ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಆಗುಂಬೆ ವಲಯ ಮತ್ತು ಹರಿಹರಪುರ ವಲಯವನ್ನೊಳಗೊಂಡ ಕಮ್ಮರಡಿ ಘಟಕವನ್ನು ಮಾ.9 ರಂದು ತೀರ್ಥಹಳ್ಳಿ ಬಾಳೇಬೈಲಿನ ರಾಕ್ ವೀವ್ ಹೋಟೆಲ್ ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಲಾಯಿತು. ಕಮ್ಮರಡಿ ಘಟಕ ಟ್ರಸ್ಟ್ ನ 38 ನೇ ಘಟಕವಾಗಿದೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ನಾಗತೀರ್ಥ ಚಿಟ್ಸ್ ನ ಆಡಳಿತ ನಿರ್ದೇಶಕರು ಹಾಗೂ ರಾಕ್ ವೀವ್ ಹೋಟೆಲಿನ ಮಾಲೀಕರಾದ ಕಿಮ್ಮನೆ ಆದಿತ್ಯ, ತೀರ್ಥಹಳ್ಳಿಯ ಶ್ರೀ ಮಾರಿಕಾಂಬ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ಶೆಟ್ಟಿ, ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ, ಖ್ಯಾತ ಯಕ್ಷಗಾನ ಭಾಗವತ ಮತ್ತು ಪಟ್ಲ ಫೌಂಡೇಶನ್ ನ ಸತೀಶ್ ಶೆಟ್ಟಿ ಪಟ್ಲ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಯಕ್ಷಗಾನ ಕಲಾವಿದ ರಮೇಶ್ ಆಚಾರ್ಯ, ತೀರ್ಥಹಳ್ಳಿ ಪ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಪಟ್ಲ ಟ್ರಸ್ಟ್ ನ ಪುರುಷೋತ್ತಮ ಭಂಡಾರಿ, ರವಿ ಶೆಟ್ಟಿ , ಪ್ರದೀಪ್ ಆಳ್ವ , ಶೇಷಾದ್ರಿ ಭಟ್ ಅರಮನೆತೋಟ ಅವರು ಉಪಸ್ಥಿತರಿದ್ದು ಮಾತನಾಡಿದರು.
ಇದೇ ಸಂದರ್ಭದಲ್ಲಿ ಭಾಗವತ ಪಟ್ಲ ಸತೀಶ್ ಶೆಟ್ಟಿ, ಕಲಾವಿದರಾದ ಉಮೇಶ್ ಕಾಸರವಳ್ಳಿ, ಸತ್ಯನಾರಾಯಣ ರಾವ್ ಅವರನ್ನು ಸನ್ಮಾನಿಸಲಾಯಿತು.
ಅರವಿಂದ್ ಪ್ರಾರ್ಥಿಸಿದರು. ಶಿವಕುಮಾರ್ ಸ್ವಾಗತಿಸಿದರು. ನಾಗತೀರ್ಥ ಚಿಟ್ಸ್ ಹಾಗೂ ಪಟ್ಲ ಫೌಂಡೇಷನ್ ನ ಸತೀಶ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಡಾನ್ ರಾಮಣ್ಣ ಕಾರ್ಯಕ್ರಮ ನಿರೂಪಿಸಿದರು.