ಶ್ರೀ ಅಯ್ಯಪ್ಪಸ್ವಾಮಿ ಯಕ್ಷಗಾನ ಮಂಡಳಿಯ 7 ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಮನೋರಂಜನೆಯಂಗವಾಗಿ “ಸುಧನ್ವಾರ್ಜುನ “ಯಕ್ಷಗಾನ ಪ್ರದರ್ಶನವು ಫೆ.12 ರಂದು ರವಿವಾರ ಸಂಜೆ ಗಂಟೆ 3 ರಿಂದ ಪುಣೆ ಕನ್ನಡ ಸಂಘದ ಕನ್ನಡ ಮಾಧ್ಯಮ ಹೈಸ್ಕೂಲ್ ನ ದಿ . ಗುಂಡೂರಾಜ್ ಎಂ ಶೆಟ್ಟಿ ಸಭಾಗೃಹದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ಪುಣೆ ಕನ್ನಡ ಸಂಘದ ಅಧ್ಯಕ್ಷರಾದ ಕುಶಲ್ ಹೆಗ್ಡೆ, ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಸುಭಾಷ್ ಶೆಟ್ಟಿ, ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ ಕಡ್ತಲ, ಬಂಟ್ಸ್ ಅಸೋಸಿಯೇಷನ್ ಪುಣೆ ಮಾಜಿ ಅಧ್ಯಕ್ಷರಾದ ಕಟ್ಟಿಂಗೇರಿಮನೆ ಸುಭಾಶ್ಚಂದ್ರ ಹೆಗ್ಡೆ, ತುಳುಕೂಟದ ಗೌರವಾಧ್ಯಕ್ಷರಾದ ತಾರಾನಾಥ ಕೆ ರೈ ಮೇಗಿನಗುತ್ತು, ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಪುಣೆ ಬಂಟರ ಸಂಘದ ಜೊತೆ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ನಿಟ್ಟೆ, ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಸಿ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗಣೇಶ್ ಪೂಂಜಾ ಉಪಸ್ಥಿತರಿರಲಿದ್ದಾರೆ.
ಈ ಸಂದರ್ಭ ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ ಹಾಗೂ ಸಾಹಿತಿ ಇಂದಿರಾ ಎಂ ಸಾಲ್ಯಾನ್, ಪುಣೆ ಬಂಟರ ಸಂಘದ ಕಲ್ಪವೃಕ್ಷ ಸಮಾಜಕಲ್ಯಾಣ ಯೋಜನೆಯ ಕಾರ್ಯಾಧ್ಯಕ್ಷ ಹಾಗೂ ಸಮಾಜಸೇವಕ ಸತೀಶ್ ಆರ್ ಶೆಟ್ಟಿ ಹಾಗೂ ಯುವ ಯಕ್ಷಗಾನ ಕಲಾವಿದ ಜಗದೀಪ್ ಶೆಟ್ಟಿಯವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಗುವುದು.
ಕನ್ನಡ ಯಕ್ಷಗಾನ ಪ್ರದರ್ಶನ
ಕರಾವಳಿಯ ಹೆಸರಾಂತ ಕಲಾವಿದರು ಹಾಗೂ ಮಂಡಳಿಯ ನುರಿತ ಕಲಾವಿದರ ಸಮ್ಮಿಲನದೊಂದಿಗೆ “ಸುಧನ್ವಾರ್ಜುನ ಕಾಳಗ “ಎಂಬ ಕನ್ನಡ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಭಾಗವತರಾಗಿ ಕರಾವಳಿಯ ನಾಮಾಂಕಿತ ಭಾಗವತರಾದ ಹೊಸಮೂಲೆ ಗಣೇಶ್ ಭಟ್, ಚೆಂಡೆಯ ಗಂಡುಗಲಿ ಶ್ರೀಧರ ಎಡಮಲೆ, ಮದ್ದಳೆಯ ಮಾಂತ್ರಿಕ ಸುಬ್ರಮಣ್ಯ ಶಾಸ್ತ್ರಿ ಮಣಿಮುಂಡ ಮುಮ್ಮೇಳದಲ್ಲಿ ಗಣೇಶ್ ಶೆಟ್ಟಿ ಮುಂಬಯಿ, ವಾಸುದೇವ ರೈ ಬೆಳ್ಳಾರೆ, ನಾಗೇಶ್ ಕುಮಾರ್ ಪೊಳಲಿ, ವಿಕೇಶ್ ರೈ ಶೇಣಿ, ಸುಕೇಶ್ ಶೆಟ್ಟಿ ಎಣ್ಣೆಹೊಳೆ, ಜಗದೀಪ್ ಶೆಟ್ಟಿ, ನಯನಾ ಸಿ ಶೆಟ್ಟಿ, ನಾಗೇಶ್ ಕುಲಾಲ್ ಕಡಂದಲೆ, ಸುದರ್ಶನ್ ಸುವರ್ಣ, ಕುಮಾರಿ ಸಹನಾ ಕುಲಾಲ್ ಹಾಗೂ ಕುಮಾರಿ ನಿಶಾ ಪೂಜಾರಿ ಸಹಕರಿಸಲಿದ್ದಾರೆ .
ಸಂಘ ನಡೆದು ಬಂದ ದಾರಿ.
ಕಳೆದ ೭ ವರ್ಷಗಳ ಹಿಂದೆ ಪುಣೆಯಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಉಳಿಸಿ ಬೆಳೆಸುವ ಹಾಗೂ ಹೊಸ ಕಲಾವಿದರಿಗೆ ನಾಟ್ಯ ತರಬೇತಿ ನೀಡಿ ಕಲಾವಿದರನ್ನಾಗಿ ತಯಾರುಗೊಳಿಸುವ ಉದ್ದೇಶದಿಂದ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಲಾಯಿತು. ಪುಣೆಯ ಅಜಾತಶತ್ರು ದಿ .ಓಣಿಮಜಲು ಜಗನ್ನಾಥ ಶೆಟ್ಟಿಯವರ ಶುಭಾಶೀರ್ವಾದದಿಂದ ಅವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡ ಸಂಘವು ಯಕ್ಷಗಾನ ಕಲಿಕಾ ಕೇಂದ್ರವನ್ನು ಆರಂಭಿಸಿ ಈಗಾಗಲೇ ೪೦ ಕ್ಕೂ ಹೆಚ್ಚು ಪುರುಷರು, ಮಕ್ಕಳು ಹಾಗೂ ಮಹಿಳೆಯರಿಗೆ ನಾಟ್ಯ ತರಬೇತಿಯನ್ನು ನೀಡಿ ಕಲಾವಿದರನ್ನಾಗಿ ತಯಾರುಗೊಳಿಸಿ ವೇದಿಕೆಯನ್ನು ಒದಗಿಸಿಕೊಟ್ಟಿದೆ. ಹಲವಾರು ಯಕ್ಷಗಾನ ಪ್ರದರ್ಶನಗಳನ್ನು ಯಶಸ್ವಿಯಾಗಿ ನಡೆಸಿ ಪುಣೆಯ ಕಲಾರಸಿಕರ ಮನಗೆದ್ದ ಹೆಗ್ಗಳಿಕೆ ತಂಡದ್ದಾಗಿದೆ. ಅಲ್ಲದೆ ಇಲ್ಲಿನ ಮರಾಠಿ ಭಾಷಿಕರಿಗೂ ಯಕ್ಷಾಗಾನ ಕಲಿಕೆಯನ್ನು ಮಾಡಿದೆ. ಒಂದು ವರ್ಷ ಚಿಕ್ಕಮೇಳದೊಂದಿಗೆ ಕಲಾಭಿಮಾನಿಗಳ ಮನೆಮನೆಗೆ ತೆರಳಿ ಯಕ್ಷಗಾನ ಸವಿಯುಣಿಸುವ ಕಾರ್ಯವನ್ನೂ ಸಂಘ ಮಾಡಿದೆ. ಅಲ್ಲದೆ ಸಂಘದ ವಾರ್ಷಿಕೋತ್ಸವ ಸಂದರ್ಭ ಹಿರಿಯ ಕಲಾಪೋಷಕರಿಗೆ ಹಾಗೂ ಕಲಾವಿದರಿಗೆ ಸನ್ಮಾನಿಸುತ್ತಾ ಬಂದಿದೆ. ಅಗಲಿದ ಯಕ್ಷಗಾನ ಕಲಾವಿದರ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುವ ಕಾರ್ಯವನ್ನೂ ಸಂಘ ಮಾಡುತ್ತಾ ಬಂದಿದೆ. ಸಂಘದ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ನಿಟ್ಟೆ ಹಾಗೂ ಕಿರಣ್ ಬಿ ರೈ ಕರ್ನೂರು, ಕಾರ್ಯದರ್ಶಿ ಜಗದೀಪ್ ಶೆಟ್ಟಿ, ಕೋಶಾಧಿಕಾರಿ ವಿಕೇಶ್ ರೈ ಶೇಣಿ, ಜತೆ ಕಾರ್ಯದರ್ಶಿ ನಯನಾ ಸಿ ಶೆಟ್ಟಿ, ಜತೆ ಕೋಶಾಧಿಕಾರಿ ಗೀತಾ ಡಿ ಪೂಜಾರಿ ಸೇವೆ ಸಲ್ಲಿಸುತ್ತಿದ್ದಾರೆ. ತಾರಾನಾಥ ರೈ ಮೇಗಿನಗುತ್ತು, ಚಂದ್ರಕಾಂತ ಹಾರಕೂಡೆ, ಸದಾನಂದ ತಾವರಗೆರೆ, ಸುದರ್ಶನ್ ಸುವರ್ಣ, ಸುಭಾಷ್ ರೈ ಕಾಟುಕುಕ್ಕೆ, ಸುಕೇಶ್ ಶೆಟ್ಟಿ ಎಣ್ಣೆಹೊಳೆ, ಸತೀಶ್ ಶೆಟ್ಟಿ ಕುರ್ಕಾಲ್, ನಾಗೇಶ್ ಕುಲಾಲ್, ನವಿತಾ ಎಸ್ ಪೂಜಾರಿ ಹಾಗೂ ಆಶಾ ಆರ್ ಪೂಜಾರಿ ಸಂಘದ ಗೌರವ ಸಲಹಾ ಸಮಿತಿ ಸದಸ್ಯರಾಗಿದ್ದಾರೆ.