ಬೆಂಗಳೂರು ಬಂಟರ ಸಂಘ ಹಾಗೂ ಇದರ ಸಮಾಜ ಸೇವಾ ಸಮಿತಿ ಮತ್ತು ಸೇವಾದಳವು ವಿಶಿಷ್ಟ ಕಾರ್ಯಕ್ರಮಗಳಿಂದಾಗಿ ಜನಜನಿತವಾಗಿದೆ. ಮತ್ತೆ ಈ ಬಾರಿ ಸಮಾಜಕ್ಕೆ ಹಲವಾರು ಹಿತವಾದ ಆರೋಗ್ಯ ತಪಾಸಣೆ, “ನೆತ್ತರ ನೆರವು”-ರಕ್ತದಾನ ಶಿಬಿರ, ನೇತ್ರದಾನ, ಕೋವಿಡ್- 19 ಲಸಿಕೆ ಅಭಿಯಾನ – 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್, ಇತರೆ ಉಪಯುಕ್ತ ಕಾರ್ಡ್ ಗಳ ಮಾಹಿತಿ ಹಾಗೂ ಮಾಡುವಿಕೆ, ಮಣಿಪಾಲ, ಕಿದ್ವಾಯಿ ಮತ್ತು ಪ್ರತಿಷ್ಠಿತ ಆಸ್ಪತ್ರೆಗಳ ಸಹಯೋಗದೊಂದಿಗೆ ಹೃದಯ ಪರೀಕ್ಷೆ ಮತ್ತು ಇನ್ನಿತರ ಕಾರ್ಯಕ್ರಮಗಳ ಗುಚ್ಛ ಸೇವಾಚೇತನ-2 ಕಾರ್ಯಕ್ರಮವು ಇದೇ ಬರುವ ತಾ. 13/03/2021, ರವಿವಾರದಂದು ಬೆಂಗಳೂರು ಬಂಟರ ಸಂಘದಲ್ಲಿ ನಡೆಯಲಿದೆ.
ಕಾರ್ಯಕ್ರಮಗಳ ವಿವರ:
1.ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧೀನದಲ್ಲಿರುವ ADIPS ಯೋಜನೆಯ ಅನುಸಾರ 5 ವರ್ಷದ ಒಳಗಿನ ಮಕ್ಕಳಿಗೆ ಬೆಂಗಳೂರಿನ ವಿವಿಧ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆಯ ಮುಖಾಂತರ ಸಲಕರಣೆಯನ್ನು( Cochler Implant) ಅಳವಡಿಸಿ ಕಿವುಡುತನವನ್ನು ನಿವಾರಿಸಲಾಗುವುದು.
2. ಬೆಂಗಳೂರಿನ ಕಿದ್ವಾಯ್ ಮೆಮೋರಿಯಲ್ ಆಸ್ಪತೆಯ ತಜ್ಞ ವೈದ್ಯರಿಂದ ನಡೆಯುವ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ Mammogram, X Ray, ಪ್ಯಾಪ್ ಸ್ಮಿಯರ್ ಮುಂತಾದ ಕ್ಯಾನ್ಸರ್ ಪತ್ತೆ ಹಚ್ಚುವ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು.
3. ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಮತ್ತು ಆಂಕೋ ವಿಲ್ಲೆ ತಜ್ಞ ವೈದ್ಯರಿಂದ ಉಚಿತ ಸಲಹೆ ಮತ್ತು ಸಮಾಲೋಚನೆ.
4. ಕರ್ನಾಟಕ ಮಾರ್ವಾರಿ ಯೂತ್ ಫೆಡರೇಷನ್ ಇವರ ಸಹಯೋಗದೊಂದಿಗೆ ಉಚಿತ ಕೃತಕ ಕಾಲುಗಳ ಅಳವಡಿಕೆ.
5. Spine Care And Ortho Care ಆಸ್ಪತ್ರೆಯ ಸಹಯೋಗದಲ್ಲಿ ಬೆನ್ನು ಹುರಿ ಚಿಕಿತ್ಸೆಯ ಉಚಿತ ತಪಾಸಣಾ ಶಿಬಿರ.
6. ನಾರಾಯಣ ಹೃದಯಾಲಯದ ಸಹಯೋಗದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಉಚಿತ ತಪಾಸಣಾ ಶಿಬಿರ.
7. ನಾರಾಯಣ ನೇತ್ರಾಲಯದ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ.
8. ಫೋರ್ಟಿಸ್ ಆಸ್ಪತ್ರೆ, ನಾಗರಬಾವಿ ಮತ್ತು ಪ್ರೀಮಿಯರ್ ಸಂಜೀವಿನಿ ಆಸ್ಪತ್ರೆ, ದಾಸರಹಳ್ಳಿ ಇವರ ಸಹಯೋಗದಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ.
9. ಕೇಂದ್ರ ಕಾರ್ಮಿಕ ಸಚಿವಾಲಯದ ಇ ಎಸ್ ಐ ಸಿ ಮತ್ತು ಅಯುಷ್ಮಾನ್ ಭಾರತ್ ಯೋಜನೆಯಡಿ ಬರುವ ಚಿಕಿತ್ಸೆ ಗಳಿಗೆ ಮಾಹಿತಿ ಮತ್ತು ಪೂರಕವಾದ ಸಲಹೆಗಳನ್ನು ಶಿಬಿರದಲ್ಲಿ ನೀಡಲಾಗುವುದು.
ಈ ಎಲ್ಲಾ ಕಾರ್ಯಕ್ರಮಗಳ ಸದುಪಯೋಗವನ್ನು ಬಂಟ ಸಮಾಜದ ಎಲ್ಲಾ ನಾಗರಿಕರು ಪಡೆದುಕೊಳ್ಳಲು ಸಹಕರಿಸಬೇಕಾಗಿ ಕೇಳುತ್ತಾ ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಆರ್ ಶೆಟ್ಟಿ, ಗೌ ಕಾರ್ಯದರ್ಶಿ ಮಧುಕರ್ ಎಂ ಶೆಟ್ಟಿ ಮತ್ತು ಸೇವಾದಳದ ಮುಖ್ಯಸ್ಥ ಉಮೇಶ್ ಶೆಟ್ಟಿ ಮಂದಾರ್ತಿ ಪ್ರೀತಿಯಿಂದ ಆಮಂತ್ರಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ +91 98450 25921, +91 99162 32028, +91 89718 69702, 9620215965 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.