ಎಂ.ಆರ್.ಜಿ. ಗ್ರೂಪಿನ ಸ್ಥಾಪಕಾಧ್ಯಕ್ಷರು ಶ್ರೀ ಕೆ.ಪ್ರಕಾಶ್ ಶೆಟ್ಟಿ ಅವರಿಗೆ ದಕ್ಷಿಣ ಭಾರತದ ಆತಿಥ್ಯ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಎಸ್.ಐ.ಎಚ್.ಆರ್.ಎ. ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಕ್ಷಿಣ ಭಾರತದ ಹೊಟೇಲ್ ಮತ್ತು ರೆಸ್ಟೋರೆಂಟ್ ಗಳ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ನಡೆದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಕರ್ನಾಟಕದ ಪ್ರವಾಸೋದ್ಯಮ ಸಚಿವರಾದ ಶ್ರೀ ಆನಂದ ಸಿಂಗ್, ತಮಿಳುನಾಡಿನ ಪ್ರವಾಸೋದ್ಯಮ ಸಚಿವ ಡಾ. ಮತಿವೆಂತನ್, ಪುದುಚೇರಿ ಪ್ರವಾಸೋದ್ಯಮ ಸಚಿವ ಕೆ.ಲಕ್ಷ್ಮೀನಾರಾಯಣನ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
Previous Articleನ್ಯಾಯವಾದಿ ದಯಾನಂದ ರೈ ಅವರ ಸುಸಜ್ಜಿತ ಕಚೇರಿ ಉದ್ಘಾಟನೆ
Next Article ಲಯನ್ಸ್ ಕ್ಲಬ್ 2ನೇ ವಲಯದ ಸಮಾಜಸೇವಾ ಕಾರ್ಯಕ್ರಮ