ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಆರ್. ಕೆ. ಶೆಟ್ಟಿ ( ಗೌ. ಕಾರ್ಯದರ್ಶಿ ಬಂಟರ ಸಂಘ ಮುಂಬೈ, ಆಡಳಿತ ನಿರ್ದೇಶಕರು ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈ. ಲಿ. ಮುಂಬಯಿ ) ಸೆಪ್ಟೆಂಬರ್ ತಿಂಗಳಿನಲ್ಲಿ ಮುಂಬಯಿಯಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶ್ವ ಬಂಟರ ಸಮ್ಮಿಲನ ಕಾರ್ಯಕ್ರಮದ ಕಾರ್ಯಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಯಶಸ್ವಿಯಾದ ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಮತ್ತು ಒಕ್ಕೂಟದಲ್ಲಿ ನಡೆಯುವ ಜನಪರ ಕಾಳಜಿಯ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡುವ ಸಲುವಾಗಿ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದಾರೆ. ಇವರು ಈ ಹಿಂದೆ ಒಕ್ಕೂಟದ ಪೋಷಕ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
Previous Articleವಿಶ್ವ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ಜಪ್ಪು ದಯಾನಂದ ಶೆಟ್ಟಿ ಆಯ್ಕೆ
Next Article ಒಡಿಯೂರು ಸಂಸ್ಥಾನದಲ್ಲಿ ತುಳುನಾಡ ಜಾತ್ರೆ