ಸಭಾ ಕಂಪನವಿಲ್ಲದೆ ಆತ್ಮವಿಶ್ವಾಸದೊಂದಿಗೆ ವೇದಿಕೆಯನ್ನು ಬಳಸಿಕೊಂಡು ನಿರೂಪಣೆ ಮಾಡುವ ಸಂದರ್ಭದಲ್ಲಿ ವಿಷಯ ಸಂಗ್ರಹಣೆ, ಸ್ಪಷ್ಟ ಉಚ್ಛಾರ ಮತ್ತು ನಿರರ್ಗಳತೆಯಿಂದ ಪ್ರೇಕ್ಷಕರನ್ನು ಸೆಳೆಯುವಂತಹ ಪದಬಳಕೆ ಮಾಡುವ ಮೂಲಕ ಉತ್ತಮ ನಿರೂಪಣೆ ಮಾಡಲು ಸಾಧ್ಯ ಎಂದು ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ರೇಷ್ಮಾ ಶೆಟ್ಟಿ ಹೇಳಿದರು. ಅವರು ಕುಂದಾಪುರ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಭಾಷಾ ಸಂಘ ಆಯೋಜಿಸಿದ ‘ನಿರೂಪಣೆ ಕುರಿತಾದ ಕಾರ್ಯಾಗಾರʼದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ಭಾಷಾ ಸಂಘದ ಸಂಯೋಜಕರಾದ ಶ್ರೀಮತಿ ಸ್ವಾತಿ ಜಿ. ರಾವ್ ಸ್ವಾಗತಿಸಿ, ಶ್ರೀಮತಿ ಪ್ರವೀಣಾ ಎಮ್ ಪೂಜಾರಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ, ಶ್ರೀಮತಿ ಸರೋಜಾ ವಂದಿಸಿ, ಶ್ರೀಮತಿ ಮೇಘಾ ಎಸ್. ಭಟ್ ಕಾರ್ಯಕ್ರಮ ನಿರೂಪಿಸಿದರು.

















































































































