ಮಾರ್ಚ್ ೧೭ರಂದು ತುಳುಕೂಟ ಕತಾರ್ ಆಯೋಜಿಸಿದ್ದ “ತುಳುಜಾತ್ರೆ” ಎಂಬ ಮೇಳವು ಅತ್ಯಂತ ಅದ್ಧೂರಿಯಾಗಿ ನೆರವೇರಿತಲ್ಲದೆ ಕತಾರ್ನಲ್ಲಿ ನೆಲೆಸಿರುವ ಎಲ್ಲಾ ಅನಿವಾಸಿ ಭಾರತಿಯರ ಗಮನವನ್ನು ಸೆಳೆದು ಮೆಚ್ಚುಗೆ ಪಡೆಯಿತು. ಕರುನಾಡು, ಅದರಲ್ಲೂ ಕರಾವಳಿಯ ವಿಧ-ವಿಧವಾದ ತಿಂಡಿ ತಿನಿಸುಗಳು ಹಾಗು ಸಾಂಪ್ರದಾಯಿಕ ಆಟೋಟ ಪಂದ್ಯಗಳು ಸುಮಾರು ಮೂರು ಸಾವಿರ ಮಂದಿ ಯನ್ನು ಯಶಸ್ವಿಯಾಗಿ ಮನೋರಂಜಿಸಿತು. ವೇದಿಕೆಯಲ್ಲಿ ಪ್ರದರ್ಶಿಸಿದ ನಮ್ಮ ದೇಶದ ವಿಭಿನ್ನ ಕಲಾಕೃತಿಗಳು ಪ್ರೇಕ್ಷಕರನ್ನು ಕಾರ್ಯಕ್ರಮದುದ್ದಕ್ಕೂ ಸಳೆದಿಟ್ಟುಕೊಂಡಿದ್ದವು.
ಕತಾರ್ನ ಡೈನಾಮಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಕಾರ್ಯಕ್ರಮ ನಡೆ ಯಿತು. ಇಡೀ ಕಾಂಪ್ಲೆಕ್ಸ್ ರಂಗಮಯ ಗೊಳಿಸಿ, ಅದಕ್ಕೆ ತುಳುನಾಡ ಸಾಂಪ್ರ ದಾಯಕ ಹೊರಪನ್ನು ಅಳವಡಿಸಿ, ಕತಾರ್ನಲ್ಲೂ ಭವ್ಯವಾದ ಆಯೋಜನೆ ಸಾಧ್ಯವಿದೆ ಎಂಬುದನ್ನು ಸಾರಿ ಹೇಳುವಂತೆ ಅಲಂಕೃತಗೊಂಡಿತ್ತು. ಕಂಬಳದ ಫೊಟೋ ಬೂತ್! ನಿಜರೂಪಿಕ ತಟ್ಟಿರಾಯ! ಸ್ವಾಗತ ಕೋರುವ ಸುಸಜ್ಜಿತ ಕಮಾನು ಜನರ ಮನಸೂರೆಗೊಂಡವು. ತುಳು ಕೂಟದ ಅಧ್ಯಕ್ಷ ಕಿರಣ್ ಆನಂದ್, ಅತಿಥಿ ರವಿ ಕಟಪಾಡಿ, ರಾಜ್ಯೋತ್ಸವ ಪುರಸ್ಕೃತ ತುಳುಕೂಟ ಕತಾರ್ನ ಪೋಷಕ ಹಾಗೂ ಮಾಜಿ ಅಧ್ಯಕ್ಷ, ಡಾ. ಎಂ. ರವಿ ಶೆಟ್ಟಿ, ಮಾಜಿ ಅಧ್ಯಕ್ಷ ಹಾಗೂ ಸಲಹಾ ಸಮಿತಿಯ ಸದಸ್ಯ ಅಸ್ಮತ್ ಅಲಿ, ಸಲಹಾ ಸಮಿತಿಯ ಅಧ್ಯಕ್ಷೆ ಚೈತಾಲಿ ಉದಯ ಶೆಟ್ಟಿ, ಮಾಜಿ ಅಧ್ಯಕ್ಷ ಹಾಗೂ ಸಲಹಾ ಸಮಿತಿಯ ಸದಸ್ಯ ರಾಮಚಂದ್ರ ಶೆಟ್ಟಿ, ಸ್ಥಾಪಕ ಸದಸ್ಯ ಫೆಲಿಕ್ಸ್ ಲೋಬೊ, ಹಿರಿಯ ಸದಸ್ಯ ಅಬ್ದುಲ್ಲಾ ಮೋನು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಾಹಿಲ್ ರೈ ಮತ್ತು ರೀನಾ ಕಾಸ್ಟೆಲಿನೊ ಕಾರ್ಯಕ್ರಮ ನಿರ್ವಹಿಸಿದರು. ಅಧ್ಯಕ್ಷ ಕಿರಣ್ ಆನಂದ್ ಅತಿಥಿಗಳಾದ ಐ.ಸಿ.ಸಿ ಅಧ್ಯಕ್ಷ ಏ.ಪಿ. ಮಣಿಕಂಠನ್, ಐ.ಸಿ.ಸಿ ನಿಕಟಪೂರ್ವ ಅಧ್ಯಕ್ಷ ಬಾಬು ರಾಜನ್, ಗೌರವಾನ್ವಿತ ಅತಿಥಿ ರವಿ ಕಟಪಾಡಿ, ಮೂಲ ಸೌಕರ್ಯಗಳ ಪ್ರಾಯೋಜಕ ಸಂಸ್ಥೆ ಎ.ಟಿ.ಎಸ್.ನ ವ್ಯವಸ್ಥಾಪಕ ನಿರ್ದೇಶಕ ಹಾಗು ತುಳುಕೂಟ ಕತಾರ್ನ ಪೋಷಕ ಹಾಗೂ ಮಾಜಿ ಅಧ್ಯಕ್ಷ ಡಾ. ಎಂ.ರವಿ ಶೆಟ್ಟಿ, ಪ್ಲಾಟಿನಮ್ ಪ್ರಾಯೋಜಕ ಗೋಲ್ಡನ್ ಟ್ರೇಡಿಂಗ್ ಅಂಡ್ ಡೆಕೊರೇಶನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗು ಮಾಜಿ ಅಧ್ಯಕ್ಷ ಅಸ್ಮತ್ ಅಲಿ, ಸಲಹಾ ಸಮಿತಿಯ ಅಧ್ಯಕ್ಷೆ ಚೈತಾಲಿ ಉದಯ ಶೆಟ್ಟಿ, ಮಾಜಿ ಅಧ್ಯಕ್ಷ ಹಾಗೂ ಸಲಹಾ ಸಮಿತಿಯ ಸದಸ್ಯ ರಾಮಚಂದ್ರ ಶೆಟ್ಟಿ ಉಪಸ್ಥಿತರಿದ್ದರು.