ಲೊಯೋಲಾ ಹಾಲ್ ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಇಲ್ಲಿ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎರಡು ದಿನ ಟ್ರಸ್ಟಿನ ಅಧ್ಯಕ್ಷರಾದ ಝಕರಿಯಾ ಜೋಕಟ್ಟೆ ಇವರ ಸಾರಥ್ಯದಲ್ಲಿ ಸಮಾಜಕಾರ್ಯ ವಿಭಾಗ ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಮತ್ತು ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ಬೆಂಗಳೂರು ಇದರ ಸಹಯೋಗದೊಂದಿಗೆ ಡಾ| ರೋನಾಲ್ಡ್ ಕೊಲಾಸೊ ಮತ್ತು ಸಮೀರ್ ರಹಿಮನ್ ಇವರ ಪ್ರಾಯೋಜಕತ್ವದಲ್ಲಿ ಯು.ಟಿ ಖಾದರ್ ಇವರ ಜನ್ಮದಿನ ಆಚರಣೆಯ ಅಂಗವಾಗಿ ಉಚಿತ ಕೃತಕ ಕೈ ಕಾಲು ಜೋಡಣಾ ಶಿಬಿರ ಮತ್ತು ಅಂಗವೈಕಲ್ಯ ಸಲಕರಣೆಗಳ ವಿತರಣೆಯ ಸಮಾಜ ಕಲ್ಯಾಣ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪಲಾನುಭವಿಗಳಿಗೆ ಅಂಗವೈಕಲ್ಯ ಸಲಕರಣೆಯನ್ನು ಹಸ್ತಾಂತರಿಸಿದರು.




ಕಾರ್ಯಕ್ರಮವನ್ನು ಅರೋಗ್ಯ ಸಚಿವರಾದ ಯು.ಟಿ ಖಾದರ್ ರವರು ಉದ್ಘಾಟಿಸಿ ಚಾಲನೆ ನೀಡಿದರು. ಈ ಸಂದರ್ಭ ಐಕಳ ಹರೀಶ್ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಡಾ. ಪ್ರವೀಣ್ ಮಾರ್ಟಿಸ್, ಬಿ.ಎಂ ಶರೀಫ್ ಬೋಳಾರ್, ಎಫ್.ಆರ್ ಸಿಂಗ್ವಿ, ಹಿದಯತ್ ಅಡ್ಡೂರು, ಡಾ. ವಿದ್ಯಾ ವಿನುತಾ ಡಿಸೋಜ, ಬಿ. ಮೊಹಮ್ಮದ್ ಹಾಜಿ, ಡಾ. ಮುಬಾಷಿರ್, ರಫೀಕ್ ಮಾಸ್ಟರ್, ರಶೀದ್ ವಿಟ್ಲ, ಅಮೀದ್ ಅತ್ತೂರು, ಅಜೀಜ್ ಬಸ್ತಿಕರ್ ಹಾಗೂ ಇತರರು ಉಪಸ್ಥಿತರಿದ್ದರು.


















































































































