ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಬಂಟ್ಸ್ ಹಾಸ್ಟೆಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಎಲ್ಲಾ ಸಮಾಜಕ್ಕೂ ನಿಗಮ, ಸರಕಾರದಿಂದ ಸಹಾಯ ಸಿಗುತ್ತಿವೆ, ಆದರೆ ಬಂಟರಿಗೆ ಅಂತಹ ಸಹಕಾರ, ನಿಗಮ ಬಂದಿಲ್ಲ. ಇದುವರೆಗೂ ನಾವು ಹೋರಾಟ ಮಾಡಿಲ್ಲ, ಇದರರ್ಥ ನಮಗೆ ಶಕ್ತಿ ಇಲ್ಲ ಎಂದಲ್ಲ. ಬಂಟ ಸಮಾಜದ ಐವರು ಶಾಸಕರಿದ್ದು, ಅವರೇ ನಮ್ಮ ಬೇಡಿಕೆ ಈಡೇರಿಸಬೇಕಿತ್ತು ಇದಕ್ಕಾಗಿ ನಮ್ಮ ಅಗತ್ಯವಿರಲಿಲ್ಲ. ಈಗ ನಮ್ಮ ನಾಯಕರನ್ನು ಸಮಾಜ ಪ್ರಶ್ನಿಸುತ್ತಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಂಟರು, ಬ್ರಾಹ್ಮಣರಿಗೂ ನಿಗಮದ ಭರವಸೆ ನೀಡಲಾಗಿದೆ. ಅದಕ್ಕಿಂತ ಮೊದಲು ಸರಕಾರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. ಬಂಟ ಸಮುದಾಯ ಮೇಲ್ನೋಟಕ್ಕೆ ಅತ್ಯಂತ ಶ್ರೀಮಂತ ಸಮುದಾಯವಾಗಿ ಕಂಡು ಬರುತ್ತಿದ್ದರೂ ಶೇ.25ರಷ್ಟು ಮಂದಿ ಮಧ್ಯಮ ಮತ್ತು ಬಡತನ ರೇಖೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದುವರೆಗೂ ಬಂಟ ಸಮುದಾಯದಕ್ಕೆ ಸಿಗಬೇಕಾದ ಮೀಸಲಾತಿಯನ್ನು ಯಾವುದೇ ಆಡಳಿತ ಪಕ್ಷಗಳು ಕೊಟ್ಟಿಲ್ಲ. ಐದು ಜನ ಶಾಸಕರು ಬಂಟರಾಗಿದ್ದಾರೂ ಸ್ವಸಮುದಾಯಕ್ಕೆ ಸಹಾಯ ಮಾಡಿದರೆ ಈತರ ಸಮುದಾಯಕ್ಕೆ ಕೋಪ ಬರಬಹುದೇ ಎನ್ನುವ ಆಳುಕು ಇರಬಹುದು ಎಂದು ತಿಳಿಸಿದರು. ಬಿಲ್ಲವರಿಗೆ ನಿಗಮ ಆಗಿದ್ದು ಸಂತೋಷ, ಅವರಿಗೆ ಶಾಸಕರು, ಸಚಿವರು ಬೆಂಬಲ ನೀಡಿದ್ದಾರೆ. ಆದರೆ ನಮ್ಮವರು ಏನು ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ರಸ್ತೆ ವಿಚಾರದಲ್ಲಿ ಮೂಲ್ಕಿ ಸುಂದರಾಂ ಶೆಟ್ಟಿಯವರ ಹೆಸರು ಬಂದಾಗ ಎಲ್ಲಾ ಬಂಟರು ಒಗ್ಗಟ್ಟಾಗಿದ್ದರು. ವಿಶ್ವದಾದ್ಯಂತ ಇರುವ ಬಂಟರನ್ನು ತರಿಸಿ ಪ್ರತಿ ಕ್ಷೇತ್ರದಲ್ಲೂ ಓರ್ವ ಬಂಟ ಅಭ್ಯರ್ಥಿಯನ್ನು ಕಣಕ್ಕಿಲಿಸುತ್ತೇವೆ, ಐದು ಸಾವಿರ ಮತಗಳನ್ನು ಪಡೆದರೂ ಗೆಲ್ಲುವ ಅಭ್ಯರ್ಥಿಯನ್ನು ಸೋಲಿಸುವ ಸಾಮರ್ಥ್ಯ ನಮಗಿದೆ ಎಂದು ಎಚ್ಚರಿಸಿದರು.
ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ಬಾಳಿಕೆ, ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕೋಶಧಿಕಾರಿ ಮೋಹನ್ ದಾಸ್ ಶೆಟ್ಟಿ, ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ, ಕರಾವಳಿ ಭಾಗದ ವಿವಿಧ ಬಂಟರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸುದ್ದಿಗೋಷ್ಟಿಯಲ್ಲಿದ್ದರು.