ಕುಂದಾಪುರ ಮೂಲದ ಸಿದ್ಧಾಪುರದ ಕಡ್ರಿ ಜಯಕರ್ ಶೆಟ್ಟಿ ಯವರು ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಆಯ್ಕೆ ಆಗಿದ್ದಾರೆ.
ಈ ಹಿಂದೆ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಪ್ರಭಾರ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿರುವ ಜಯಕರ್ ಶೆಟ್ಟಿಯವರು ಮೊಗೆಬೆಟ್ಟು ಪ್ರೇಮಾ ಶೆಟ್ಟಿ ಮತ್ತು ಸಿದ್ದಾಪುರದ ಕಡ್ರಿ ಗೋವಿಂದ ಶೆಟ್ಟರ ಸುಪುತ್ರ.
ವೃತ್ತಿಯಲ್ಲಿ ಪ್ರಖ್ಯಾತ ದಂತವೈದ್ಯರಾಗಿದ್ದು ಹಲವು ವರ್ಷಗಳಿಂದ ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ವೃತ್ತಿ ನಿರತರಾಗಿದ್ದಾರೆ. ಜಯಕರ್ ಶೆಟ್ಟಿಯವರು ಈ ಗೌರವಾನ್ವಿತ ಹುದ್ಧೆಯಲ್ದಿ ಯಶಸ್ಸನ್ನು ಕಾಣಲಿ ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಹಾರೈಸುತ್ತೇವೆ.