ಮುಂಬಯಿಯ ಉದ್ಯಮಿ ಹೇರಂಭ ಇಂಡಸ್ಟ್ರೀಸ್ ಇದರ ಆಡಳಿತ ನಿರ್ದೇಶಕರಾದ ಕೂಳೂರು ಕನ್ಯಾನ ರಘುರಾಮ ಶೆಟ್ಟಿಯವರು ಪುಣೆ ಬಂಟರ ಸಂಘದ ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆಯ ನೂತನ ವಿಶ್ವಸ್ಥರಾಗಿ ನೇಮಕಗೊಂಡಿದ್ದಾರೆ.
ಮುಂಬಯಿಯ ಖ್ಯಾತ ಉದ್ಯಮಿ, ಸಮಾಜ ಸೇವಕ ಪುಣೆ ಬಂಟರ ಸಂಘದ ಕಲ್ಪವೃಕ್ಪ ಸಮಾಜಕಲ್ಯಾಣ ಯೋಜನೆಯ ವಿಶ್ವಸ್ಥರಾದ ಕನ್ಯಾನ ಸದಾಶಿವ ಶೆಟ್ಟಿಯವರ ಸಹೋದರನಾದ ರಘುರಾಮ ಶೆಟ್ಟಿಯವರು ಇತ್ತೀಚಿಗೆ ಪುಣೆ ಬಂಟರ ಭವನಕ್ಕೆ ಭೇಟಿ ನೀಡಿದ್ದು ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇವರ ಅಪೇಕ್ಷೆಯ ಮೇರೆಗೆ ಸಂಘದ ಅಧ್ಯಕ್ಷರ ದೂರದೃಷ್ಟಿ ಹಾಗೂ ಸಮಾಜ ಪರ ಚಿಂತನೆಗಳು ಹಾಗೂ ಸಂಘದ ಮುಖಾಂತರ ನಡೆಯುತ್ತಿರುವ ಸಮಾಜಮುಖಿ ಯೋಜನೆಗಳನ್ನು ಮೆಚ್ಚಿ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಸಂಘದ ಭವಿಷ್ಯದ ಯೋಜನೆಗಳಿಗೆ ಸಹಕಾರ ನೀಡುವುದಾಗಿ ಅವರು ಈ ಸಂದರ್ಭ ತಿಳಿಸಿದ್ದಾರೆ. ಅವರನ್ನು ಸಂತೋಷ್ ಶೆಟ್ಟಿಯವರು ನೆನಪಿನ ಕಾಣಿಕೆ ನೀಡಿ ಸಮ್ಮಾನಿಸಿದರು. ಈ ಸಂದರ್ಭ ಪುಣೆಯ ಹೋಟೆಲ್ ಉದ್ಯಮಿ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಹೆಜಮಾಡಿ ಪಟೇಲರಮನೆ ಜಯಂತ್ ಕುಮಾರ್ ಶೆಟ್ಟಿಯವರು ಉಪಸ್ಥಿತರಿದ್ದರು.