ಪುರಾಣ ಪ್ರಸಿದ್ಧ ಐತಿಹಾಸಿಕ ಹಿನ್ನಲ್ಲೆಯುಳ್ಳ ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ಇದರ ವಾರ್ಷಿಕ ಮನ್ಮಹಾರಥೋತ್ಸವ ಕಾರ್ಯಕ್ರಮ ಇದೇ ಬರುವ ಫೆ.5 ಮತ್ತು 6 ರಂದು ನಡೆಯಲಿದ್ದು ಆ ಪ್ರಯುಕ್ತ ಜಾತ್ರೋತ್ಸವಕ್ಕೆ ವಿಶೇಷ ಮೆರುಗು ನೀಡಯವ ಉದ್ದೇಶದಿಂದ ಹಿರೇಮಹಾಲಿಂಗೇಶ್ವರ ಮಿತ್ರ ವೃಂದದ ವತಿಯಿಂದ 4ದಿನಗಳ ಕಾಲ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮಿತ್ರ ವೃಂದದ ವತಿಯಿಂದ ನಡೆಯುವ 47ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ ಫೆ.3 ಶುಕ್ರವಾರ ಸಂಜೆ 6.00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಚಾಲನೆ ದೊರಕಲಿದ್ದು ಅದೇ ದಿನ ಸೇವಾ ಸಂಗಮ ಶಿಶು ಮಂದಿರ ಕೋಟ ಬಾಲ ಗೋಕುಲ ಪುಟಾಣಿಗಳಿಂದ ಕಾರ್ಯಕ್ರಮ ವೈವಿದ್ಯ ,ರಾತ್ರಿ 9.00ಕ್ಕೆ ಶಿವಾನಿ ಮ್ಯುಸಿಕಲ್ ಇವರಿಂದ ಸಂಗೀತ ರಸಮಂಜರಿ, ಫೆ.4ರಂದು ಶನಿವಾರ ಸಂಜೆ 7ಗ ಹಿರೇಮಹಾಲಿಂಗೇಶ್ಚರ ಮಿತ್ರವೃಂದ ಮಕ್ಕಳಿಂದ ನೃತ್ಯ ಸಿಂಚನ,ರಾತ್ರಿ 9ಕ್ಕೆ ಓಂಕಾರ್ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಇವರಿಂದ ಹಾಸ್ಯಮಯ ನಗೆ ನಾಟಕ ಅಗೋಚರ, ಫೆ.5ರಂದು ರಥೋತ್ಸವದ ಅಂಗವಾಗಿ ಮಹಾ ಅನ್ನಸಂತರ್ಪಣೆ ಹಾಗೂ ರಥೋತ್ಸವದಲ್ಲಿ ವಿಶೇಷ ಆಕರ್ಷಕ ಮೆರವಣಿಗೆ, ಸುಡುಮದ್ದು ಪ್ರದರ್ಶನ
ನಡೆಯಲಿದೆ. ರಾತ್ರಿ ಪೇರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿಯಿಂದ ಬಯಲಾಟ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ.
ಫೆ.6ರಂದು ರಾತ್ರಿ 8.00ಕ್ಕೆ ಒಕುಳಿಯ ಅಂಗವಾಗಿ ಪಂಚವರ್ಣ ಯುವಕ ಮಂಡಲದ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಶರಸೇತು ಹಾಗೂ ಸುಭದ್ರ ಕಲ್ಯಾಣ ಪ್ರಸಂಗ ಪ್ರದರ್ಶನಗೊಳ್ಳಲಿದೆ.ಎಂದು ಪ್ರಕಟಣೆ ತಿಳಿಸಿದೆ.