ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಅಧ್ಯಕ್ಷರಾದ ಲ. ರಾಜಾರಾಮ್ ಶೆಟ್ಟಿ ಕಲ್ಕಟ್ಟೆ ಇವರ ಅಧ್ಯಕ್ಷತೆಯಲ್ಲಿ 2 ನೇ ವಲಯದ ಸಮಾಜಸೇವಾ ಕಾರ್ಯಕ್ರಮ ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾ ಭವನದಲ್ಲಿ ದಿನಾಂಕ 26-11-2022 ನೇ ಶನಿವಾರ ನಡೆಯಿತು. ಝೋನ್ ಚಯರ್ ಪರ್ಸನ್ ಲ. ಇಂಜಿನಿಯರ್ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ ಕೇವಲ “ಫೋಟೋ” ಕ್ಕೋಸ್ಕರ ಸೇವಾ ಕಾರ್ಯಕ್ರಮಗಳನ್ನು ಮಾಡದೇ, “ನೇತ್ರದಾನ, ರಕ್ತ ದಾನ, ಪರಿಸರ ಸಂರಕ್ಷಣೆ, ಲಯನ್ಸ್ ಇಮೇಜ್ ಬಿಲ್ಡಿಂಗ್ ಮುಂತಾದ ಕಾರ್ಯಕ್ರಮಗಳನ್ನು ಮನಃಪೂರ್ವಕ ಬಾಗಿ ಮಾಡುವುದರ ಜೊತೆಗೆ ಆರ್ಥಿಕ ಸಂಕಸ್ಟದಲ್ಲಿರುವವರಿಗೆ, ಬಡ ವಿದ್ಯಾರ್ಥಿಗಳಿಗೆ ಸಹಾಯವನ್ನು ಕ್ಲಬ್ ಗಳು ಮಾಡಬೇಕು” ಎಂದು ಹೇಳಿದರು.
ಸೇವಾ ಕಾರ್ಯಕ್ರಮದ ಅಂಗವಾಗಿ, ಇತ್ತೀಚೆಗೆ ಸಣ್ಣ ಪ್ರಾಯದಲ್ಲಿ ಅಕಾಲಿಕ ಮರಣ ಹೊಂದಿದ ಕ್ಲಬ್ ವ್ಯಾಪ್ತಿಯ ಓರ್ವರ ಮಗಳ ವಿದ್ಯಾಭ್ಯಾಸಕ್ಕೆ ಕ್ಲಬ್ ಸದಸ್ಯರಿಂದ ಸಂಗ್ರಹಿಸಿದ ಮೊತ್ತವನ್ನು ನೀಡಲಾಯಿತು. ಹಾಗೂ ಈ ಸಂದರ್ಭ ಇದೇ ಕುಟುಂಬಕ್ಕೆ ಪ್ರತೀ ತಿಂಗಳು ಆರ್ಥಿಕ ಸಹಾಯ ಮಾಡುತ್ತಿರುವ ಕ್ಲಬ್ ನ ಸದಸ್ಯರಾದ ಲ. ವಸಂತ್ ಶೆಟ್ಟಿ ಸೂರಿಬೆಟ್ಟು-ಅಚ್ಲಾಡಿ ಇವರಿಗೆ ಕೃತಜ್ನತೆಗಳನ್ನು ಸಲ್ಲಿಸಲಾಯಿತು.
ಝೋನ್ ಕ್ಲಬ್ ಗಳಾದ ಲಯನ್ಸ್ ಕ್ಲಬ್ ಮೊಳಹಳ್ಳಿ-ಶಿವಶಾಂತಿ ಯ ಅಧ್ಯಕ್ಷರಾದ ಲ. ಬಾಲಕೃಷ್ಣ ಶೆಟ್ಟಿ, ಹಾಲಾಡಿ-ಬಿದ್ಕಲ್ ಕಟ್ಟೆ ಅಧ್ಯಕ್ಷರಾದ ಲ. ನಾರಾಯಣ ಆರ್ ಶೆಟ್ಟಿ, ಆರ್ಡಿ-ಬೆಳ್ವೆ-ಗೋಳಿಯಂಗಡಿ ಅಧ್ಯಕ್ಷರಾದ ಲ. ಹೆಚ್ ವಸಂತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ಲ.ಪ್ರಭಾಕರ್ ಶೆಟ್ಟಿ ಯವರ ಪ್ರಾರ್ಥನೆಯ ಮೂಲಕ ಕಾರ್ಯಕ್ರಮ ಆರಂಭ ಗೊಂಡಿತು.
ಲ. ಕರುಣಾಕರ್ ಶೆಟ್ಟಿ ಫ್ಲ್ಯಾಗ್ ಸೆಲ್ಯುಟೇಶನ್, ಲ. ಕೊಮೆ ಸುರೇಂದ್ರ ಶೆಟ್ಟಿ ಅಚ್ಲಾಡಿ ಲಯನ್ ಕೋಡ್ ಆಫ್ ಎಥಿಕ್ಸ್ ವಾಚಿಸಿದರು.
ಝೋನ್ ಕ್ಲಬ್ ಗಳಾದ ಲಯನ್ಸ್ ಕ್ಲಬ್ ಮೊಳಹಳ್ಳಿ-ಶಿವಶಾಂತಿ ಯ ಕಾರ್ಯದರ್ಶಿ ಲ. ದಯಾನಂದ್, ಹಾಲಾಡಿ-ಬಿದ್ಕಲ್ ಕಟ್ಟೆ ಕಾರ್ಯದರ್ಶಿ ಲ. ಚಂದ್ರ ಶೇಖರ್ ಶೆಟ್ಟಿ, ಆರ್ಡಿ-ಬೆಳ್ವೆ-ಗೋಳಿಯಂಗಡಿ ಕಾರ್ಯದರ್ಶಿ ಅಣ್ಣಯ್ಯ ಶೆಟ್ಡಿ, ಬನ್ನಾಡಿ-ವಡ್ಡರ್ಸೆಯ ಕಾರ್ಯದರ್ಶಿ ಲ. ಕೊತ್ತಾಡಿ ಅಜಿತ್ ಕುಮಾರ್ ಶೆಟ್ಟಿ ತಮ್ಮ ಕ್ಲಬ್ ನ ಸೇವಾ ಕಾರ್ಯಕ್ರಮಗಳ ವರದಿ ವಾಚಿಸಿದರು.
ರೀಜನ್ ಚಯರ್ ಪರ್ಸನ್ ಲ. ಭೋಜರಾಜ್ ಶೆಟ್ಟಿ, ಕ್ಯಾಬಿನೇಟ್ ಸದಸ್ಯರುಗಳಾದ ಲ. ಅರುಣ್ ಕುಮಾರ್ ಹೆಗ್ಡೆ, ಲ. ಉದಯ್ ಕುಮಾರ್ ಶೆಟ್ಟಿ, ಏಕನಾಥ್ ಬೋಳಾರ್, ಲ. ದೀನಪಾಲ್ ಶೆಟ್ಟಿ, ಲ. ಹೆಚ್. ದೀಪಕ್ ಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಅಧ್ಯಕ್ಷರಾದ ಲ. ರಾಜಾರಾಮ್ ಶೆಟ್ಟಿ ಕಲ್ಕಟ್ಟೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಕೋಶಾಧಿಕಾರಿ ಲ. ವಡ್ಡರ್ಸೆ ಹಾಡಿ ಮನೆ ಬಾಲಕೃಷ್ಣ ಶೆಟ್ಟಿ ವಂದಿಸಿದರು.
ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ಸ್ಥಾಪಕಾಧ್ಯಕ್ಷರಾದ ಲ. Adv ಬನ್ನಾಡಿ ಸೋಮನಾಥ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
