” ಸದೃಢ ಜೀವಸತ್ವಗಳ ಪೂರೈಕೆ, ಬಿಳಿ ರಕ್ತ ಕಣಗಳ ಉತ್ಪಾದನೆಗೆ ಸೊಪ್ಪು ಸೇವನೆ ಅತ್ಯಗತ್ಯ…!” ಪ್ರೋಟಿನ್ ಗಳ ಪೌಷ್ಟಿಕಾಂಶವನ್ನು ವೃದ್ಧಿಸುವ ಸೊಪ್ಪು , ದೈನಂದಿನ ರಕ್ತ ಪರಿಚಲನೆಯ ರತ್ನಕೋಶ…..!”
– ಕೆ.ಸಂತೋಷ ಶೆಟ್ಟಿ, ಮೊಳಹಳ್ಳಿ,ಕುಂದಾಪುರ .ಉಡುಪಿ ಜಿಲ್ಲೆ .(ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)
e-mail:-santhoshmolahalli@gmail.com
” ಪ್ರತಿದಿನ ದೇಹಕ್ಕೆ ಸೊಪ್ಪು ಸೇವನೆ ಬಲು ತಂಪು ಹರಿವೇ ಮತ್ತು ಬಸಳೆ ಹಾಗೂ ಇನ್ನಿತರ ಸೊಪ್ಪುಗಳನ್ನ ಎಚ್ಚೆತವಾಗಿ ತಿನ್ನುವುದರಿಂದ ಜೀವ ಸತ್ವ ಕೊರತೆಗಳ ನೀಗಿಸುವುದರೊಂದಿಗೆ ದೇಹದಲ್ಲಿನ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ ಮತ್ತು ದಯಕ ಬೇಕಾಗಿರುವಂತಹ ಪ್ರೋಟೀನ್ ಮುಕ್ತ ಪದಾರ್ಥಗಳನ್ನು ನೇರವಾಗಿ ನಮ್ಮ ದೇಹಕ್ಕೆ ರವಾನೆ ಮಾಡುತ್ತದೆ ಅದಲ್ಲದೆ ಸೊಪ್ಪು ತರಕಾರಿಗಳನ್ನು ಎಚ್ಚೆತ್ತುವಾಗಿ ತಿನ್ನುವುದರಿಂದ ಜೀವ ಸತ್ವಗಳ ರಕ್ಷಣೆ ಮತ್ತು ಉತ್ಪಾದನೆಗೆ ಇದು ಸಹಕಾರಿಯಾಗುತ್ತದೆ”.
ಸೊಪ್ಪು ಪಧಾರ್ಥಗಳನ್ನು ಸೇವಿಸುವುದರಿಂದ ದೇಯಕಾಗುವ ವಿಶೇಷ ರೀತಿಯ ಪ್ರಯೋಜನಗಳನ್ನ ನಾವು ತಿಳಿದುಕೊಳ್ಳಬೇಕಾದ ಅಂಶಗಳು ಇವತ್ತಿನ ಬರಹದಲ್ಲಿ ಅಡಗಿದೆ. ಏಕೆಂದರೆ ಸೊಪ್ಪು ದೇಹದ ಜೀರ್ಣಶಕ್ತಿ ಹಾಗೂ ಜಠರ, ದೊಡ್ಡ ಕರುಳು, ಸಣ್ಣ ಕರುಳು ಮತ್ತು ರಕ್ತದ ರೊಂದಿಗೆ ಸೊಪ್ಪು ಸಹಾಯಕ ಮಾಡುತ್ತದೆ. ಉದಾಹರಣೆಗೆ ಅರಿವೇ ಸೊಪ್ಪು, ಬಸಳೆ ಸೊಪ್ಪು, ಮೆಂತ್ಯ ಸೊಪ್ಪು ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು ,ಕರಿಬೇವಿನ ಸೊಪ್ಪು ಇವೆಲ್ಲವೂ ಆರೋಗ್ಯಕರ ವೃದ್ಧಿಗೆ ಸಹಕಾರಿಯಾಗುವುದರೊಂದಿಗೆ ,ಮನುಷ್ಯನ ದೇಹದ ಒಳಭಾಗದಲ್ಲಿ ಉಲ್ಬಾಣಿಸುವ ಕಾಯಿಲೆಗಳನ್ನ ನಿಷ್ಕ್ರಿಯಗೊಳಿಸಿ ಆರೋಗ್ಯವಾಗಿರಲು ಸಹಕರಿಸುತ್ತದೆ. ಅದಲ್ಲದೆ ರಕ್ತ ಪರಿಚಲನೆ, ಹೃದಯ ಬಡಿತ ಹಾಗೂ ಮೆದುಳಿಗೆ ಸಂಬಂಧಿಸಿದ ಆರೋಗ್ಯಕರ ವಾತಾವರಣ ನಿರ್ಮಾಣ ಆಗುತ್ತದೆ. ಸೇವಿಸುವ ಪೌಷ್ಟಿಕಾಂಶ ಸೊಪ್ಪಿನಲ್ಲಿ ಅಡಗಿದೆ. ಪ್ರತಿನಿತ್ಯ ನಾವು ಸಿದ್ಧಪಡಿಸುವ ಅಡಿಗೆಯಲ್ಲಿ ಸೊಪ್ಪಿನ ಅಂಶವಾಗಿದ್ದು, ಸೊಪ್ಪನ್ನು ಯಾವ ರೀತಿಯಾಗಿ ಅದನ್ನ ಬಳಸುತ್ತೇವೆ ಎನ್ನುವುದು ಕ್ರೂಢೀಕರಣ ಗೊಳಿಸಿ, ಅದರ ಬಗೆಗಿನ ಪ್ರಯೋಜನವನ್ನು ನಾವು ಪಡೆದುಕೊಳ್ಳಬೇಕು, ಆರೋಗ್ಯ ಬದುಕಿಗೆ ತಳವದಿಯಾಗುವ ಹರಿವೆ ಸೊಪ್ಪು ಹಾಗೂ ರಾಜಗಿರಿ ಸೊಪ್ಪನ್ನು ಹೆಚ್ಚು ಪ್ರಮಾಣದಲ್ಲಿ ಬಳಸುವುದರಿಂದ ಆರೋಗ್ಯಕರ ಬದುಕು ಹೆಚ್ಚಾಗುವುದರೊಂದಿಗೆ ಕೆಲವು ಕಾಯಿಲೆಗಳಿಗೆ ಮಾರಕವಾಗಿರುವಂತಹ ತೊಡಕುಗಳನ್ನ ಹೊಡೆದೋಡಿಸುತ್ತದೆ. ಅದಲ್ಲದೆ, ನಾವು ತಿನ್ನುವಂತಹ ದೈನಂದಿನ ಪದಾರ್ಥಗಳಲ್ಲಿ ಸೊಪ್ಪು ಮತ್ತು ನಾರಿನ ಅಂಶಗಳು ಸೇರ್ಪಡೆಯಾದರೆ ಖಾಯಿಲೆಗಳು ಮನುಷ್ಯನ ಹತ್ತಿರ ಕೂಡ ಸುಳಿಯುವುದಿಲ್ಲ. ಸೊಪ್ಪನ್ನ ನಾವು ಸಿದ್ಧಪಡಿಸುವುದು ಅಥವಾ ಸೊಪ್ಪನ್ನ ನಾವು ಅಡುಗೆ ಪದಾರ್ಥಗಳಿಗೆ ಬಳಸುವಾಗ ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆದು, ತದನಂತರದಲ್ಲಿ ಮೂರು ನಾಲ್ಕು ಬಾರಿ ಸ್ವಚ್ಛನೆಯ ನೀರಿನಲ್ಲಿ ತೊಳೆದು, ಅದನ್ನು ಅಡುಗೆ ಪದಾರ್ಥಗಳಿಗೆ ಬಳಸಬೇಕು. ಯಾಕೆಂದರೆ ಸೊಪ್ಪುಗಳಿಗೆ ಕೆಡಬಾರದಂತೆ ಕೆಮಿಕಲ್ ಸ್ಪ್ರೇ ಮಾಡುವುದರಿಂದ ಆರೋಗ್ಯಕ್ಕೆ ಹಾನಿ ಉಂಟಾ ಮಾಡಬಹುದು. ಆ ಕಾರಣಕ್ಕಾಗಿ ಎರಡು ಅಥವಾ ಮೂರು ಬಾರಿ ಸ್ವಚ್ಛನೆಯ ನೀರಿನಲ್ಲಿ ತೊಳೆದು ತದನಂತರ ಉಪಯೋಗ ಮಾಡಿದರೆ ಒಳಿತು.
ಹರಿವೆ ಸೊಪ್ಪು ರಾಜಗಿರಿ ಸೊಪ್ಪು ಸೇವನೆ ಮಾಡಿದ್ದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಸೊಪ್ಪಿನ ಸೇವನೆಯಿಂದ ನಮ್ಮ ದೇಹಕ್ಕೆ ಸಾಕಷ್ಟು ಲಾಭಗಳು ಆಗುತ್ತದೆ. ನಮ್ಮ ಆರೋಗ್ಯವನ್ನು ವೃದ್ಧಿಸಲು ಅನೇಕ ರೀತಿಯಾದಂತಹ ಸೊಪ್ಪುಗಳು ನಮ್ಮ ಪರಿಸರದಲ್ಲಿ ಸಿಗುತ್ತದೆ ನಮ್ಮ ದೇಹಕ್ಕೆ ಬೇಕಾಗಿರುವಂತಹ ಪೌಷ್ಟಿಕಾಂಶ ಮತ್ತು ನಾರಿನ ಅಂಶಗಳನ್ನು ನೀಡುವ ಸೊಪ್ಪುಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾಗಿರುವಂತಹ ಒಂದು ಉತ್ತಮವಾದ ಮಾರ್ಗವಾಗಿದೆ ಅಂತಹ ಸೊಪ್ಪುಗಳಲ್ಲಿ ಈ ಹರವೆ ಸೊಪ್ಪು ಕೂಡ ಒಂದು ಇದನ್ನು ಕೆಲವೊಂದು ಕಡೆ ದಂಟಿನ ಸೊಪ್ಪು ಅಥವಾ ರಾಜಗಿರಿ ಸೊಪ್ಪು ಅಂತ ಕೂಡ ಕರೆಯುತ್ತಾರೆ. ನಿಮ್ಮ ಕಡೆ ಈ ಸೊಪ್ಪಿಗೆ ಏನಂತ ಹೆಸರು ಕರೆಯುತ್ತಾರೆ ಅಂತ ಕಮೆಂಟ್ ಮಾಡಿ ತಿಳಿಸಿ ಇನ್ನು ಈ ಸಂಪು ನಿಮಗೆ ಕೆಂಪು ಬಂಗಾರ ಹಸಿರು ಮತ್ತು ನೇರಳೆ ಬಣ್ಣದಲ್ಲಿ ಕೂಡ ಕಂಡುಬರುತ್ತದೆ. ಆದರೆ ಹೆಚ್ಚಾಗಿ ಇದು ಕೆಂಪು ಬಣ್ಣದಲ್ಲಿ ಇರುತ್ತದೆ ಕೆಂಪು ಬಣ್ಣದ ಎಲೆಯನ್ನು ಹೊಂದಿರುವ ಈ ಅರವೇ ಸೊಪ್ಪು ಕೇರಳವಾದ ಅಂತಹ ಪ್ರೋಟೀನ್ ಕ್ಯಾಲ್ಸಿಯಂ ಮತ್ತು ಸತ್ವ ಸೇರಿದಂತೆ ಅನೇಕ ಜೀವಸತ್ವಗಳನ್ನು ಕೂಡ ಹೊಂದಿದೆ.
ಇವುಗಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಅವೆಲ್ಲಾ ರೀತಿಯಾದಂತಹ ಲಾಭಗಳಾಗುತ್ತವೆ ಎನ್ನುವುದರ ಬಗ್ಗೆ ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಲಬದ್ಧತೆ ಸಮಸ್ಯೆ ಯಾಕೆ ಬರುತ್ತದೆ ಎಂದರೆ ನಾವು ನಾರಿನ ಅಂಶ ಇರುವಂತಹ ಸೊಪ್ಪು ಮತ್ತು ತರಕಾರಿಗಳನ್ನು ಕಡಿಮೆ ಸೇವನೆ ಮಾಡಿದಾಗ ಮತ್ತು ಹೆಚ್ಚಾಗಿ ಘನ ವಸ್ತುಗಳನ್ನು ಸೇವನೆ ಮಾಡಿದಾಗ ಈ ರೀತಿಯಾದಂತಹ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಸಮಸ್ಯೆ ಉಂಟಾದರೆ ಅಂದರೆ ಮಲ ಸರಿಯಾಗಿ ಹೋಗದೆ ಇದ್ದರೆ ಇನ್ನು ಹಲವಾರು ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಕೂಡ.
ಹಾಗೂ ನಾವು ನಾರಿನಂಶ ಇರುವಂತಹ ಸೊಪ್ಪು ಮುಕ್ತ ತರಕಾರಿಗಳನ್ನು ಸೇವನೆ ಮಾಡುವುದು ತುಂಬಾನೇ ಅಗತ್ಯವಾಗಿರುತ್ತದೆ. ಸ್ವಲ್ಪವೇ ಸ್ವಲ್ಪ ಕೊಬ್ಬು ಮತ್ತು ಕೊಲೆಸ್ಟ್ರಾಲ್ ತುಂಬಾ ಕಡಿಮೆ ಇರುವ ಕಾರಣದಿಂದಾಗಿ ಇದು ಒಳ್ಳೆಯ ಆಯ್ಕೆಯಾಗಿದೆ. ತೂಕ ಇಳಿಸಲು ಬಯಸುವವರಿಗೆ ಇದು ಒಳ್ಳೆಯ ಆಯ್ಕೆ. ವಿಟಮಿನ್ ಸಿ ಸೇರಿಸಿದರೆ ದೇಹವು ಹೆಚ್ಚಿನ ಪ್ರಮಾಣದ ಕಬ್ಬಿನಾಂಶವನ್ನು ಹೀರಿಕೊಳ್ಳಲು ಸಹಕಾರಿ ಆಗಿರುವುದು. ಹೀಗಾಗಿ ಲಿಂಬೆ ರಸವನ್ನು ಹರಿವೆ ಸೊಪ್ಪಿನ ಖಾದ್ಯಕ್ಕೆ ಹಾಕಿ ಮತ್ತು ರಕ್ತಹೀನತೆ ಸಮಸ್ಯೆ ಇರುವವರಿಗೆ ಇದು ತುಂಬಾ ಸಹಕಾರಿ ಆಗಿರುವುದು. ತರಕಾರಿ ಪದಾರ್ಥಗಳನ್ನು ಸಿದ್ಧಪಡಿಸುವಾಗ ಶುಂಠಿ, ಬೆಳ್ಳುಳ್ಳಿ, ಕರಿಬೇವು, ಬೆಲ್ಲ ಜೀರಿಗೆ ಲಿಂಬುವನ್ನು ವಿಜೇತವಾಗಿ ಬಳಸಿದರೆ ಆರೋಗ್ಯ ಮೇಲಾಗುವ ಪರಿಣಾಮವನ್ನು ತಡೆಯುತ್ತದೆ ಅದಲ್ಲದೆ ಸೊಪ್ಪನ್ನ ಮಿತವಾಗಿ ತಿಂದರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಡುವುದಿಲ್ಲ ಅದಲ್ಲದೆ ದೇಹ ತಂಪಾಗಿರಲು ಈ ಸೊಪ್ಪು ಕಾರಣವಾಗುತ್ತದೆ.