ವ್ಯಕ್ತಿಗಿಂತ ಸಂಘ ದೊಡ್ಡದು, ಅಧಿಕಾರಕ್ಕಿಂತ ಸಂಘದ ಗೌರವ ದೊಡ್ಡದು. ಸಂಘದ ಹಿತಾಸಕ್ತಿ ಮತ್ತು ಶತಮಾನೋತ್ಸವದ ಸಂಭ್ರಮಕ್ಕೆ ಯಾವುದೇ ಅಡ್ಡಿಯಾಗಬಾರದು ಎಂಬ ಉದಾತ್ತ ಉದ್ದೇಶದಿಂದ ಡಾ| ಆರ್.ಕೆ ಶೆಟ್ಟಿಯವರು ಚುನಾವಣಾ ಕಣದಿಂದ ಹಿಂದೆ ಸರಿದ ನಿರ್ಧಾರ ಇಡೀ ಬಂಟ ಸಮುದಾಯಕ್ಕೆ ಹೊಸ ಆದರ್ಶವಾಗಿದೆ. ಅದೇ ರೀತಿ, ಮಹೇಶ್ ಶೆಟ್ಟಿಯವರು ಸಂಘದ ಒಗ್ಗಟ್ಟಿಗೆ ಆದ್ಯತೆ ನೀಡಿ ಸಾಮರಸ್ಯದ ಹಾದಿಗೆ ಕೈ ಜೋಡಿಸಿದ್ದಾರೆ. ಇದು ಯಾರೊಬ್ಬರ ಗೆಲುವಲ್ಲ, ಯಾರೊಬ್ಬರ ಸೋಲೂ ಅಲ್ಲ. ಇದು ಇಡೀ ಬಂಟ ಸಮುದಾಯದ ಒಗ್ಗಟ್ಟಿನ ಗೆಲುವಾಗಿದೆ. ಮಹೇಶ್ ಶೆಟ್ಟಿ ಹಾಗೂ ಡಾ| ಆರ್.ಕೆ ಶೆಟ್ಟಿ ಇಬ್ಬರೂ ಸೇರಿ ಸಂಘದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಪದವಿಗಿಂತ ಸಂಘ ದೊಡ್ಡದು, ವ್ಯಕ್ತಿಗಿಂತ ಸಮಾಜ ದೊಡ್ಡದು, ವೈಯಕ್ತಿಕ ಗೆಲುವಿಗಿಂತ ಸಾಮೂಹಿಕ ಒಗ್ಗಟ್ಟು ದೊಡ್ಡದು ಎಂಬ ಸಂದೇಶವನ್ನು ತಮ್ಮ ನಡೆನುಡಿಯ ಮೂಲಕ ಸಾರಿದ್ದಾರೆ. ಬಂಟರ ಸಂಘದ ಒಗ್ಗಟ್ಟು ಚಿರಾಯುವಾಗಲಿ. ಶತಮಾನೋತ್ಸವದ ಸಂಭ್ರಮ ಐತಿಹಾಸಿಕವಾಗಲಿ.





















































































































