿದ್ದವು . ಫೈನಲ್ ಪಂದ್ಯದಲ್ಲಿ ವೈಷ್ಣವಿ ಎ ಮತ್ತು ವೈಷ್ಣವಿ ಬಿ ತಂಡಗಳು ಸೇಣಸಿದವು ಇದರಲ್ಲಿ ವೈಷ್ಣವಿ ಬಿ ತಂಡವು ಜಯ ಶಾಲಿಯಾಗಿ ತುಳುಕೂಟದ ಯುವ ವಿಬಾಗದ ಚಾಂಪಿಯನ್ ಟ್ರೋಪಿ ಮತ್ತು ನಗದು ಬಹುಮಾನ ಪಡೆಯಿತು .ವೈಷ್ಣವಿ ಬಿ ತಂಡ ರನ್ನರ್ಸ್ ಪ್ರಶಸ್ತಿ ಪಡೆಯಿತು .
ಸಂಜೆ ನಡೆದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು ,ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಗಣೇಶ್ ಹೆಗ್ಡೆ ,ಮಹಿಳಾ ವಿಬಾಗದ ಅಧ್ಯಕ್ಷೆ ಉಷಾ ಉಲ್ಲಾಸ್ ಶೆಟ್ಟಿ ,ಬೇಬಿ ಫ್ರೆಂಡ್ ಕ್ಲಿನಿಕ್ ಮಾಲಕ ಡಾ .ಸುಧಾಕರ್ ಶೆಟ್ಟಿ ,ಪುಣೆ ತುಳುಕೂಟ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ ,ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟಿ ,ಪುಣೆ ಬಂಟ್ಸ್ ಅಸೋಸಿಯೇಷನ್ ಜೊತೆ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಕೆಮ್ತೂರು ಆಗಮಿಸಿದ್ದರು,ವೇದಿಕೆಯಲ್ಲಿ ಪುಣೆ ತುಳುಕೂಟದ ಕೊಶಾದಿಕಾರಿ ದಿವಾಕರ್ ಶೆಟ್ಟಿ ಮಾಣಿಬೆಟ್ಟು ,ಮಹಿಳಾ ಅಧ್ಯಕ್ಷೆ ಸುಜಾತ ಡಿ.ಶೆಟ್ಟಿ ,ಯುವ ವಿಬಾಗದ ಅಧ್ಯಕ್ಷ ಅಭಿಜಿತ್ ವಿ .ಶೆಟ್ಟಿ ,ಪುಣೆ ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ವಿಬಾಗದ ಮಾಜಿ ಅಧ್ಯಕ್ಷೆ ಸುಜಾತ ಎಸ್.ಹೆಗ್ಡೆ , ಮಾನವಾದಿಕಾರ ಆಯೋಗದ ಪ್ರಮುಖರಾದ ಗೀತಾ ಶೆಟ್ಟಿ ಯವರು ಉಪಸ್ಥಿತರಿದ್ದರು .ವೇದಿಕೆಯಲ್ಲಿದ್ದ ಗಣ್ಯರನ್ನು ತುಳುಕೂಟ ಯುವ ವಿಬಾಗದ ಅಧ್ಯಕ್ಷ ಅಭಿಜಿತ್ ಶೆಟ್ಟಿ ಮತ್ತು ಪದಾಧಿಕಾರಿಗಳು ಪುಷ್ಪ ಗುಚ್ಛ ಸ್ಮರಣಿಕೆ ನೀಡಿ ಗೌರವಿಸಿದರು .ಹಾಗೂ ಈ ಪಂದ್ಯಾಟಕ್ಕೆ ಸಹಕಾರ ನೀಡಿದ ಎಲ್ಲಾ ಗಣ್ಯರನ್ನು ಗೌರವಿಸಲಾಯಿತು .ವೇದಿಕೆಯಲ್ಲಿದ್ದ ಗಣ್ಯರು ಸಾಂದರ್ಭಿಕವಾಗಿ ಹಿತನುಡಿಗಳನ್ನು ನೀಡಿದರು .ವಿಜೇತ ತಂಡಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಟ್ರೋಪಿ ಹಾಗೂ ನಗದು ಬಹುಮಾನ ನೀಡಿದರು .ಅಭಿಜಿತ್ ಶೆಟ್ಟಿ ಯವರನ್ನು ತುಳುಕೂಟದ ಅಧ್ಯಕ್ಷರು ಮತ್ತು ಗಣ್ಯರು ಗೌರವಿಸಿದರು.ಶ್ರೀಮತಿ ಪ್ರಿಯಾ ಎಚ್ .ದೇವಾಡಿಗ ವಿಜೇತ ತಂಡಗಳ ಮತ್ತು ವೈಯುಕ್ತಿಕ ಪ್ರಶಸ್ತಿ ಪಡೆದ ಮಹನೀಯರ ವಿವರವನ್ನು ನೀಡಿದರು . ತುಳುಕೂಟದ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಎಣ್ಣೆಹೊಳೆ ನಿರೋಪಿಸಿ ವಂದಿಸಿದರು .ಈ ಕ್ರಿಕೆಟ್ ಪಂದ್ಯಾಟಕ್ಕೆ ಯುವ ವಿಬಾಗದ ಪ್ರಮುಖರಾದ ಸುಮೀತ್ ಶೆಟ್ಟಿ ,ಆಕಾಶ ಶೆಟ್ಟಿ ,ಭಾಗ್ಯೇಶ್ ಶೆಟ್ಟಿ ,ಪ್ರತೀಕ್ ಶೆಟ್ಟಿ ,ನಿಕೆಶ್ ಶೆಟ್ಟಿ ಮತ್ತು ಯುವ ವಿಬಾಗದ ಎಲ್ಲಾ ಸದಸ್ಯರು ಸಹಕರಿಸಿದರು .
ದೊಡ್ಡ ಮಟ್ಟದಲ್ಲಿ ತುಳು ಕನ್ನಡಿಗ ಯುವ ವಿಬಾಗವನ್ನು ಒಟ್ಟುಮಾಡಿಕೊಂಡು ಪುಣೆ ತುಳುಕೂಟ ಯುವ ವಿಬಾಗ ಶಿಸ್ತು ಬದ್ದವಾಗಿ ಈ ಬಾಕ್ಸ್ ಕ್ರಿಕೆಟ್ ಟೂ ರ್ನಮೆಂಟ್ ನ್ನು ಆಯೋಜಿಸಿ ಉತ್ತಮವಾಗಿ ಸಂಘಟಿಸಿದೆ .ನವರ ಕೆಲಸ ಮೆಚ್ಚುವಂತದ್ದು , ಪುಣೆಯಲ್ಲಿರುವ ತುಳು ಕನ್ನಡಿಗ ಭಾಂದವರು ಮತ ಬೇದ ಭಾವವಿಲ್ಲದೆ ಸಾಮರಷ್ಯದಿಂದ ಉತ್ತಮ ರೀತಿಯಲ್ಲಿ ಅಡಿ ನಮ್ಮಲ್ಲಿ ಕೂಡಾ ಉತ್ತಮ ಪ್ರತಿಭಾವಂತ ಕ್ರೀಡಾ ಪ್ರತಿಭೆಗಳು ಇವೆ ಎಂಬುದನ್ನು ತೋರಿಸಿದ್ದಿರಿ ,ಸೋಲು ಗೆಲುವು ಮುಖ್ಯವಲ್ಲ ಪಾಲ್ಗೊಳ್ಳುವಿಕೆ ಮತ್ತು ಕೂಡಿ ಆಡುವುದು ಮುಖ್ಯ .ನಮ್ಮ ಊರಿನ ರೀತಿಯ ಪರಿಸರ ಇಲ್ಲಿ ಸೃಷ್ಟಿಯಾಗಿದೆ ತುಂಬಾ ಖುಷಿಯಾಗಿದೆ . ಪುಣೆ ತುಳುಕೂಟ ಇನ್ನು ಕೂಡಾ ಮತ್ತಷ್ಟು ತುಳುವರನ್ನು ಒಟ್ಟುಗೂಡಿಸಿ ಕೊಂಡು ಉತ್ತಮ ಕಾರ್ಯಕ್ರಮಗಳನ್ನು ಮಾಡಲಿ ಸರ್ವರ ಸಹಕಾರ ಇವರಿಗೆ ಸಿಗಲಿ ಎಂದು ಶುಭ ಹಾರೈಸುತ್ತೇನೆ .-ಗಣೇಶ್ ಶೆಗ್ದೆ ,ಅಧ್ಯಕ್ಷರು ಬಂಟ್ಸ್ ಅಸೋಸಿಯೇಷನ್ ಪುಣೆ.
ಯುವಕರ ಸಾಮಾಜಿಕ ಸೇವೆ ಅಥವಾ ಯಾವುದೇ ಕಾರ್ಯಕ್ರಮವಿರಲಿ ಅದಕ್ಕೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡುವುದು ಹಿರಿಯರ ಕರ್ತವ್ಯ ,ಯುವಕರ ಮತ್ತು ಮಕ್ಕಳ ಅರೋಗ್ಯ ದೃಷ್ಟಿ ಯಿಂದ ನನ್ನ ವೈದ್ಯಕೀಯ ಸೇವೆ ಸಲಹೆ ಸೂಚನೆ ಸದಾ ಸಿಗಲಿದೆ .ಹಾಗೆಯೇ ಕಾರ್ಮಿಕರಿಗಾಗಿ ಹೊರತಂದಿರುವ ಉಚಿತ ಕಟೀಲ್ ಚೈಲ್ಡ್ ಹೆಲ್ತ್ ಕಾರ್ಡ್ ನ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು -ಡಾ .ಸುಧಾಕರ್ ಶೆಟ್ಟಿ ಬೇಬಿ ಫ್ರೆಂಡ್ ಕ್ಲಿನಿಕ್ ಕ್ಯಾಂಪ್ ಪುಣೆ.
ಕ್ರೀಡಾ ಕೂಟ ,ಕ್ರಿಕೆಟ್ ಪಂದ್ಯಾಟ ಮತ್ತು ಕೆಲವು ಗೇಮ್ಸ್ ಗಳನ್ನೂ ,ಕ್ರೀಡಾಸ್ಪರ್ದೆಗಳನ್ನು ಆಯೋಜಿಸಿದರೆ ಯುವಕರು ಒಟ್ಟು ಸೇರುತ್ತಾರೆ , ಕ್ರೀಡೆಯಿಂದ ಮಾತ್ರ ಯುವಕ ಯುವತಿಯರನ್ನು ದೊಡ್ಡ ಮಟ್ಟದಲ್ಲಿ ಒಟ್ಟು ಸೇರಿಸಲು ಸಾದ್ಯ, ಕ್ರೀಡಾ ಸ್ಪರ್ದೆಗಳಿಗೆ ಯುವ ಜನಾಂಗ ಆಕರ್ಷಣೆಯಗುತ್ತಾರೆ .ಮತ್ತು ತುಳುಕೂಟ ಪುಣೆ ಯುವ ವಿಬಾಗದವರ ಈ ಬಾಕ್ಸ್ ಕ್ರಿಕೆಟ್ ಆಯೋಜನೆಯಂತೆ ಯುವಕರಿಗೆ ಸ್ಪರ್ದೆಗಳನ್ನು ಸಂಘಟಿಸುವ ಛಲ ಬರುತ್ತದೆ ,ಯುವ ಪ್ರತಿಭಾವಂತ ಮಕ್ಕಳಿಂದ ಅವರ ಪೋಷಕರ ಪರಿಚಯ ಮತ್ತು ಹೆಸರು ಕೂಡಾ ಸಮಾಜಕ್ಕೆ ತಿಳಿಯುತ್ತದೆ .ನಮ್ಮ ಉದ್ಯಮದ ಜೊತೆಯಲ್ಲಿ ಯುವ ಪೀಳಿಗೆಗೆ ನಮ್ಮಿಂದಾಗುವ ಸಹಕಾರ ನೀಡಬೇಕು ಪ್ರೋತ್ಸಾಹಿಸಬೇಕು -ಶೇಖರ್ ಶೆಟ್ಟಿ ,ಕಾರ್ಯಾಧ್ಯಕ್ಷರು ದಕ್ಷಿಣ ವಲಯ ಪ್ರಾದೇಶಿಕ ಸಮಿತಿ ,ಬಂಟರ ಸಂಘ ಪುಣೆ.
ತುಳುಕೂಟ ಯುವ ವಿಬಾಗದ ಈ ಪಂದ್ಯಾಟ ದಲ್ಲಿ ಬಾಗವಹಿಸುವುದು ಎಂದರೆ ಬಹಳ ಖುಷಿ ಕೊಡುತ್ತದೆ ,ಮಹಿಳೆಯರು ಕೂಡಾ ಸೇರಿಕೊಂಡು ಆಡುವ ಈ ಬಾಕ್ಸ್ ಕ್ರಿಕೆಟ್ ನಲ್ಲಿ ಇದೆ ಅಂಗಳದಲ್ಲಿ ನಾವು ಕೂಡಾ ಬಗವಹಿಸಿದ್ದೇವೆ .ಯುವ ವಿಬಾಗವರ ಬೇರೆ ಯಾವುದೇ ಕಾರ್ಯಕ್ರಮ ಇರಲಿ ನಾವು ಪ್ರೋತ್ಸಾಹ ನೀಡುತ್ತೇವೆ ,ಒಳ್ಳೆಯ ಕ್ರೀಡಾ ಕಾರ್ಯಕ್ರಮ ಇಲ್ಲಿ ನಡೆದಿದೆ ನಿಮಗೆ ಶುಭ ಹಾರೈಕೆಗಳು -ಶ್ರೀಮತಿ ಉಷಾ ಉಲ್ಲಾಸ್ ಶೆಟ್ಟಿ,ಅಧ್ಯಕ್ಷೆ ಮಹಿಳಾ ವಿಬಾಗ ಬಂಟ್ಸ್ ಅಸೋಸಿಯೇಷನ್ ಪುಣೆ .
ಇಂತಹ ಕ್ರೀಡಾ ಸ್ಪರ್ದೆಗಳನ್ನು ಆಯೋಜಿಸುವುದರಿಂದ ಯುವಕ ಯುವತಿಯರಿಗೆ ಮತ್ತಷ್ಟು ಹುಮ್ಮಸ್ಸು ಮತ್ತು ಪ್ರೋತ್ಸಾಹ ಸಿಗುತ್ತದೆ ಯುವ ಜನತೆ ಸೇರಿಕೊಳ್ಳುವಂತಹ ಕಾರ್ಯಕ್ರಮಗಳು ನಡೆಯಬೇಕು ,ಇಂತಹ ಕೂಟಗಳಿಂದ ಶಾರೀರಿಕವಾಗಿ ಇದು ಒಳ್ಳೆಯ ವ್ಯಾಯಾಮ ನೀಡುತ್ತದೆ .ತುಳುಕೂಟ ಪುಣೆ ಯುವ ವಿಬಾಗ ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸಿದೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ
-ಸುಧಾಕರ್ ಶೆಟ್ಟಿ ,ಜೊತೆ ಕಾರ್ಯದರ್ಶಿ ಬಂಟ್ಸ್ ಅಸೋಸಿಯೇಷನ್ ಪುಣೆ .
ನಮ್ಮ ತುಳುಕೂಟದವರ ಈ ಕೂಟದಲ್ಲಿ ಎಲ್ಲಾರೂ ಕೂಡಿಕೊಂಡು ಅಂದರೆ ತಂದೆ ಮಗ ,ತಾಯಿ ಮಗಳು ಸೇರಿ ಆಡುವ ಸೊಬಗನ್ನು ಕಣ್ಣಾರೆ ಕಂಡಾಗ ತುಂಬಾ ಖುಷಿಯಾಗುತ್ತದೆ ,ಈ ಅವಕಾಶವನ್ನು ಯುವ ವಿಬಾಗ ಮಾಡಿಕೊಟ್ಟಿದೆ ಅದೇ ರೀತಿ ಪುಣೆಯ ಎಲ್ಲಾ ಸಂಘ ಸಂಸ್ಥೆಗಳು ಕೂಡಾ ಪ್ರೋತ್ಸಾಹ ನೀಡುತಿವೆ ,ಒಳ್ಳೆಯ ಕಾರ್ಯಗಳಿಗೆ ಸಹಕಾರ ಪ್ರೋತ್ಸಾಹ ಸದಾ ಸಿಗಲಿ -ಶ್ರೀಮತಿ ಗೀತಾ ಶೆಟ್ಟಿ , ಅಂತರಾಷ್ಟ್ರೀಯ ಮಾನವಾದಿಕಾರದ ಪ್ರಮುಖರು.
ವರದಿ ಹರೀಶ್ ಮೂಡಬಿದ್ರಿ