ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್ಹೌಸ್ನಲ್ಲಿ ವಿವಾಹವಾದರು.
ಅಥಿಯಾ ಮತ್ತು ಕೆಎಲ್ ರಾಹುಲ್ ಅವರು ಕೇವಲ 100 ಅತಿಥಿಗಳ ಸಮ್ಮುಖದಲ್ಲಿ ವಿವಾಹವಾದರು. ಇವರಲ್ಲಿ ಬಾಲಿವುಡ್ ಮತ್ತು ಕ್ರಿಕೆಟ್ ಪ್ರಪಂಚದ ಅನೇಕ ಸೆಲೆಬ್ರಿಟಿಗಳನ್ನು ಒಳಗೊಂಡಿದ್ದರು. ಮದುವೆಯ ನಂತರ, ಕೆಎಲ್ ಮತ್ತು ಅಥಿಯಾ ಅವರು ಬಾಲಿವುಡ್ ಮತ್ತು ಕ್ರಿಕೆಟ್ ಸೆಲೆಬ್ರಿಟಿ ಗಳಿಗಾಗಿ ವಿಶೇಷ ಭವ್ಯವಾದ ಆರತಕ್ಷತೆಯನ್ನು ಆಯೋಜಿಸಿದ್ದಾರೆ. ಅಲ್ಲದೆ ಅನೇಕ ಕೈಗಾರಿಕೋದ್ಯಮಿಗಳು ಮತ್ತು ರಾಜಕಾರಣಿಗಳು ಸಹ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮದುವೆ ಸಮಾರಂಭದಲ್ಲಿ ಸುನೀಲ್ ಶೆಟ್ಟಿ, ”ಕೆಎಲ್ ರಾಹುಲ್ ನನ್ನ ಅಳಿಯನಲ್ಲ, ಅವರ ಮಗ. ಸಂಬಂಧದಿಂದ ನಾನು ಅವರ ಮಾವ ಆಗಿದ್ದರೂ, ಸಹ ಅವರು ನನ್ನ ಮಗನೇ. ಅಥಿಯಾ ಮತ್ತು ಕೆಎಲ್ ರಾಹುಲ್ ಅವರ ಆರತಕ್ಷತೆ ಐಪಿಎಲ್ ನಂತರ ನಡೆಯಲಿದೆ. ಮದುವೆಯ ನಂತರ, ಸುನೀಲ್ ಶೆಟ್ಟಿ ಹಾಗೂ ಅವರ ಮಗ ಅಹಾನ್ ಶೆಟ್ಟಿಯೊಂದಿಗೆ ಪೋಸ್ ನೀಡಿದರು. ಅಲ್ಲದೆ ಸಿಹಿ ಕೂಡ ಹಂಚಿದರು. ಅಥಿಯಾ-ರಾಹುಲ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಕೆಎಲ್ ರಾಹುಲ್ 2019 ರಲ್ಲಿ ಅಥಿಯಾ ಅವರನ್ನು ಸ್ನೇಹಿತನ ಪಾರ್ಟಿಯಲ್ಲಿ ನೋಡಿದರು. ಆ ಕಾಮನ್ ಫ್ರೆಂಡ್ ಮೂಲಕ ಗೆಳೆಯರಾದರು. ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು. ಅದರ ನಂತರ, ಇಂದು ಇಬ್ಬರೂ ಹೊಸ ಜೀವನ ಪ್ರಾರಂಭಿಸಲು ಸಿದ್ಧರಾಗಿದ್ದಾರೆ.
ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರು ಸುನಿಲ್ ಶೆಟ್ಟಿ ಅವರ ‘ಜಹಾನ್’ ಬಂಗಲೆಯಲ್ಲಿ ಇಂದು ಅಂದರೆ 23 ಜನವರಿ 2023 ರಂದು ಸಂಜೆ 4.00 ಗಂಟೆಗೆ ವಿವಾಹವಾಗಿದ್ದಾರೆ. ಅವರ ವಿವಾಹ ಸಮಾರಂಭವು ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಡೆಯಿತು. ಅಲ್ಲದೆ ಅರ್ಜುನ್ ಕಪೂರ್ ಸಹೋದರಿ ಅಂಶುಲಾ ಕಪೂರ್, ಜಾಕಿ ಶ್ರಾಫ್ ಪುತ್ರಿ ಕೃಷ್ಣಾ ಶ್ರಾಫ್, ಅನುಪಮ್ ಖೇರ್, ವರುಣ್ ಐರಾನ್, ಇಶಾಂತ್ ಶರ್ಮಾ ಮತ್ತು ಆದಿತ್ಯ ಸೀಲ್ ಕೂಡ ಮದುವೆಯಲ್ಲಿ ಪಾಲ್ಗೊಂಡಿದ್ದರು.