ಗೌರವಾನ್ವಿತ ಜಿಲ್ಲಾ ಗವರ್ನರ್ ಲಯನ್ ಡಾ. ಎಮ್ ಕೆ ಭಟ್ ರವರು ಲಯನ್ ಜಿಲ್ಲಾ ಪ್ರಥಮ ಮಹಿಳೆ, ಅವರ ಪತ್ನಿ ಲಯನ್ ಸವಿತಾ ಎಮ್ ಕೆ ಭಟ್ ರವರೊಂದಿಗೆ ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಗೆ ಅಧೀಕೃತ ಭೇಟಿ ನೀಡಿದರು.
ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾ ಭವನ ದಲ್ಲಿ ಜರುಗಿದ ಕಾರ್ಯಕ್ರಮಕ್ಕೆ, ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಅಧ್ಯಕ್ಷರಾದ ಲಯನ್ ರಾಜಾರಾಮ್ ಶೆಟ್ಟಿ ಕಲ್ಕಟ್ಟೆ, ಕಾರ್ಯದರ್ಶಿ ಲಯನ್ ಅಜಿತ್ ಶೆಟ್ಟಿ ಕೊತ್ತಾಡಿ ಹಾಗೂ ಕೋಶಾಧಿಕಾರಿ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ ಹಾಗೂ ಪದಾಧಿಕಾರಿಗಳು ಹಾಗೂ ಸದಸ್ಯರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿಕೊಂಡರು.
ಲಯನ್ ಜಿಲ್ಲಾ ಗವರ್ನರ್ ಡಾ. ಎಮ್ ಕೆ ಭಟ್ ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ B.O.D ಸಭೆ ನಡೆಸಿದರು.
ಲಯನ್ ಬನ್ನಾಡಿ ಪ್ರಭಾಕರ್ ಶೆಟ್ಟಿಯವರ ಪ್ರಾರ್ಥನೆ ಮೂಲಕ, ಸಮಯಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಲಯನ್ ಜಿಲ್ಲಾ ಪ್ರಥಮ ಮಹಿಳೆ ಲಯನ್ ಸವಿತಾ ಎಮ್ ಕೆ ಭಟ್ ರವರನ್ನು ಶ್ರೀಮತಿ ರಾಧಿಕಾ ರಾಜಾರಾಮ್ ಶೆಟ್ಟಿ, ಶ್ರೀಮತಿ ವಸಂತಿ ಸುಗುಣಾಕರ್ ಶೆಟ್ಟಿ ಹಾಗೂ ಶ್ರೀಮತಿ ಪಾರ್ವತಿ ಸುರೇಂದ್ರ ಶೆಟ್ಟಿ ಯವರು ಸಾಂಪ್ರದಾಯಿಕ ವಾಗಿ ಸ್ವಾಗತಿಸಿದರು.
ಕ್ಲಬ್ ನ ಕಾರ್ಯದರ್ಶಿ ಲಯನ್ ಅಜಿತ್ ಶೆಟ್ಟಿ ಕೊತ್ತಾಡಿಈ ವರ್ಷ ಕ್ಲಬ್ ಮಾಡಿದ ಸೇವಾ ಚಟುವಟಿಕೆಗಳ ವರದಿಯನ್ನು ಓದಿ ಹೇಳಿದರು.
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಯ ನಿಕಟ ಪೂರ್ವ ಅಧ್ಯಕ್ಷರಾದ ಲಯನ್ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ ಲಯನ್ ಫ್ಲಾಗ್ ಸೆಲ್ಯುಟೇಷನ್ ಹಾಗೂ ಫಸ್ಟ್ ವೈಸ್ ಪ್ರೆಸಿಡೆಂಟ್ ಲಯನ್ ಸುರೇಂದ್ರ ಶೆಟ್ಟಿ ಕೊಮೆ ಅಚ್ಲಾಡಿ ಲಯನ್ ಕೋಡ್ ಆಫ್ ಕಂಡಕ್ಟ್ ಓದಿದರು.
ಸಭಾ ಕಾರ್ಯಕ್ರಮದ ಸೇವಾ ಚಟುವಟಿಕೆಯ ಅಂಗವಾಗಿ ಅಚ್ಲಾಡಿಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ನೂತನ ವಾಗಿ ಮರು ನಿರ್ಮಾಣಗೊಳಿಸಿದ ಬಸ್ ತಂಗುದಾಣದ ಉದ್ಘಾಟನೆಯನ್ನು ಮಾಡಲಾಯಿತು, ಲಯನ್ ಸಪ್ನಾ ಸುರೇಶ್ ರವರು ನೀಡಿದ ಒಂದು ವಾಟರ್ ಫಿಲ್ಟರ್ ನ್ನು ಮಧುವನ ಶ್ರೀ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ಗೆ ಹಸ್ತತರಿಸಲಾಯಿತು.
ಅತ್ಯುತ್ತಮ ಸಮಾಜ ಸೇವೆಯನ್ನು ಮಾಡುತ್ತಿರುವ ಸ್ಥಳಿಯ ನಿವಾಸಿ ಬನ್ನಾಡಿ ವಾಸು ಪೂಜಾರಿ ಯವರನ್ನು ರವರನ್ನು ಸನ್ಮಾನಿಸಲಾಯಿತು, ಆರೋಗ್ಯ ಸಮಸ್ಯೆಯಿಂದಿರುವ ಅಚ್ಲಾಡಿಯ ಕೃಷ್ಣ ಮರಕಾಲ ರವರಿಗೆ ಆರ್ಥಿಕ ಸಹಾಯ ನೀಡಲಾಯಿತು.
ಮಾಜಿ ಕಾರ್ಯದರ್ಶಿ ಲಯನ್ ಬನ್ನಾಡಿ ಶರತ್ ಶೆಟ್ಟಿ ಗೌರವಿಸಲ್ಪಟ್ಟ ಶ್ರೀ ಬನ್ನಾಡಿ ವಾಸು ಪೂಜಾರಿಯವರ ಪರಿಚಯ ವಾಚಿಸಿದರು.
ಲಯನ್ ಪ್ರೊಫೆಸರ್ ಯಾಳಕ್ಲು ಚಂದ್ರ ಶೇಖರ್ ಶೆಟ್ಟಿ ಯವರು ಜಿಲ್ಲಾ ಗವರ್ನರ್ ರವರ ಪರಿಚಯ ವಾಚಿಸಿದರು.
ಗೌರವಾನ್ವಿತ ಜಿಲ್ಲಾ ಗವರ್ನರ್ ಲಯನ್ ಡಾ. ಎಮ್ ಕೆ. ಭಟ್ ರವರು, ” ಕೇವಲ ನಾಲ್ಕನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಲಯನ್ಸ್ ಕ್ಲಬ್ ಬನ್ಮಾಡಿ ವಡ್ಡರ್ಸೆ, ಇಷ್ಟೊಂದು ಸೇವಾ ಕಾರ್ಯಕ್ರಮಗಳನ್ನು ಮಾಡಿ, ಜಿಲ್ಲಾ ಲಯನ್ಸ್ ನಲ್ಲಿ ಅತ್ಯುತ್ತಮ ಕ್ಲಬ್ ಗಳಲ್ಲಿ ಒಂದಾಗಿ Out Standing” ಕ್ಲಬ್ ಆಗಿ ಮೂಡಿ ಬಂದಿದೆ ಎಂದರಲ್ಲದೆ, ಕ್ಲಬ್ ನ ಸೇವಾ ಚಟುವಟಿಕೆ, ಕಾರ್ಯವೈಖರಿ ಗಳನ್ನು ನೋಡಿ, ಕ್ಲಬ್ ಸದಸ್ಯರ ಸಹಕಾರಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ದ್ವಿತೀಯ ಉಪ ಜಿಲ್ಲಾ ಗವರ್ನರ್ ಲಯನ್ ಮಹಮ್ಮದ್ ಹನೀಫ್, ರೀಜನ್ VIII ರ ರೀಜನ್ ಚಯರ್ ಪರ್ಸನ್ ಲಯನ್ ಕೋಟೇಶ್ವರ ಭೋಜರಾಜ್ ಶೆಟ್ಟಿ, ಝೋನ್ II ರ ಝೋನ್ ಚಯರ್ ಪರ್ಸನ್ ಲಯನ್ ಇಂಜಿನಿಯರ್ ಪ್ರವೀಣ್ ಕುಮಾರ್ ಶೆಟ್ಟಿ, ಎಕ್ಸ್ಟೆನ್ಷನ್ ಚಯರ್ ಮ್ಯಾನ್ ಯನ್ ದಿನಕರ ಶೆಟ್ಟಿ ಎಮ್, ಶುಭಾಶಂಸನೆಗೈದರು.
ಲಯನ್ ರಾಜೀವ್ ಕೋಟ್ಯಾನ್, ಲಯನ್ ವಿದ್ಯಾಲತಾ ಯು ಶೆಟ್ಟಿ ಹಾಗೂ ಲಯನ್ ಸಪ್ನಾ ಸುರೇಶ್ ಉಪಸ್ಥಿತರಿದ್ದರು.
ಜಿಲ್ಲಾ ಕ್ಯಾಬಿನೆಟ್ ಸದಸ್ಯರು,
ಇತರ ಕ್ಲಬ್ ಗಳ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಕುಟುಂಬ ಸದಸ್ಯರು ಹಾಗೂ ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ನ ಎಲ್ಲಾ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರು ಹಾಜರಿದ್ದರು.
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಇದರ ಕೋಶಾಧಿಕಾರಿ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ ವಂದಿಸಿದರು. ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ರಾಜಾರಾಮ್ ಶೆಟ್ಟಿ ಕಲ್ಕಟ್ಟೆಇವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿ, ಅಭ್ಯಾಗತರನ್ನು ಸ್ವಾಗತಿಸಿದರು.
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಸ್ಥಾಪಕಾಧ್ಯಕ್ಷರಾದ ಲಯನ್ ಬನ್ನಾಡಿ ಸೋಮನಾಥ್ ಹೆಗ್ಡೆ, ಕಾರ್ಯಕ್ರಮ ನಿರೂಪಿಸಿದರು.