ಕುಂದಾಪುರ ತಾಲೂಕು ಯುವ ಬಂಟ ಸಂಘದ ಆಶ್ರಯದಲ್ಲಿ ‘ಗೃಹ ಚೇತನ’ ಯೋಜನೆಯಡಿ ಹೊಸ ಮನೆ ನಿರ್ಮಾಣಕ್ಕೆ ಐವತ್ತು ಸಾವಿರ ರೂಪಾಯಿಗಳ ನೆರವನ್ನು ಸಂಘದ ನಿರ್ದೇಶಕರಾದ ಉದ್ಯಮಿ ಸಟ್ವಾಡಿ ವಿಜಯ ಶೆಟ್ಟಿಯವರು ಸಂಘದ ಕಚೇರಿಯಲ್ಲಿ ಫಲಾನುಭವಿ ಹರ್ಕೂರು ಹೊಸಿಮನೆ ಅಂಗಡಿಬೆಟ್ಟು ಜ್ಯೋತಿ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಡಾ| ಚೇತನ್ ಶೆಟ್ಟಿ ಕೋವಾಡಿ, ಸ್ಥಾಪಕಾಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ, ಉದ್ಯಮಿ ಪವನ್ ಶೆಟ್ಟಿ ಹರ್ಕೂರು, ನಿಕಟಪೂರ್ವ ಅಧ್ಯಕ್ಷ ನಿತೇಶ್ ಶೆಟ್ಟಿ ಬಸ್ರೂರು, ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಹರ್ಕೂರು, ಕೋಶಾಧಿಕಾರಿ ಅರುಣ್ ಶೆಟ್ಟಿ ಕುಂದಾಪುರ ಉಪಸ್ಥಿತರಿದ್ದರು.





















































































































