ಕೈಯೂರು ಶ್ರೀ ಕ್ಷೇತ್ರ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷ ಎ.ಕೆ. ಜಯರಾಮ ರೈಯವರಿಗೆ ಅಣಿಲೆ ತರವಾಡು ಕುಟುಂಬದ ವತಿಯಿಂದ ಏಪ್ರಿಲ್ 6 ರಂದು ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಎ.ಕೆ. ಜಯರಾಮ ರೈಯವರು ಮಾತನಾಡಿ, ಅಣಿಲೆ ತರವಾಡು ಕುಟುಂಬ ಸಣ್ಣ ಕುಟುಂಬವಾಗಿದ್ದು, ಈ ತರವಾಡು ಕುಟುಂಬದ ಎಲ್ಲಾ ಸದಸ್ಯರು ಒಗ್ಗೂಡಿ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗಿಗಳಾಗುತ್ತಿರುವುದು ತುಂಬಾ ಸಂತೋಷ ತಂದಿದೆ. ಮುಂದೆ ಅಣಿಲೆ ತರವಾಡು ಕುಟುಂಬದ ವತಿಯಿಂದ ಅನೇಕ ಅಭಿವೃದ್ಧಿ ಕೆಲಸಗಳು ಆಗಲಿದ್ದು, ಎಲ್ಲರೂ ಸಹಕಾರವನ್ನು ನೀಡಬೇಕಾಗಿ ವಿನಂತಿಸಿ, ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.

ಈ ಸಂಧರ್ಭ ಅಣಿಲೆ ತರವಾಡು ಕುಟುಂಬದ ಯಜಮಾನ ಅಣಿಲೆ ಕರ್ಪುಡಿಕಾನ ರಾಮಕೃಷ್ಣ ರೈ, ಅಣಿಲೆ ತರವಾಡು ಧರ್ಮ ದೈವ ಸೇವಾ ಸಮಿತಿ ಟ್ರಸ್ಟ್ ನ ಕೋಶಾಧಿಕಾರಿ ಶಶಿಧರ್ ಅಣಿಲೆ, ಮಾಜಿ ಸೈನಿಕ ಅಮ್ಮಣ್ಣ ರೈ ದೇರ್ಲ, ಭಾರತಿ ರೈ, ಅಮೂಲ್ಯ ರೈ, ಪಿ.ಬಿ. ಅಮ್ಮಣ್ಣ ರೈ ಪಾಪೆಮಜಲು, ಪದ್ಮನಾಭ ಆಳ್ವ ಅಣಿಲೆ, ಎ.ಕೆ. ತಿಮ್ಮಪ್ಪ ರೈ ಕೆಯ್ಯೂರು, ಸೋಮಶೇಖರ್ ರೈ, ನಾರಾಯಣ ರೈ, ಸುನೀತಾ ಸುರೇಶ್ ರೈ, ರವಿ ರೈ, ಸುಂದರ ರೈ, ಪ್ರೇಮಾ ರೈ, ಗೀತೇಶ್ ರೈ, ಶನ್ಮಿತ್ ರೈ, ವಿಶ್ವನಾಥ ರೈ, ಸಾವಿತ್ರಿ ರೈ, ಬಾಬು ರೈ, ಶ್ರೀಜನ್ ರೈ, ಭವ್ಯ ರೈ, ಹರಿನಾಥ ರೈ ಕೂಡೇಲು, ಸುರೇಂದ್ರ ರೈ, ಸುಹಾಸಿನಿ ಆಳ್ವ ಪೆರ್ವತೋಡಿ, ಕಿರಣ್ ರೈ, ಅಣಿಲೆ ಮತ್ತು ಅಣಿಲೆ ತರವಾಡು ಕುಟುಂಬದ ಸದಸ್ಯರು, ಬಂಧುಗಳು, ಹಿತೈಷಿಗಳು ಉಪಸ್ಥಿತರಿದ್ದರು. ಮತ್ತು ಅವಳಿ ಮಕ್ಕಳಾದ ಇಷ್ಟ ಮತ್ತು ಶ್ರೇಷ್ಠ ಪ್ರಾರ್ಥನೆಗೈದರು. ಸಚಿನ್ ರೈ ಪಾಪೆಮಜಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಣಿಲೆ ತರವಾಡು ಧರ್ಮದೈವ ಸೇವಾ ಸಮಿತಿ ಟ್ರಸ್ಟ್ ನ ಕಾರ್ಯದರ್ಶಿ ರಾಜೀವಿ ರೈ ವಂದಿಸಿದರು.