ಮುಂಬಯಿ, ಜು.23: ಕಲೆಯು ಪಾವಿತ್ರ್ಯತೆಯುಳ್ಳದ್ದು ಇದಕ್ಕೆ ಭೇದವಿಲ್ಲ. ಆದುದರಿಂದ ಎಲ್ಲರಂತೆ ಜಾನಪದ ಕಲಾರಾಧನೆಗೂ ಪ್ರೇರಣೆಯ ಅಗತ್ಯವಿದ್ದು ನಮ್ಮ ಸದಾ ಪ್ರೋತ್ಸಾಹವಿದೆ. ಕಲೆಗಳು ಬೆಳೆಸಿ ಉಳಿಸುವ ನಿಟ್ಟಿನಲ್ಲಿ ಆಯೋಜಿಸಿದ ಈ ಕಾರ್ಯಕ್ರಮ ಕಲೆಯೊಂದಿಗೆ ಸಹಬಾಳ್ವೆಯನ್ನು ಕಲಿಸುವಂತಾಗಿದೆ. ಶ್ರೀನಿವಾಸ ಸಾಫಲ್ಯರ ಕಲ್ಪನೆಯ ಸುದಿನ ಇದಾಗಿದ್ದು ಮಹಾರಾಷ್ಟ್ರ ಘಟಕದ ಸದಸ್ಯರಲ್ಲಿ ಮತ್ತಷ್ಟು ಪ್ರೇರಣೆ ಮೊಳಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು (ರಿ.) ಬೆಂಗಳೂರು ಇದರ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ| ಆರ್.ಕೆ ಶೆಟ್ಟಿ ತಿಳಿಸಿದರು.
ಇಂದಿಲಿ ಶನಿವಾರ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಅನೇಕ್ಸ್ ಕಾಂಪ್ಲೆಕ್ಸ್ನಲ್ಲಿನ ಶ್ರೀಮತಿ ರಂಜನಿ ಸುಧಾಕರ ಹೆಗ್ಡೆ ಸಮಾಜ ಕಲ್ಯಾಣ ಸಭಾ ಭವನದಲ್ಲಿ ಕಜಾಪ ಮಹಾರಾಷ್ಟ್ರ ಘಟಕವು ಆಯೋಜಿಸಿದ್ದ ಜಾನಪದ ಸಂಸ್ಕೃತಿಯ ಸಂವಾದ `ಆಷಾಡದ ಆಹ್ಲಾದಕರಸವಿ ಸಂಜೆ’ ಮತ್ತು ಜಾನಪದ ಗೀತಾ ಗಾಯನ `ಸಂವಾದ-ಚಿಂತನ-ಮಂಥನ’ ಕಾರ್ಯಕ್ರಮಗಳಸಭಾಧ್ಯಕ್ಷತೆ ವಹಿಸಿ ಗೀತಾ ಗಾಯನದ ಬಳಿಕ ದೀಪನಮನ ಮತ್ತು ನಾಡಗೀತೆಯೊಂದಿಗೆ ನಡೆಸಲ್ಪಟ್ಟ ಸಭಾ ಕಾರ್ಯಕ್ರಮದಲ್ಲಿ ನಾಮಫಲಕ ಅನಾವರಣಗೊಳಿಸಿ ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ವಿಭಾಗದ `ಸೋಲಾಪುರ ಉಪ ಘಟಕ ಉದ್ಘಾಟಿಸಿದ ಡಾ| ಆರ್.ಕೆ ಶೆಟ್ಟಿ, ಕರ್ನಾಟಕ ಜನಪದ ಪರಿಷತ್ತು ಅಧ್ಯಕ್ಷ ಟಿ.ತಿಮ್ಮೇಗೌಡ ಅವರ ಪ್ರೇರಣೆ ಮತ್ತು ಪ್ರೋತ್ಸಾಹದಿಂದ ಈ ಘಟಕ ಮುನ್ನಡೆಯುತ್ತಿದೆ ಎಂದು ಸೋಲಾಪುರ ಉಪ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಮಸೂತಿ ಮತ್ತಿತರ ಪದಾಧಿಕಾರಿಗಳಿಗೆ ಸ್ಮರಣಿಕೆ, ಪುಷ್ಫಗುಪ್ಚವನ್ನಿತ್ತು ಅಧಿಕಾರ
ಹಸ್ತಾಂತರಿಸಿ ಶುಭಾರೈಸಿದರು.
ಈ ಸಂದರ್ಭದಲ್ಲಿ ಅಭ್ಯಾಗತರಾಗಿ ಹಿರಿಯ ಜಾನಪದ ಕಲಾವಿದ ಬಸವರಾಜ ಮಸೂತಿ ಸೋಲಾಪುರ ಹಾಗೂ ಕಜಾಪಮ ಘಟಕದ ಉಪಾಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ, ಗೌ| ಪ್ರ| ಕಾರ್ಯದರ್ಶಿ ಅಶೋಕ್ ಪಕ್ಕಳ, ಗೌರವ ಕೋಶಾಧಿಕಾರಿ ಗಣೇಶ್ ಜಿ.ನಾಯ್ಕ್, ಜತೆ ಕಾರ್ಯದರ್ಶಿ ಪದ್ಮನಾಭ ಸಸಿಹಿತ್ಲು, ಜತೆ ಕೋಶಾಧಿಕಾರಿ ಕುಸುಮ ಸಿ.ಪೂಜಾರಿ, ಮಹಿಳಾಧ್ಯಕ್ಷೆ ಅನಿತಾ ಯು.ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಸವರಾಜ ಮಸೂತಿ ಮಾತನಾಡಿ ಕರ್ನಾಟಕದಲ್ಲಿದ ಶಿಕ್ಷಣ ಮತ್ತು ಲಲಿತಾ ಕಲೆ ಒಂದೇಯಾಗಿದೆ. ಮಾತು ಪದಗಳ ಬಳಕೆ, ಶೈಲಿ ಬೇರೆ ಅಷ್ಟೇ. ನಾವು ಕರ್ನಾಟಕದಲ್ಲಿದ್ದೂಸರಕಾರವು ಸಾಂಸ್ಕೃತಿಕ ಪ್ರೋತ್ಸಾಹದಲ್ಲಿ ದಕ್ಷಿಣ ಕಡೆಯವರಿಗೆ ಅಧಿಕ ಗೌರವ ನೀಡುತ್ತಿದೆ. ಉತ್ತರ ಕರ್ನಾಟಕದ ಜನತೆಯಲ್ಲಿ ತಾರತಮ್ಯ ತೋರುವುದು ಉಚಿತವಲ್ಲ. ಇನ್ನಾದರೂ ಸರಕಾರ ಪ್ರೋತ್ಸಾಹಿಸಬೇಕು ಎಂದರು.
ನಡೆಸಲ್ಪಟ್ಟ ಜಾನಪದ ಕಲೆಯ ಬೆಳವಣಿಗೆ ವಿಚಾರಿತ `ಉತ್ತರದಲ್ಲಿ ದಕ್ಷಿಣದಲ್ಲಿ’ ಸಂವಾದ ಕಾರ್ಯಕ್ರಮ ನಡೆಸಲಾಗಿದ್ದು, ಕನ್ನಡಿಗ ಕಲಾವಿದರ ಪರಿಷತ್ತು, ಮಹಾರಾಷ್ಟ್ರ ಇದರ ಉಪಾಧ್ಯಕ್ಷ ಶ್ರೀ ಶ್ರೀನಿವಾಸ ಪಿ.ಸಾಫಲ್ಯ ಇವರು ದಕ್ಷಿಣದಲ್ಲಿ ಕಲೆಯ ಬೆಳವಣಿಗೆ ವಿಷಯವಾಗಿ, ಬಹುಭಾಷಾ ಬರಹಗಾರ್ತಿ, ಲೇಖಕಿ ಲಲಿತ ಪ್ರಭು ಅಂಗಡಿ ಅವರು ಉತ್ತರದಲ್ಲಿ ಜಾನಪದ ಕಲೆಯ ನಡಿಗೆ ವಿಷಯದಲ್ಲಿ ಸಂವಾದ ನಡೆಸಿದರು. ಕಜಾಪಮ ಕಾರ್ಯಕಾರಿ ಸಮಿತಿ, ಸಲಹಾ ಸಮಿತಿ ಮತ್ತು ಸದಸ್ಯರನೇಕರು, ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು, ಕಲಾಭಿಮಾನಿಗಳು ಉಪಸ್ಥಿತರಿದ್ದು ಬಂಟರವಾಣಿ ಮಾಸಿಕದ ಗೌರವ ಸಂಪಾದಕ ಅಶೋಕ ಪಕ್ಕಳ ಸಂವಾದ ನಡೆಸಿಕೊಟ್ಟರು.
ಜಾನಪದ ಕಲೆಯ ಬಗ್ಗೆ ಸೂಕ್ಷ್ಮವಾಗಿ ತಿಳಿಯುವ ಅಗತ್ಯವಿದೆ. ಅಧ್ಯಯನಕಾರರ ಅಧ್ಯಯನ ಹಾಗೂ ಅವರ ವಿಮರ್ಶೆಯು ಜಾನಪದದ ಅರಿವು ಮೂಡಿಸುತ್ತಿದ್ದು ಜಾನಪದ ಮೂಲಕ ಪರಂಪರೆವಾಗಿ ಬಂದಂತಹ ಜ್ಞಾನ ಪಸರಿಸುತ್ತಿದ್ದಾರೆ. ತಾಯಿಯಿಂದ ಮಗಳಿಗೆ, ತಂದೆಯಿಂದ ಮಗನಿಗೆ, ವಂಶದಿಂದ ವಂಶಕ್ಕೆ ಪರಂಪರೆಯಾಗಿ ಬಂದಂತಹ ಕಲೆ ಅದು ಜಾನಪದ ಕಲೆ. ಇದು ಹಳ್ಳಿಯ ಸಾಮಾನ್ಯ ಜನರಲ್ಲಿ ಹುಟ್ಟಿದ ಸಿರಿನುಡಿ ಎನ್ನಬಹುದು. ಸಾಮಾನ್ಯ ಜನರ ಬದುಕು ಹೇಗೆ? ಆ ಬದುಕಿನಲ್ಲಿ ಅವರಲ್ಲಿ ಹುಟ್ಟಿದ ವಿವಿಧ ವಿವೇಚನೆಗಳು ಏನೆಂಬುಂದು ಜಾನಪದ ಕಲೆಯಲ್ಲಿ ಅಡಕವಾಗಿದೆ. ಇದು ಯಾವುದೇ ಅಧಿಕಾರ ಸಂರಕ್ಷಣೆಯ ಶೋಷಣೆ ಇಲ್ಲದೆ ತನ್ನಿಂದ ತಾನೇ ಹರಿದು ಬಂದು ಮಣ್ಣಿನ ಸಂಸ್ಕೃತಿಯಾಗಿ ಉಳಿದಿದೆ ಎಂದು ಶ್ರೀನಿವಾಸ ಸಾಫಲ್ಯ ತಿಳಿಸಿದರು.
ಲಲಿತ ಅಂಗಡಿ ಸಂವಾದ ನಡೆಸಿ ಜನರ ಪದವೇ ಜಾನಪದವಾಗಿದೆ. ಜಾನಪದ ವಿಸ್ತಾರದವಾದ ಸಮುದ್ರದಂತಿದ್ದು ನಿರಂತರವಾದ ಸಾಹಿತ್ಯದ ಸೊಡಗು ಇದಾಗಿದೆ. ಮಹಿಳೆ ತನ್ನ ಅಸರಿಕೆ ಬೆಸರಿಕೆಯನ್ನು ನೋವು, ನಲಿವು, ಸುಖ ಸಂತೋಷ, ಭಕ್ತಿಯ ಪರಾಕಷ್ಟತೆ ಸ್ವಭಾವ ಎಲ್ಲವನ್ನು ಹಾಡಿನ ಮೂಲಕ ವ್ಯಕ್ತ ಪಡಿಸುತ್ತಾಳೆ. ಜಾನಪದವು ಮತ್ತು ಶರಣರ ಸಂಬಂಧವು ತೀರ ಹತ್ತಿರವಾದುದು ಎಂದರು. ಕಜಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿದ್ದುಭಾರತ ರಾಷ್ಟ್ರದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಇತ್ತೀಚೆಗೆ ಜಾಗತಿಕ ಭಾರತೀಯ ಸಾಧಕರ ಪ್ರಶಸ್ತಿ ಸ್ವೀಕೃತ ಡಾ| ಆರ್.ಕೆ ಶೆಟ್ಟಿ ಮತ್ತು ಈ
ಕಾರ್ಯಕ್ರಮದ ಪ್ರಧಾನ ರೂವಾರಿಯಾಗಿದ್ದ ಶ್ರೀನಿವಾಸ ಸಾಫಲ್ಯರನ್ನು ಘಟಕದ ಪರವಾಗಿ ಪದಾಧಿಕಾರಿಗಳು ಗೌರವಿಸಿ ಅಭಿನಂದಿಸಿದರು.
ಆಹ್ವಾನಿತ ತಂಡಗಳು ಏಕವ್ಯಕ್ತಿ ಮತ್ತು ಸಮೂಹ ಗಾಯನಗಳ ಮೇಳೈಕೆಯ ಜಾನಪದ ಗೀತಾ ಗಾಯನ ಮತ್ತು ಬಸವರಾಜ ಮಸೂತಿ ಸೋಲಾಪುರ ಮತ್ತು ಬಳಗವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದವು. ಪದ್ಮನಾಭ ಸಸಿಹಿತ್ಲು ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಿಸಿದರು. ಸುಶೀಲಾ ಎಸ್.ದೇವಾಡಿಗ ಪ್ರಾರ್ಥನೆಯನ್ನಾಡಿದರು. ಡಾ ಸುರೇಂದ್ರಕುಮಾರ್ ಹೆಗ್ಡೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಪಕ್ಕಳ ವಂದಿಸಿದರು.