ಮೀರಾರೋಡಿನ ಮೀರಾಗಾoವ್ ಮೀರಾ ಸೊಸೈಟಿಯಲ್ಲಿ ತುಳು ಕನ್ನಡಿಗರು ಸ್ಥಾಪಿಸಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಮಂತೂರು ಮಜಲಗುತ್ತು ಬಾಬಾ ರಂಜನ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾಗಿರುವ ಸಾಂತಿಂಜ ಜನಾರ್ಧನ್ ಭಟ್ ನೇತೃತ್ವದಲ್ಲಿ 35ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆಯು ಶ್ರೀ ಜಯಶೀಲ ಗುರುಸ್ವಾಮಿಯವರ ಮಾರ್ಗದರ್ಶನದಲ್ಲಿ ನವೆಂಬರ್ 28ರ ಶನಿವಾರದಂದು ಬಹಳ ವಿಜೃಂಭಣೆಯಿಂದ ಜರಗಲಿರುವುದು. ಅಂದು ಬೆಳಿಗ್ಗೆ ಗಂಟೆ 6ರಿಂದ 7ರ ತನಕ ಗಣಹೋಮ, 7ರಿಂದ 8ರ ತನಕ ರುದ್ರಾಭಿಷೇಕ, 8:30 ರಿಂದ 9 ರವರೆಗೆ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ, ಗಂಟೆ 9ರಿಂದ 10ವರೆಗೆ ಕೇರಳ ಭಜನಾ ತಂಡದವರಿಂದ ಭಜನೆ, ಬಳಿಕ 10:30 ರಿಂದ 12 ರವರೆಗೆ ಜಯಶೀಲ ತಿಂಗಳಾಯರ ನೇತೃತ್ವದಲ್ಲಿ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಗಂಟೆ 12:30 ರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಪಡಿಪೂಜೆ ಹಾಗೂ ಮಹಾಮಂಗಳಾರತಿ ನಡೆಯಲಿದೆ.




ಮಹಾಪೂಜೆಯ ಅನ್ನದಾನದ ಸೇವೆ ಸಾಯಿ ಪೂಂಜಾ (ಹೋಟೆಲ್ ಸಾಯಿ ಅಕ್ವಾ), ರಶ್ಮಿಶ್ ಶೆಟ್ಟಿ (ಅನ್ನು) ಹೋಟೆಲ್ ಎ.ಆರ್ ರೆಸಿಡೆನ್ಸಿ, ಶಕ್ತಿ ಪೂoಜಾ (ಹೋಟೆಲ್ ಸಾಯಿ ಅಕ್ವಾ) ಹಾಗೂ ಶ್ರೀ ಅಯ್ಯಪ್ಪ ಸ್ವಾಮಿಯ ಮಂಟಪದ ಸೇವೆ ಆನಂದ ಶೆಟ್ಟಿ ಐಕಳ (ಹೋಟೆಲ್ ದ್ವಾರಕಾ), ಸುರೇಶ್ ಶೆಟ್ಟಿ (ಹೋಟೆಲ್ ಸಮಾಧಾನ್) ಮತ್ತು ಹೂವಿನ ಸಿಂಗಾರ ಸೇವೆಯನ್ನು ಮಂಜುನಾಥ್ ಲಿಂಗಾಯತ ಮತ್ತು ಪರಮೇಶ್ ಲಿಂಗಾಯತ (ಹೋಟೆಲ್ ಸೂರ್ಯಪ್ರಕಾಶ್ ಮತ್ತು ಸರೋಜಾ ಲಾಡ್ಜಿಂಗ್) ಇವರು ನೀಡಿರುವರು. ಈ ಧಾರ್ಮಿಕ ಕಾರ್ಯದಲ್ಲಿ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು, ಭಕ್ತಾದಿಗಳು ಭಾಗವಹಿಸಿ ತನು ಮನ ಧನಗಳಿಂದ ಸಹಕರಿಸಿ ಶ್ರೀ ಮಹಾಲಿಂಗೇಶ್ವರ ದೇವರ ಹಾಗೂ ಕಲಿಯುಗ ವರದ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಮಹಾಲಿಂಗೇಶ್ವರ ಟ್ರಸ್ಟ್ ಸದಸ್ಯರು ಹಾಗೂ ಮೀರಾ ಸೊಸೈಟಿಯವರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.


















































































































