ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ,ಕುಂದಾಪುರ ಉಡುಪಿ ಜಿಲ್ಲೆ. (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)
“ಗುರು ಬ್ರಹ್ಮ -ಗುರು ವಿಷ್ಣು – ಗುರು ದೇವೋ -ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ – ತಸ್ಮೈ ಶ್ರೀ ಗುರುವೇ ನಮಃ..” ಇದು ನಾವು ಗುರುಗಳಿಗೆ ಕೊಡುವಂತಹ ಶ್ರೇಷ್ಠವಾದಂತ ಗೌರವ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿಧ್ಯರ್ಜನೆ ಮಾಡುವಂತಹ ಶಿಕ್ಷಕರು ದೇವರೆಂದು ಪೋಷಕರು ನಂಬಿರುತ್ತಾರೆ . ಬುದ್ಧಿವಂತರ ಜಿಲ್ಲೆಯ, ಉಡುಪಿ ಜಿಲ್ಲೆಯಲ್ಲಿ ಶಿಕ್ಷಕರಿಗೆ ಅವಮಾನವಾಗುವಂತಹ ರೀತಿಯಲ್ಲಿ ಈ ಶಿಕ್ಷಕರ ವರ್ತನೆ ಸಮಾಜಕ್ಕೆ ಮುಜುಗರ ತಂದಿದೆ. ಅದಲ್ಲದೆ ಶ್ರೇಷ್ಠ ಶಿಕ್ಷಕರ ಪಾಲಿಗೆ ಇದು ಕಳಂಕವಾಗಿದೆ. ಆದರೆ ಪಾನಮುಕ್ತರಾದಂತಹ ಶಿಕ್ಷಕರು ಶಾಲೆಯಲ್ಲಿ ಈ ರೀತಿ ವರ್ತನೆ ಮಾಡಿರುವುದು ಸಮಾಜ ತಲೆತಗ್ಗಿಸುವಂತಹಾಗಿದೆ. ಮಕ್ಕಳಿಗೆ ಬೇಕಾದ ಹಲವಾರು ಪಠ್ಯಪುಟ್ಯಂತರ ಸೂಟಿಕೆಗಳನ್ನ ಕಾಲಕ್ಕೆ ತಕ್ಕಂತೆ ಸಮರ್ಪಕವಾಗಿ ನೀಡುವ ಶಿಕ್ಷಕರ ಪಾಡು ಹೀಗಾದರೆ ವಿದ್ಯಾರ್ಥಿಗಳ ಪರಿಸ್ಥಿತಿಯಂತೂ ಎಂದು ಪೋಷಕರು ಮರುಮರು ಮರುಗುತ್ತಿದ್ದಾರೆ ಉಡುಪಿ ಜಿಲ್ಲೆಯಲ್ಲಿ ನಡೆದಂತಹ ಘಟನೆ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಚುಂಗಮಹಾಗೆ ಎಳೆಯಲಾಗುತ್ತಿದೆ ಆದರೆ ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದ ಅಲಂಗಾರು ಶಾಲೆಯ ಶಿಕ್ಷಕರ ಪರಿಸ್ಥಿತಿ ನೋಡಿದರೆ ಶಿಕ್ಷಕ ಕುಲಕ್ಕೆ ಅಪಮಾನ ಮಾಡಿದಂತಿದೆ. ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಶಿಕ್ಷಕರನ್ನು ವಿದ್ಯಾರ್ಥಿಗಳು ನೋಡಿ ಕಲಿಯುತ್ತಾರೆ ಆದರೆ ಇತ್ತೀಚಿಗೆ ಹಲವು ಶಿಕ್ಷಕರ ನಡವಳಿಕೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವಂತಿದೆ. ಅದೇ ರೀತಿಯ ಒಂದು ಘಟನೆ ಇದೀಗ ಉಡುಪಿಯಲ್ಲಿ ನಡೆದಿದೆ. ಶಾಲಾ ಅವಧಿಯಲ್ಲೇ ಕುಡಿದು ಶಾಲಾ ಆವರಣದಲ್ಲೇ ಮಲಗಿದ ಶಿಕ್ಷಕನ್ನು ಕಂಡು ಪಾಲಕರು ಕೋಪಗೊಂಡಿದ್ದಾರೆ. ಅವರನ್ನು ಅಮಾನತು ಮಾಡುವಂತೆ ಗ್ರಾಮಸ್ಥರು ಕೇಳಿಕೊಂಡಿದ್ದಾರೆ. ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.ಶಾಲಾ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಮುಂದೆ ಕುಡಿದು ಮಲಗಿರುವ ಘಟನೆ ಉಡುಪಿಯ ಪೆರ್ಡೂರು ಗ್ರಾಮದ ಅಲಂಗಾರು ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಬ್ರಹ್ಮಾವರ ವಲಯ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಶಾಲೆ ಇದಾಗಿದ್ದು ಹಲವಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.ಶಿಕ್ಷಕರೊಬ್ಬರು ಶಾಲೆಗೆ ಕುಡಿದು ಬರುವ ಕಾರಣದಿಂದಾಗಿ ತರಗತಿ ನಡೆಸಲು ಕಷ್ಟವಾಗುತ್ತದೆ. ಅಷ್ಟೇ ಅಲ್ಲ ಇದು ಶಾಲಾ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇನ್ನುಳಿದ ಶಿಕ್ಷಕರಿಗೂ ಸಹ ಇದೊಂದು ಇರುಸು ಮುರುಸಿನ ಸಂಗತಿಯಾಗಿ ಕಾಡುತ್ತದೆ. ಮಧ್ಯಪಾನ ಮಾಡುವುದೇ ತಪ್ಪು ಅಂತದ್ದರಲ್ಲಿ ಶಾಲಾ ಸಮಯದಲ್ಲಿ ಅದೂ ಶಾಲಾ ಆವರಣದಲ್ಲೇ ಈ ರೀತಿ ಕುಡಿದು ಮಲಗಿರುವುದು ಖಂಡಿತ ಅಕ್ಷಮ್ಯ ಅಪರಾಧವಾಗಿದೆ. ಇದನ್ನು ಊರಿನ ಜನರು ಖಂಡಿಸಿದ್ದಾರೆ. ಮಕ್ಕಳ ಎದುರೇ ಕುಡಿದು ಶಾಲಾ ಆವರಣದಲ್ಲಿ ಮಲಗಿದ ಶಿಕ್ಷಕನ ಹೆಸರು ಕೃಷ್ಣಮೂರ್ತಿ, ಇವರು ಈ ಶಾಲೆಯ ಶಿಕ್ಷಕರಾಗಿದ್ದು ಶಾಲೆಗೆ ಬರುವ ಸಮಯದಲ್ಲೇ ಪಾನ ಮತ್ತರಾಗಿದ್ದರು. ನಂತರ ಕೂರಲೂ ಶಕ್ತಿ ಇಲ್ಲದಂತಾದ ಇವರು ಅಮಲಿನಲ್ಲಿ ಶಾಲಾ ಆವರಣದಲ್ಲೇ ಮಲಗಿಕೊಂಡಿದ್ದಾರೆ.ಕುಡಿದು ಮಲಗಿದ ಶಿಕ್ಷಕನ ವಿಡಿಯೋ ಮಾಡಿದ್ದಾರೆ ಆ ವಿಡಿಯೋ ಇದೀಗ ವೈರಲ್ ಆಗಿದೆ. ಶಿಕ್ಷಕನನ್ನ ಅಮಾನತು ಮಾಡುವಂತೆ ಗ್ರಾಮದ ಪ್ರಮುಖರ ಒತ್ತಾಯಿಸುತ್ತಿದ್ದಾರೆ. ಈ ಘಟನೆ ನಡೆದು ಕೆಲವು ದಿನಗಳು ಕಳೆದರೂ ಸಹ ಈ ಕುರಿತು ಯಾರೂ ಸಹ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಈ ಕಾರಣಕ್ಕಾಗಿ ಗ್ರಾಮಸ್ಥರು ಕೋಪ ಗೊಂಡಿದ್ದಾರೆ.
ಶಿಕ್ಷಕನ ಮೇಲೆ ಇನ್ನೂ ಕ್ರಮ ಕೈಗೊಳ್ಳದ ಬಿಇಓ ರಂಗನಾಥ್ ಕೆ:-
ಶಿಕ್ಷಕ ಮಾಡಿದ ತಪ್ಪನ್ನು ವಲಯ ಶಿಕ್ಷಣಾಧಿಕಾರಿಗಳಿಗೆ ಸಾಕ್ಷಿ ಸಮೇತವಾಗಿ ತೋರಿಸಿ ಅವರನ್ನು ಅಮಾನತು ಗೊಳಿಸುವಂತೆ ವಲಯ ಶಿಕ್ಷಣಾಧಿಕಾರಿಗಳ ಬಳಿ ಕೇಳಿಕೊಂಡಿದ್ದಾರೆ. ಅವರು ಇದನ್ನು ಗಮನಿಸಿ ಸುಮ್ಮನಾಗಿದ್ದಾರೆ ಹೊರತಾಗಿ ಯಾವ ಕ್ರಮವನ್ನೂ ಕೈಗೊಂಡಿಲ್ಲ.ವಲಯ ಅಧಿಕಾರಿಗಳು ಇನ್ನೂ ಸಹ ಶಿಕ್ಷಕ ಕೃಷ್ಣಮೂರ್ತಿ ಅವರ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಊರಿನವರು ಹೇಳುತ್ತಿದ್ದಾರೆ. ಶಿಕ್ಷಕನನ್ನ ಕೂರಿಸಿ ವಿಚಾರಣೆ ಮಾಡುತ್ತಿರುವ ಬಿಇಓ ರಂಗನಾಥ್ ಕೇಲವ ವಿಚಾರಣೆಯಲ್ಲೇ ದಿನ ಕಳೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೂಡಲೇ ಕೃಷ್ಣಮೂರ್ತಿ ಯನ್ನ ಅಮಾನತು ಮಾಡುವಂತೆ ಪಂಚಾಯತ್ ಅಧ್ಯಕ್ಷ ದೇವು ಪೂಜಾರಿ ಪಟ್ಟು ಹಿಡಿದಿದ್ದಾರೆ. ಆದರೆ ಅಮಾನತು ಭರವಸೆ ನೀಡಿ ಇನ್ನೂ ಬಿಇಓ ರಂಗನಾಥ್ ಯಾವುದೇ ಕ್ರಮ ಕೈಗೊಂಡಿಲ್ಲ.
ಶಾಲಾ ಶಿಕ್ಷಕರ ಬಗ್ಗೆ ಪೋಷಕರ ಆಕ್ರೋಶ:-
ಈ ರೀತಿ ಶಿಕ್ಷಕರನ್ನ ನಮ್ಮ ಗ್ರಾಮಗಳಿಗೆ ನೇಮಿಸಿರುವುದು ಬಹಳ ನೋವಾಗುತ್ತಿದೆ. ತಕ್ಷಣವೇ ಜಾರಿಗೆ ಬರುವಂತೆ ಶಿಕ್ಷಕರನ್ನ ಅಮಾನತು ಮಾಡಬೇಕು. ಪಾನಮುಕ್ತರಾಗಿ ಶಾಲೆಗೆ ಆಗಮಿಸಿ ವಿದ್ಯಾರ್ಜನೆ ಮಾಡುವಂತಹ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಮಲಗಿ ನಿದ್ರಿಸುವ ಘಟನೆ ನಿಜಕ್ಕೂ ಕೇದಕರ ಎನ್ನುವುದು ಶಾಲಾ ವಿದ್ಯಾರ್ಥಿಗಳ ಪೋಷಕರ ಅಭಿಪ್ರಾಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದನ್ನ ಮನಗೊಂಡು ತಕ್ಷಣವೇ ಜಾರಿಗೆ ಬರುವಂತೆ ಅಂತಹ ಶಿಕ್ಷಕರನ್ನ ಅಮಾನತು ಮಾಡಬೇಕು ಅದಲ್ಲದೆ, ವಿದ್ಯಾರ್ಥಿಗಳ ಜೊತೆ ಈ ರೀತಿಯಾದಂತಹ ದುರ್ವರ್ತನೆ ತೋರಿಸಿರುವುದು ಸಮಾಜಕಲ್ಲದೆ ಇಡೀ ಊರೇ ತಲೆತಗ್ಗಿಸುವಂತಾಗಿದೆ. ಇನ್ನಾದರೂ ಕ್ಷೆತ್ರ ಶಿಕ್ಷಣಾಧಿಕಾರಿಗಳು ನಿದ್ದೆಯಿಂದ ಎದ್ದು ಪರಿಸ್ಥಿತಿಯನ್ನ ಅವಲೋಕಿಸಿ ಅಂತಹ ಶಿಕ್ಷಕರನ್ನ ಅಮಾನತು ಮಾಡಿ ವಿದ್ಯಾರ್ಥಿಗಳ ಭವಿಷ್ಯವನ್ನು ಕಟ್ಟಿಕೊಡಬೇಕಿದೆ. ಎಂದು ಅಲ್ಲಿನ ಪೋಷಕರು ಒತ್ತಾಯಿಸುತ್ತಿದ್ದಾರೆ.