ಪುಣೆ ಬಂಟರ ಸಂಘದ ವಾರ್ಷಿಕ ಸ್ನೇಹಸಮ್ಮಿಲನವು ಜನವರಿ 26 ರಂದು ಸಂಘದ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದಲ್ಲಿ ನಡೆಯಲಿದ್ದು ಈ ಬಗ್ಗೆ ಚರ್ಚಿಸಲು ಪೂರ್ವಭಾವಿ ಸಭೆಯನ್ನು ಸ್ವಾರ್ಗೆಟ್ ನಲ್ಲಿರುವ ಹೋಟೆಲ್ ಅಣ್ಣಾಚಿ ಚಾವಡಿಯಲ್ಲಿ ನಡೆಸಲಾಯಿತು. ಈ ಸಂದರ್ಭ ಸಭೆಯ ಅಧ್ಯಕ್ಷತೆ ವಹಿಸಿದ್ದ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಸ್ವಾಗತಿಸಿ ಮಾತನಾಡಿ ಪ್ರತೀವರ್ಷ ನಮ್ಮ ಸಂಘದ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭವು ಜ 26 ಕ್ಕೆ ನಡೆಯುತ್ತಿದ್ದು ಈ ವರ್ಷದ ಕಾರ್ಯಕ್ರಮವನ್ನು ಸ್ಮರಣೀಯವಾಗಿಸುವಲ್ಲಿ ವಿಶೇಷ ರೀತಿಯಲ್ಲಿ ಶಿಸ್ತುಬದ್ಧವಾಗಿ ಆಯೋಜಿಸುವಲ್ಲಿ ನಾವು ಸಾಕಷ್ಟು ಪೂರ್ವತಯಾರಿಯನ್ನು ಮಾಡಬೇಕಾಗಿದೆ. ಈ ವರ್ಷ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿರುವ ಈ ಉತ್ಸವದಲ್ಲಿ ಸಮಾಜದ ಗಣ್ಯ ಅತಿಥಿಗಳೂ ಪಾಲ್ಗೊಳ್ಳಲಿದ್ದಾರೆ. ಅಪರಾಹ್ನ 2:30 ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾಜಿ ಸಚಿವ ರಮಾನಾಥ ರೈ ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ವಿ ಕೆ ಗ್ರೂಪ್ ಸಿಎಂಡಿ ಕರುಣಾಕರ ಎಂ ಶೆಟ್ಟಿ, ಎನ್ ಬಿ ಎಸ್ & ಕಂ ಮುಂಬಯಿಯ ಸಿಎ . ಎನ್ .ಬಿ . ಶೆಟ್ಟಿ, ಹುಬ್ಬಳ್ಳಿ -ಧಾರವಾಡ ಬಂಟರ ಸಂಘದ ಅಧ್ಯಕ್ಷರಾದ ಸುಗ್ಗಿ ಸುಧಾಕರ ಶೆಟ್ಟಿ ಹಾಗೂ ಫೆಮಿನಾ ಮಿಸ್ ಇಂಡಿಯಾ -2022 ವಿಜೇತೆ ಸಿನಿ ಶೆಟ್ಟಿ ಆಗಮಿಸಲಿದ್ದಾರೆ. ಈ ಸಂದರ್ಭ ದಿ. ಗುಂಡೂರಾಜ್ ಎಂ ಶೆಟ್ಟಿ ಹೆಸರಿನಲ್ಲಿ ಕೊಡಮಾಡುವ ವರ್ಷದ ಶ್ರೇಷ್ಠ ಸಮಾಜಸೇವಕ ಪ್ರಶಸ್ತಿಯನ್ನು ವಿ ಕೆ ಗ್ರೂಪ್ ಸಿಎಂಡಿ ಕರುಣಾಕರ ಎಂ ಶೆಟ್ಟಿ ಯವರಿಗೆ ಪ್ರದಾನಿಸಲಾಗುವುದು. ಸಂಘದ ಪ್ರತಿಯೋರ್ವ ಪದಾಧಿಕಾರಿಗಳೂ ಒಂದೊಂದು ಜವಾಬ್ದಾರಿಯನ್ನು ವಹಿಸಿಕೊಂಡು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿಸುವಲ್ಲಿ ಸಹಕಾರ ನೀಡಬೇಕು. ನಮ್ಮ ಭವನದ ದಾನಿಗಳನ್ನು ಹಾಗೂ ಪುಣೆಯಲ್ಲಿರುವ ಪ್ರತಿಯೋರ್ವ ಸಮಾಜಬಾಂಧವರನ್ನೂ ಈ ಕಾರ್ಯಕ್ರಮಕ್ಕೆ ಆಮಂತ್ರಿಸಿ ಸಮಾರಂಭದಲ್ಲಿ ಭಾಗಿಯಾಗುವಂತೆ ವಿನಂತಿಸಬೇಕಾಗಿದೆ. ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ, ಉತ್ತರ ಹಾಗೂ ದಕ್ಷಿಣ ಪ್ರಾದೇಶಿಕ ಸಮಿತಿಗಳ ಎಲ್ಲಾ ಸದಸ್ಯರೂ ಒಗ್ಗಟ್ಟಿನಿಂದ ಸಹಕಾರ ನೀಡಿ ತಮಗೆ ನೀಡಿದ ಜವಾಬ್ದಾರಿಗಳನ್ನು ನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಕೆ ಹೆಗ್ಡೆ ವಾರ್ಷಿಕೋತ್ಸವದ ಸಿದ್ಧತೆಗಳಿಗಾಗಿ ರಚಿಸಿದ ವಿವಿಧ ಸಮಿತಿಗಳ ಮಾಹಿತಿಯಿತ್ತರು .
ಸಭೆಯಲ್ಲಿ ಉಪಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು, ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ತಾರಾನಾಥ ಕೆ ರೈ ಮೇಗಿನಗುತ್ತು, ಪದಾಧಿಕಾರಿಗಳಾದ ಚಂದ್ರಶೇಖರ ಶೆಟ್ಟಿ ನಿಟ್ಟೆ, ದಿನೇಶ್ ಕುಮಾರ್ ಶೆಟ್ಟಿ ಕಳತ್ತೂರು, ವಿವೇಕಾನಂದ ಶೆಟ್ಟಿ ಆವರ್ಸೆ, ರವಿ ಕೆ ಶೆಟ್ಟಿ ಕಾಪು, ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಕಿಶೋರ್ ಹೆಗ್ಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ, ಪದಾಧಿಕಾರಿಗಳಾದ ಶಮ್ಮಿ ಅಜಿತ್ ಹೆಗ್ಡೆ, ಸಾರಿಕಾ ಚಂದ್ರಹಾಸ ಶೆಟ್ಟಿ, ಸರಿತಾ ಶೆಟ್ಟಿ, ದಿವ್ಯಾ ಸಂತೋಷ್ ಶೆಟ್ಟಿ, ಸುಚಿತ್ರಾ ಎಸ್ ಶೆಟ್ಟಿ ನೀನಾ ಬಾಲಕೃಷ್ಣ ಶೆಟ್ಟಿ, ನಯನಾ ಜಯ ಶೆಟ್ಟಿ, ನಿವೇದಿತಾ ಸುಧಾಕರ್ ಶೆಟ್ಟಿ, ಗೀತಾ ಜಯ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ, ಕಾರ್ಯದರ್ಶಿ ಪ್ರಸನ್ನ ಶೆಟ್ಟಿ, ಪದಾಧಿಕಾರಿಗಳಾದ ವಸಂತ್ ಶೆಟ್ಟಿ, ಹರೀಶ್ ರೈ, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ದಾಮೋಧರ್ ಶೆಟ್ಟಿ, ಯುವ ವಿಭಾಗದ ಪ್ರಫುಲ್ ಶೆಟ್ಟಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ವಿಶೇಷ ಆಮಂತ್ರಿತ ಅತಿಥಿಗಳಾಗಿ ಖಾಸಗಿ ವಾಹಿನಿಯ ಮುಖ್ಯ ನಿರೂಪಕ ನವೀನ ಶೆಟ್ಟಿ ಎಡ್ಮೆಮಾರ್, ಜಾಹೀರಾತು ವಿಭಾಗದ ಮುಖ್ಯಸ್ಥ ರಿಯಾಜ್ ಉಪಸ್ಥಿತರಿದ್ದರು. ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಸಭೆಯಲ್ಲಿ ವಾರ್ಷಿಕೋತ್ಸವದ ಸಿದ್ಧತೆಗಳ ಬಗ್ಗೆ ಚರ್ಚಿಸಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.