ತುಳುನಾಡ ಐಸಿರಿ ಚಾರಿಟೇಬಲ್ ಟ್ರಸ್ಟ್ (ವಾಪಿ, ದಮ್ಮನ್, ವಲ್ಸಡ್, ಸಿಲ್ವಾಸ ಮತ್ತು ಉಮ್ಮರ್ಗಾಂವ್) ಸಂಯೋಗದೊಂದಿಗೆ ತುಳುನಾಡ ಐಸಿರಿ ಪ್ರಿಮಿಯಾರ್ ಲೀಗ್ ಕ್ರಿಕೆಟ್ ಪಂದ್ಯವು ಕಳೆದ ಭಾನುವಾರ ಗುಜರಾತ್ ರಾಜ್ಯದ ವಾಪಿ ಪ್ರರಿಸರದಲ್ಲಿನ ಕೆ.ಕೆ ಭಂಡಾರಿ ಕ್ರೀಡಾಂಗಣದಲ್ಲಿ ನಡೆಸಲ್ಪಟ್ಟಿತು.ತುಳುನಾಡ ಐಸಿರಿಯ ಅಧ್ಯಕ್ಷರು ಬಾಲಕೃಷ್ಣ ಎಸ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಪಂದ್ಯಾಟದಲ್ಲಿ ಸ್ಥಾನೀಯ ತಂಡಗಳು ಭಾಗವಹಿಸಿದ್ದವು.
ವಾಪಿ ಕನ್ನಡ ಸಂಘದ ವಿಶ್ವಸ್ಥ ಪಿ.ಎಸ್ ಕಾರಂತ ಅವರು ರಿಬ್ಬನ್ ಕತ್ತರಿಸಿ ಕ್ರಿಕೆಟ್ ಪಂದ್ಯಾಟಕೆ ಚಾಲನೆ ನೀಡಿದರು. ತುಳುನಾಡ ಐಸಿರಿ ಗೌರವಾಧ್ಯಕ್ಷ ಹಾಗೂ ಬಿಲ್ಲವರ ಸಂಘ ವಾಪಿ ಅಧ್ಯಕ್ಷ ಸದಾಶಿವ ಜಿ.ಪೂಜಾರಿ ಪ್ರಥಮ ಬ್ಯಾಟಿಂಗ್ ಮಾಡಿ ಪಂದ್ಯಕ್ಕೆ ವಿಧ್ಯುಕ್ತವಾಗಿ ಚಾಲನೆಯನ್ನಿತ್ತರು. ಅಥಿüತಿಗಳಾಗಿ ರಾಧಾಕೃಷ್ಣ ಮೂಲ್ಯ ಸೂರತ್, ಹರೀಶ್ ವೆಂಕಪ್ಪ ಪೂಜಾರಿ, ಸಂಜಯ ಮರ್ಪಲಿ ಕಲ್ಪವೃಕ್ಷ ಹೊಡೆದು ಕ್ರೀಡಾ ಕಾರ್ಯಕ್ರಮಕ್ಕೆ ಅನುವು ಮಾದಿ ಶುಭಕೋರಿದರು.
ಎಸ್ಕೆಸಿ ದಮನ್, ತುಳುನಾಡ ಐಸಿರಿ-ಎ, ತುಳುನಾಡ ಐಸಿರಿ-ಬಿ, ಸಿಲ್ವಾಸ ವರಿಯರ್ಸ್, ಕೆಎಫ್ಸಿ-ಎ, ಕೆಎಫ್ಸಿ-ಬಿ, ಕೆಎಫ್ಸಿ ಸೂರತ್, ಅಂಕಲೇಶ್ವರ್ ತುಳು ಸಂಘ, ಶಶಿ ಹಂಟರ್ ಬರೋಡ ತಂಡಗಳು ಭಾಗವಹಿಸಿದ್ದವು. ಎಸ್ಕೆಸಿ ದಮನ್ ಪ್ರಥಮ ಸ್ಥಾನದೊಂದಿಗೆ ವಿಜೇತವಾಗಿದ್ದು ಶಶಿ ಹಂಟರ್ ಬರೋಡ ದ್ವಿತೀಯ ಸ್ಥಾನ ತನ್ನದಾಗಿಸಿತು. ಹೆಚ್.ಆರ್ ಚೇತನ್ ಗೌಡ (ಅತ್ಯುತ್ತಮ ಆಟಗಾರ), ಸುರೇಶ್ ಪೂಜಾರಿ ಬರೋಡ (ಅತ್ಯುತ್ತಮ ಬೌಲರ್), ವಿಜಯ ನಾಯ್ಕ್ ದಮನ್ (ಅತ್ಯುತ್ತಮ ಹಿಡಿತಗಾರ), ಚೇತನ್ ಗೌಡ (ಅತ್ಯುತ್ತಮ ವಿಕೇಟ್ ಕಿಪರ್), ಪ್ರದೀಪ್ ಗೌಡ ಸೂರತ್ (ಅತ್ಯುತ್ತಮ ಫಿಲ್ಡಿಂಗ್), ಸುನಿಲ್ ಶೆಟ್ಟಿ ಬರೋಡ (ಅತ್ಯುತ್ತಮ ಬ್ಯಾಟ್ಸ್ಮ್ಯಾನ್), ಅವಿನಾಶ್ ಶೆಟ್ಟಿ ದಮನ್ (ಮ್ಯಾನ್ ಆಫ್ ದ ಮ್ಯಾಚ್), ಸಿಲ್ವಾಸ ವರಿಯರ್ಸ್ (ಅತ್ಯುತ್ತಮ ಪ್ರದರ್ಶನ ತಂಡ) ಪ್ರಶಸ್ತಿಗಳಿಗೆ ಭಾಜನರಾದರು. ಅತಿಥಿಗಳು ವಿಜೇತರಿಗೆ ಸ್ಮರಣಿಕೆ, ವಿಜೇತ ಫಲಕಗಳನ್ನಿತ್ತು ಹಾಗೂ ಎಲ್ಲ ತಂಡಗಳ ನಾಯಕರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.
ತುಳುನಾಡ ಐಸಿರಿ ಉಪಾಧ್ಯಕ್ಷ ನವೀನ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಉದಯ ಬಿ. ಶೆಟ್ಟಿ, ರಜನಿ ಬಾಲಕೃಷ್ಣ ಶೆಟ್ಟಿ, ಸಂಜೀವಿನಿ ಶೆಟ್ಟಿ, ಹೆಚ್.ಆರ್ ಚೇತನ್ ಗೌಡ, ನಾಗರಾಜ್ ಪುತ್ರನ್ ಮತ್ತಿತರರ ಸಹಯೋಗದಲ್ಲಿ ನಡೆಸಲ್ಪಟ್ಟ ಕ್ರೀಡೆಯು ಶಾಲಿನಿ ಶ್ರೀಧರ್ ಶೆಟ್ಟಿ ಮತ್ತು ಪ್ರಫುಲ್ಲಾ ನಾಗರಾಜ್ ಶೆಟ್ಟಿ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭ ಗೊಂಡಿತು. ಬಾಲಕೃಷ್ಣ ಶೆಟ್ಟಿ ಅಥಿüತಿಗಳು ಮತ್ತು ಪ್ರಾಯೋಜಕರನ್ನು ಗೌರವಿಸಿ ಅಭಿನಂದಿಸಿದರು. ಕ್ರೀಡಾ ಪ್ರಧಾನ ಸಂಯೋಜಕ ಸುಕೇಶ್ ಶೆಟ್ಟಿ (ಹೋಟೆಲ್ ಹನಿ ಗಾರ್ಡನ್) ಸ್ವಾಗತಿಸಿ ಕೊನೆಯಲ್ಲಿ ಧನ್ಯವದಿಸಿದರು.