ಮುಂಬಯಿ, ಜೂ.24: ವಾಕ್ಚತುರ್ಯ (ಭಾಷಣ) ಸ್ಪರ್ಧೆಗಳು ವಿದ್ಯಾಥಿರ್üಗಳು ಮತ್ತು ಶಿಕ್ಷಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಶಕ್ತಿಯಾಗಿದೆ. ಭಾರತ ರಾಷ್ಟ್ರದ ಭವಿಷ್ಯದ ಬೆನ್ನೆಲುಬು ಆಗಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಉತ್ತಮ ವೇದಿಕೆಯ ನಿರ್ಮಾಣಕ್ಕೆ ಇದು ಸಹಕಾರಿಯಗಿದ್ದು ಇಂತಹ ಉದ್ದೇಶವನ್ನಿರಿಸಿ ನಮ್ಮ ಸಂಸ್ಥೆ ಪ್ರೇರೆಪಿಸಲು ಮುಂದಾಗಿದೆ. ಸಂವಹನದಲ್ಲಿ ವಾಗ್ಮಿ ಸ್ಪರ್ಧೆ ಅತ್ಯಗತ್ಯ. ಪ್ರೇಕ್ಷಕರ ಮುಂದೆ ಬರುವ ಸಂವಹನದೊಂದಿಗೆ ದಿಟ್ಟತನ, ಭರವಸೆಯನ್ನು ಹೆಚ್ಚಿಸಲೂ ಇದು ವೇದಿಕೆಯಾಗಿದೆ ಎಂದು ಬಂಟ್ಸ್ ಸಂಘ ಮುಂಬಯಿ ಸಂಚಾಲಿತ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ಕಾರ್ಯಾಧ್ಯ ಕಾರ್ಯಾಧ್ಯಕ್ಷ ಬಿ.ಆರ್ ಶೆಟ್ಟಿ ತಿಳಿಸಿದರು.
ಇಂದಿಲ್ಲಿ ಶನಿವಾರ ಮಧ್ಯಾಹ್ನ ಪೆರುವಾಯಿಯಲ್ಲಿನ ಎಸ್.ಎಂ ಶೆಟ್ಟಿ ಹೈಸ್ಕೂಲ್ನ ಆರ್.ಎನ್ ಶೆಟ್ಟಿ ಒಳಾಂಗಣ ಸಭಾಗೃಹದಲ್ಲಿ ಬಂಟ್ಸ್ ಸಂಘದ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯು ತನ್ನ ರಜತೋತ್ಸವ ಸಂಭ್ರಮದ ಪ್ರಯುಕ್ತ ಮುಂಬಯಿ ಮತ್ತು ಉಪನಗರಗಳಲ್ಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಅಂತರ್ ಶಾಲಾ (ಇಂಟರ್ ಸ್ಕೂಲ್) ವಾಕ್ಚತುರ್ಯ (ಭಾಷಣ) ಸ್ಪರ್ಧೆಯನ್ನು ಉದ್ಘಾಟಿಸಿ ಬಿ.ಆರ್ ಶೆಟ್ಟಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಬಿ.ಆರ್ ಶೆಟ್ಟಿ ಮಾತನಾಡಿ ರಾಷ್ಟ್ರಕ್ಕೆ ಸಕಾರಾತ್ಮಕ ಕೊಡುಗೆ ನೀಡುವವರನ್ನು ಅಭಿವೃದ್ಧಿಪಡಿಸಲು ನಾವು ಮೌಖಿಕ ಸಿದ್ಧಾಂತದ ಬೆಳವಣಿಗೆಗೆ ಮಕ್ಕಳನ್ನು ಸಿದ್ಧಪಡಿಸ ಬೇಆಗಿದ್ದುಭವ್ಯ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರತೀ ವಿದ್ಯಾರ್ಥಿಗಳನ್ನೂ ನಮ್ಮ ದೇಶದ ನಾಗರಿಕನನ್ನಾಗಿ ಪರಿವರ್ತಿಸಿ ಮುಂದೆ ಅವರು ಸಮಾಜಕ್ಕಾಗಿ ಶ್ರಮಿಸುವ ಮನೋಭಾವನೆಯನ್ನು ಮೂಡಿಸುವ ಭಾವನೆಯಿಂದ ಇಂತಹ ಸ್ಪರ್ಧೆಗಳನ್ನು ಆಯೋಜಿಸಿದ್ದೇವೆ. 25 ವರ್ಷಗಳ ಅದ್ಭುತ ವರ್ಷಗಳ ಯಶಸ್ಸನ್ನು ಪರಿಪೂರ್ಣಗೊಳಿಸಲು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಮತ್ತು ನಮ್ಮವರ ಸಾಮರ್ಥ್ಯದ ಬಗ್ಗೆ ಜಾಗೃತಿ ಮೂಡಿಸಲು ವಾಗ್ಮಿ ಸ್ಪರ್ಧೆಯು ಪೂರಕವಾಗಿದೆ. ಶಿಕ್ಷಣ ಸ್ಟೇಟ್ ಬೋರ್ಡ್, ಸಿಬಿಎಸ್ಇ, ಐಸಿಎಸ್ಇ ಮತ್ತು ಕೇಂಬ್ರಿಡ್ಜ್ ಶಿಕ್ಷಣ ಮಂಡಳಿಗಳ ಮುಂಬಯಿ, ಥಾಣೆ ಮತ್ತು ನವಿ ಮುಂಬಯಿ ಉಪನಗರಗಳಲ್ಲಿನ ಸುಮಾರು 75ಕ್ಕೂ ಅಧಿಕ ಶಾಲೆಗಳ ಸ್ಪರ್ಧಿಗಳು ಭಾಗವಹಿಸಿರುವುದು ನಮ್ಮ ಹಿರಿಮೆಯಾಗಿದೆ. ಇದು ನಮ್ಮ ಸಂಸ್ಥೆಯ ವಾರ್ಷಿಕ ವೈಶಿಷ್ಟತೆಯ ಹೆಗ್ಗುರುತುವಾಗಲಿದೆ ಎಂದರು.
ಎಸ್.ಎಂ ಶೆಟ್ಟಿ ಸಂಸ್ಥೆಯ ಉಪ ಕಾರ್ಯಾಧ್ಯಕ್ಷರುಗಳಾದ ರತ್ನಾಕರ ಶೆಟ್ಟಿ ಮುಂಡ್ಕೂರು ಮತ್ತು ವಸಂತ್ ಎನ್.ಶೆಟ್ಟಿ ಪಲಿಮಾರು, ಕಾರ್ಯದರ್ಶಿ ಸಿಎಸ್| ಉತ್ತಮ್ ಶೆಟ್ಟಿ, ಕೋಶಾಧಿಕಾರಿ ಸಿಎ| ಜಗದೀಶ್ ಬಿ.ಶೆಟ್ಟಿ, ಸಂಚಾಲಕ ಸಿಎ| ಹರೀಶ್ ಡಿ.ಶೆಟ್ಟಿ, ಎಸ್.ಎಂ ಶೆಟ್ಟಿ ಸಂಸ್ಥೆಯ ಸದಸ್ಯರಾದ ಮಹೇಶ್ ಎಸ್.ಶೆಟ್ಟಿ, ಡಾ| ಮನೋಹರ್ ಎಸ್.ಹೆಗ್ಡೆ, ರವೀಂದ್ರನಾಥ್ ಎಂ.ಭಂಡಾರಿ, ನಿಶಿತ್ ಶೆಟ್ಟಿ, ಪ್ರಾಯೋಜಕರ ಪ್ರತಿನಿಧಿ ವೃತ್ತಿ ನಿರತ ಸಲಹೆಗಾರ ನ್ಯಾಯವಾದಿ ಬಿ.ಬಿ ಶೆಟ್ಟಿ, ಎಸ್.ಎಂ ಶೆಟ್ಟಿ ಕಾಲೇಜು ಪ್ರಾಂಶುಪಾಲ ಡಾ| ಶ್ರೀಧರ ಶೆಟ್ಟಿ, ರಾಜ್ಯ ಮಂಡಳಿ ಶಾಲಾ ಪ್ರಾಂಶುಪಾಲೆ ಸೀಮಾ ಸಬ್ಲೋಕ್, ಪ್ರಧಾನ ಪ್ರಬಂಧಕ ಡಾ| ಸಂದೀಪ್ ಸಿಂಗ್ ವೇದಿಕೆಯಲ್ಲಿ ಆಸೀನರಾಗಿದ್ದರು.
ಕಾರ್ಯಕ್ರಮದಲ್ಲಿ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಕ್ರೀಡಾ ಚಾಂಪಿಯನ್ ಕು| ಅಪೇಕ್ಷಾ ಫೆರ್ನಾಂಡಿಸ್ (ಕಿನ್ನಿಗೋಳಿ) ಇವರನ್ನು (ತಾಯಿ ಶಾಲೆಟ್ ಫೆರ್ನಾಂಡಿಸ್ ಅವರನ್ನೊಳಗೊಂಡು) ಉಪಸ್ಥಿತ ಪದಾಧಿಕಾರಿಗಳೊಂದಿಗೆ ಅಧ್ಯಕ್ಷರು ರೂಪಾಯಿ 1.5 ಲಕ್ಷ ಮೊತ್ತದ ಚೆಕ್ ಪ್ರದಾನಿಸಿ ಸನ್ಮಾನಿಸಿ ಅಭಿನಂದಿಸಿದರು ಹಾಗೂ ಸ್ಪರ್ಧಾ ಎಲ್ಲಾ ತೀರ್ಪುಗಾರರಿಗೆ ಗೌರವಿಸಿದರು. ಅಪೇಕ್ಷಾ ಫೆರ್ನಾಂಡಿಸ್ ಸನ್ಮಾನಕ್ಕೆ ಉತ್ತರಿಸಿ ಅಭಿವಂದಿಸಿದರು.
ಶಾಲಾ ಪ್ರಾರ್ಥನೆ ಮತ್ತು ಶಾಲಾ ವಿದ್ಯಾರ್ಥಿಗಳ ಗಣೇಶ ವಂದನೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಸೀಮಾ ಸಬ್ಲೋಕ್ ಸ್ವಾಗತಿಸಿ ಪ್ರಸ್ತಾವನೆಗೈದರು. ಶಿಕ್ಷಕಿಯರಾದ ರೀನಾ ಪೂಜಾರಿ ಮತ್ತು ರೇಶ್ಮಾ ರಾವ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.