ಗುರುಪುರ ಬಂಟರ ಮಾತೃ ಸಂಘದ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ಬಂಟ ಯುವಕರನ್ನು ಸಂಘಟಿಸುವ ದೃಷ್ಟಿಯಿಂದ ಯುವ ಬಂಟರ ಸಭೆಯು ದಿನಾಂಕ 26-06-22 ರವಿವಾರ ತೆಂಕುಳಿಪಾಡಿ ಗ್ರಾಮದ ವಿನಯ ಶೆಟ್ಟಿ ಮನೆಯಲ್ಲಿ ಯುವ ವಿಭಾಗದ ಅಧ್ಯಕ್ಷರಾದ ದೀಪಕ್ ಶೆಟ್ಟಿ ಲಿಂಗ ಮಾರ್ ಗುತ್ತು ಇವರ ನೇತ್ರತ್ವದಲ್ಲಿ ನಡೆಯಿತು. ಈ ಸಭೆಯಲ್ಲಿ ಗ್ರಾಮದ ಹೆಚ್ಚಿನ ಯುವಕರು ಆಸಕ್ತಿಯಿಂದ ಭಾಗವಹಿಸಿದರು. ಈ ಸಭೆಯಲ್ಲಿ ಸಂಘದ ವಾರ್ಷಿಕ ಸಮಾವೇಶ ವಿದ್ಯಾರ್ಥಿ ವೇತನ ಹಾಗೂ ಸಂಘದ ನಿವೇಶನ ಖರೀದಿ, ಸಂಪನ್ಮೂಲ ಕ್ರೂಡಿಕರಣ ,ಸಮಾಜದ ಸಂಘಟನೆಬಗ್ಗೆ ಮಾಹಿತಿ ನೀಡಲಾಯಿತು.ಎಲ್ಲಾ ಯುವಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ,ಸಂಚಾಲಕರಾದ ಚಂದ್ರಹಾಸ್ ಶೆಟ್ಟಿ ನಾರಳ, ಕೋಶಾಧಿಕಾರಿ ಜಯರಾಮ್ ಶೆಟ್ಟಿ ವಿಜೇತ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರಿಮತಿ ಇಂದಿರಾಕ್ಷಿ ಶೆಟ್ಟಿ,ಸುದರ್ಶನ್ ಶೆಟ್ಟಿ ,ಜಯರಾಂ ರೈ, ಕೃಷ್ಣಕಾಂತ್ ಶೇಣವ, ಪ್ರಖ್ಯಾತ ಶೆಟ್ಟಿ,ಅನೂಪ್ ಶೆಟ್ಟಿ,ಮನೋಜ್ ರೈ,ಶಿವರಾಜ್ ರೈ,ಶಿವಪ್ರಸಾದ್, ನರೇಶ್ ಶೆಟ್ಟಿ, ಹಿರಿಯರಾದ ಶಂಕರ್ ಶೆಟ್ಟಿ,ನಿತ್ಯಾನಂದ ಮಲ್ಲಿ ಗ್ರಾಮಗಳ ಹಿರಿಯರು,ಯುವಕರು ಭಾಗವಹಿಸಿದ್ದರು.