ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮಿà ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಎ. 9ರಿಂದ ವರ್ಷಾವಧಿ ಉತ್ಸವ ಮೊದಲ್ಗೊಂಡು ಎ.14ರ ತನಕ ವಿವಿಧ ವಿಧಿ ವಿಧಾನಗಳ ಮೂಲಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಎ. 12ರಂದು ಶ್ರೀ ಮನ್ಮಹಾರಥೋತ್ಸವ ಜರಗಲಿದೆ. ಧಾರ್ಮಿಕ ಕಾರ್ಯಕ್ರಮಗಳು
ಶ್ರೀ ಮನ್ಮಹಾರಥೋತ್ಸವ ಅಂಗವಾಗಿ ಎ. 9ರ ರವಿವಾರ ಧ್ವಜಾರೋಹಣ, ರಾತ್ರಿ ಭೇರಿ ತಾಡನ, ಕೌತುಕ ಬಂಧನ, ಶಿಬಿಕಾಯನೋತ್ಸವ ಜರಗಿತು. ಎ. 10ರಂದು ಸಿಂಹವಾಹನೋತ್ಸವ, ಎ. 11ರಂದು ಪುಷ್ಪಕ ವಾಹನೋತ್ಸವ, ಎ. 12 ರಂದು ಶ್ರೀ ಮನ್ಮಹಾರಥೋತ್ಸವ. ಎ. 13ರಂದು ಚೂರ್ಣೋತ್ಸವ ಹಾಗೂ ತುಲಾಭಾರ ಸೇವೆ, ಎ. 14ರಂದು ಅವಭೃಥ, ಮೃಗಯಾ ವಿಹಾರ, ಪೂರ್ಣಾಹುತಿ, ಧ್ವಜಾರೋಹಣ, ಕುಂಭಾಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ.
. 13ರಂದು ನಡೆಯುವ ತುಲಾಭಾರ ಸೇವೆ ಮಾಡಲಿಚ್ಛಿಸುವವರು ಎ. 12ರ ಸಂಜೆ ಒಳಗೆ ತಿಳಿಸಬೇಕು. ಭಕ್ತರಿಗೆ ಮಧ್ಯಾಹ್ನದ ಊಟ ಮತ್ತು ರಾತ್ರಿಯ ವಸತಿ ವ್ಯವಸ್ಥೆ ಇದೆ ಎಂದು ದೇವಸ್ಥಾನದ ಮೊಕ್ತೇಸರ ಚಂದ್ರಶೇಖರ ಶೆಟ್ಟಿ ತಿಳಿಸಿದ್ದಾರೆ.