ಬಂಟರ ಸಂಘ ಮುಂಬಯಿಯ ಬೊರಿವಲಿ ಆರತಿ ಶೆಟ್ಟಿ ಐಕಾನ್ ಸ್ಕೂಲ್ ಗೆ ರಾಷ್ಟ್ರಮಟ್ಟದ ಗೌರವ ಲಬಿಸಿದೆ. ಆರತಿ ಶೆಟ್ಟಿ ಐಕಾನ್ ಸ್ಕೂಲ್ (ಎಎಸ್ಎಸ್ಐಎಸ್) ಸಂಸ್ಥೆಯು ಎಜ್ಯುಕೇಶನ್ ವರ್ಲ್ಡ್ ಇಂಡಿಯಾ ಸ್ಕೂಲ್ ರಾಂಕಿಂಗ್ಸ್ ಅವಾರ್ಡ್ಸ್ 2026 -27 ರ ಭಾರತದ ಅತ್ಯುತ್ತಮ ಭವಿಷ್ಯ ಸನ್ನದ್ದ ಸುಸ್ಥಿರ ಶಾಲೆಗಳ ವಿಭಾಗದಲ್ಲಿ ಪ್ರತಿಷ್ಠಿತ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಷಯ. ಬೊರಿವಲಿ ಆರತಿ ಶೆಟ್ಟಿ ಐಕಾನ್ ಸ್ಕೂಲ್ ಗೆ ಭಾರತದಲ್ಲಿ 6ನೇ ಸ್ಥಾನ, ಮಹಾರಾಷ್ಟ್ರದಲ್ಲಿ 3ನೇ ಸ್ಥಾನ, ಮುಂಬಯಿಯಲ್ಲಿ 2ನೇ ಸ್ಥಾನ ಲಭಿಸಿದೆ. ಈ ಪ್ರತಿಷ್ಠಿತ ಗೌರವವನ್ನು ಶಾಲೆಯ ಪರವಾಗಿ ಸಂಸ್ಥಾಪಕ ಪ್ರಾಂಶುಪಾಲೆ ನಮ್ರತಾ ಸಕ್ಸೆನಾ ಅವರು ಸ್ವೀಕರಿಸಿದ್ದಾರೆ.





















































































































