ಬಂಟರ ಯಾನೆ ನಾಡವರ ಮಾತೃ ಸಂಘ ಉಡುಪಿ ತಾಲೂಕು ಸಮಿತಿ ವತಿಯಿಂದ ಸಂಘದ ಕಾರ್ಯ ವ್ಯಾಪ್ತಿಯಾದ ಉಡುಪಿ, ಕಾಪು, ಬ್ರಹ್ಮಾವರ ತಾಲೂಕಿನ ಗ್ರಾಮೀಣ ಬಂಟರ ಸಂಘದ 36 ಪ್ರತಿಭಾನ್ವಿತ ಆರ್ಥಿಕವಾಗಿ ಸಂಕಷ್ಟದಲ್ಲಿರುವ ದ್ವಿತೀಯ ಪಿ. ಯು. ಸಿ ಯ ಬಂಟ ವಿದ್ಯಾರ್ಥಿಗಳಿಗೆ ನೀಟ್ ಸಿಇಟಿ ಉಚಿತ ತರಬೇತಿ ಶಿಬಿರ ಉಡುಪಿಯ ವಿನಯ್ ಅಕಾಡೆಮಿಯಲ್ಲಿ ನಡೆಯಲಿದೆ.
ಎ.1 ರಿಂದ ಮೇ.5 ರ ತನಕ ಬೆಳಗ್ಗೆ 9.30ರಿಂದ ಸಂಜೆ 5.30 ರ ತನಕ 35 ದಿನಗಳ ತರಬೇತಿಯು ನಡೆಯಲಿದ್ದು ಸಂಘದ ವ್ಯಾಪ್ತಿಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶವಿದೆ.
ನಿಗದಿತ ಅರ್ಜಿ ನಮೂನೆ ಸಂಘದ ಕಚೇರಿಯಲ್ಲಿ ಲಭ್ಯವಿದ್ದು ಮಾ.20 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೀಧರ ಕೆ. ಶೆಟ್ಟಿ
ಕುತ್ಯಾರು ಬೀಡು (8884130064) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.