ಬೆಂಗಳೂರು ಬಂಟರ ಸಂಘವು ನಮ್ಮ ಸಮಾಜದ ಬಡ ಕುಟುಂಬಗಳ ವಧು-ವರರಿಗೆ ಉಚಿತ ಕಂಕಣ ಭಾಗ್ಯ (ಸಾಮೂಹಿಕ ವಿವಾಹ) ಯೋಜನೆಯನ್ನು ಬೆಂಗಳೂರು ಬಂಟರ ಸಂಘದಲ್ಲಿ ಹಮ್ಮಿಕೊಂಡಿದ್ದಾರೆ. ಈ ಸೌಕರ್ಯದ ಸದುಪಯೋಗ ಪಡೆಯಲು ಇಚ್ಚಿಸುವವರು ತಮ್ಮ ಹೆಸರುಗಳನ್ನು ಕೂಡಲೇ ಬೆಂಗಳೂರು ಬಂಟರ ಸಂಘದಲ್ಲಿ ನೋಂದಾಯಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ. ಈ ಮದುವೆಗೆ ಬೆಂಗಳೂರು ಬಂಟರ ಸಂಘದ ಕಡೆಯಿಂದ ಒಂದು ವಧು-ವರರ ಜೋಡಿಗೆ 8+8 (16) ಜನರಿಗೆ ಬೆಂಗಳೂರಿಗೆ ಬಂದು ಹೋಗಲು ಉಚಿತ ಸಾರಿಗೆ ವ್ಯವಸ್ಥೆಯನ್ನು ಕೂಡ ಒದಗಿಸಿಕೊಡಲಿದ್ದಾರೆ. ವಧುವಿಗೆ ಕರಿಮಣಿ, ಸೀರೆ, ವಧುವಿನ ಅಲಂಕಾರ ಮತ್ತು ವರನಿಗೆ ಮದುವೆಯ ಉಡುಗೆಯನ್ನು ಕೂಡಾ ಕೊಡಲಿದ್ದಾರೆ. ವಧು-ವರರಿಗೆ ಮತ್ತು ಅವರ ಸಂಬಂಧಿಕರಿಗೆ ಊಟ, ಉಳಿದುಕೊಳ್ಳಲು ವ್ಯವಸ್ಥೆಯನ್ನೂ ಮಾಡಿ, ಪೂಜೆ, ಮಂಟಪ, ಛತ್ರ , ಹೂವಿನ ಅಲಂಕಾರ, ವಾದ್ಯ ಮತ್ತು ಮದುವೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸಿ ಬಂಟರ ಪದ್ಧತಿಯಂತೆ ಅದ್ದೂರಿಯಾಗಿ ಬೆಂಗಳೂರು ಬಂಟರ ಸಂಘದಲ್ಲಿ ವಿವಾಹ ವೇದಿಕೆಯ ವತಿಯಿಂದ ಮದುವೆ ಮಾಡಿಕೊಡಲಾಗುವುದು ಎಂದು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಎಂ ಮುರಳೀಧರ್ ಹೆಗ್ಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೋಂದಣಿಗಾಗಿ ಈ ನಂಬರ್ ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಆನಂದರಾಮ ಶೆಟ್ಟಿ ಬಿ ಗೌರವ ಕಾರ್ಯದರ್ಶಿ 9901885998 / 9741910925, ಸುರೇಂದ್ರ ಶೆಟ್ಟಿ ಎ, ಸಂಚಾಲಕರು ವಿವಾಹ ವೇದಿಕೆ 9741910925, ಶೋಭ ಶೇಖ ಚೇರ್ ಪರ್ಸನ್, ವಿವಾಹ ವೇದಿಕೆ 9901885998.