ಶಿಕ್ಷಣ ಕಾಶಿ ಕರಾವಳಿಯಿಂದ (ತುಳುನಾಡು) ಉದ್ಯೋಗ ಹರಸಿ ಬಂದ ತೌಳವ ಬಂಧುಗಳು ಜಾತಿ, ಮೇಲ್ವರ್ಗ, ಕೆಳವರ್ಗ, ಬಡವ, ಶ್ರೀಮಂತ, ಆ ಪಕ್ಷ, ಈ ಪಕ್ಷ ಎನ್ನಾದೇ ತುಳುನಾಡ ಜವನೆರ್ ಬೆಂಗಳೂರು ಎಂಬ ಶೀರ್ಷಿಕೆಯಲ್ಲಿ ಸಣ್ಣ ತಂಡ ಕಟ್ಟಿಕೊಳ್ಳುತ್ತಾರೆ. ಕರಾವಳಿ (ತುಳುನಾಡು) ಇಲ್ಲಿ ಆಚರಣೆ, ನಂಬಿಕೆ, ಆರಾಧನೆ, ಆಟ ಕೂಟ, ಮೋಜು ಮಸ್ತಿಗೇನು ಕಡಿಮೆ ಇಲ್ಲ. ಪ್ರತಿ ದಿನವು ಇಲ್ಲಿ ಹಬ್ಬವೇ. ಆದರೆ ಊರು ಬಿಟ್ಟು ಪರ ಊರಿಗೆ ತೆರಳಿದವರಿಗೆ ಯಾವ ಹಬ್ಬವು ಇಲ್ಲ, ಮೋಜು ಇಲ್ಲ. ಬೆಳಗ್ಗೆ ಎದ್ದು ಹೊಟ್ಟೆ ಪಾಡಿಗೆ ಕೆಲಸಕ್ಕೆ ನಡೆದರೆ ರಸ್ತೆಯ ಪಕ್ಕದಲ್ಲಿ ಕಾಣುವ ಬಣ್ಣ ಬಣ್ಣದ ಲೈಟ್, ಗಂಟೆಗಟ್ಟಲೆಯ ಟ್ರಾಫಿಕ್ ನಿಂದ ಮನೆ ಸೇರುವುದು. ರಾತ್ರಿ ಹತ್ತರ ನಂತರವೇ ಊಟ ತಯಾರು, ಜೊತೆಗೆ ಬಟ್ಟೆ ಒಗೆಯುವುದರ ಮಧ್ಯೆ ಮನೆಯವರೊಂದಿಗೆ ಐದು ನಿಮಿಷ ಮಾತಾಡುವುದೇ ಬಹು ದೊಡ್ಡ ಸಾಧನೆ. ಮನಸ್ಸಿನಲ್ಲಿ ಎಷ್ಟೇ ನೋವಿದ್ದರು ಹೇಳಿಕೊಳ್ಳಲಾಗದ ಯಾತನೆ. ಇವುಗಳ ಮಧ್ಯೆ ರಾಜ್ಯ ರಾಜಧಾನಿಯಲ್ಲಿ ತುಳುವರು ಒಟ್ಟಾಗಿ ರಚಿಸಿದ ತಂಡ ತುಳುನಾಡ ಜವನೆರ್ ಬೆಂಗಳೂರು. ಇವರು ಆಯ್ಕೆ ಮಾಡಿಕೊಂಡದ್ದು ಅಷ್ಟಮಿ ಹಬ್ಬವನ್ನು. ಸಣ್ಣ ಮಟ್ಟದಲ್ಲಿ ಆರಂಭ ಮಾಡಿದ ವೇದಿಕೆ ಇಂದು ಶಾಸಕ, ಸಚಿವರ ಜೊತೆ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಬಂದು ವೇದಿಕೆಯಲ್ಲಿ ಶುಭ ಹಾರೈಸುವ ತನಕ ಬೆಳೆದಿದೆ ಎಂದರೆ ಇದು ಸಾಮಾನ್ಯ ಸಾಧನೆಯಲ್ಲ. ಕೇವಲ ಮೋಜು ಮಸ್ತಿಗಾಗಿ ಮಾತ್ರವಲ್ಲ, ಆರಾಧನೆಯ ಧ್ಯೋತಕವಾಗಿದೆ. ಅಷ್ಟಮಿ ಐಸಿರದಲ್ಲಿ ಶ್ರೀಕೃಷ್ಣ ಮೂರ್ತಿ ಹಿಡಿದು ಭಜನೆಯೊಂದಿಗೆ ಆರಂಭವಾಗುವ ಈ ಕಾರ್ಯಕ್ರಮ ನಿರಂತರವಾಗಿ ಶ್ರೀ ಕೃಷ್ಣ, ರಾಧಾ ವೇಷ ಸ್ಪರ್ಧೆ, ಸಾಧಕರಿಗೆ ಸನ್ಮಾನ, ಕೂಡು ಪಟ್ಟಾಂಗ, ಪ್ಯಾಶನ್ ಶೋ, ಆಟೋಟ ಸ್ಪರ್ಧೆಯಲ್ಲಿ ಹಗ್ಗಜಗ್ಗಾಟ, ಉದ್ದ ಜಾರುಕಂಬ, ಅಡ್ಡ ಜಾರಕಂಬ, ಕಂಬಲ, ಮಕ್ಕಳಿಗೆ ಬಹು ಆಯ್ಕೆ ಆಟಗಳ ಮೂಲಕ ಮೇಲೈಸಿದರೆ, ಕಂಬಲದ ಸಾಧಕ ಕೋಣಗಳಿಗೆ ರಾಜಗಾಂಭಿರ್ಯದ ಮೂಲಕ ಸನ್ಮಾನ, ಹುಲಿ ಕುಣಿತ, ಚೆಂಡೆ ಕುಣಿತ, ಸಮಾರೋಪ ಸಮಾರಂಭ, ತುಳು ನಾಟಕ, ಯಕ್ಷಗಾನ, ಅಟ್ಟಿ ಮಡಿಕೆ, ಡಿಜೆ ಜೊತೆಗೆ ತುಳುನಾಡಿನ ಖಾದ್ಯಗಳ ಸಮ್ಮಿಲನವೇ ಅಷ್ಟಮಿದ ಐಸಿರ. ಇಲ್ಲಿ ಪ್ರತಿಯೊಬ್ಬರೂ ಅಯೋಜಕರೇ, ಪ್ರತಿಯೊಬ್ಬರು ಸಂಘಟಕರೇ, ಪ್ರತಿಯೊಬ್ಬರು ಸ್ವಯಂ ಸೇವಕರೇ, ತಾನೇ ತನ್ನಿಂದಲೇ ಎನ್ನುವ ಅಹಂ ಬಿಟ್ಟು ನಮ್ಮದು ಎಂಬ ಸಾರ್ಥಕ ಭಾವನೆ ಇವರನ್ನು ಗೆಲ್ಲಿಸಿದೆ. ಇದು ಐಕ್ಯತೆಯ ಬದ್ಧತೆಯ ಸಿದ್ದಾಂತ. ಒಂದು ದಿನ ಮಟ್ಟಿಗೆ ವಿಜಯನಗರ ಬಂಟರ ಸಂಘ ಸಂಪೂರ್ಣವಾಗಿ ಕೇಸರಿ ಬಣ್ಣದಿಂದ ಮುಚ್ಚಿ ತುಳುನಾಡಿನ ಒಂದು ಕೇಂದ್ರದಂತೆ ಕಂಗೊಳಿಸುತ್ತದೆ. ಕೇಸರಿ ಮಾತ್ರವಲ್ಲ ತುಳು ಶಲ್ಯ, ತುಳು ಧ್ವಜ ರಾರಾಜಿಸುವ ಮೂಲಕ ತುಳುವರ ಸಂಘಟನೆಯ ಒಗ್ಗಟ್ಟು ಮೇಲೈಸುತ್ತದೆ.
ಎಂಟನೇ ವರ್ಷದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಅಂದಿನ ಉಪಮುಖ್ಯಮಂತ್ರಿ ಡಿಕೆಶಿ ನೆರೆದಿದ್ದ ತುಳುವರನ್ನು ಕಂಡು ನಿಮ್ಮ ತುಳು ಭಾಷೆಗೆ ಮಾನ್ಯತೆ ನೀಡುತ್ತೇನೆ ಎಂಬ ಮಾತು ನೀಡಿ ಭಾಷಣದಲ್ಲಿ ಉಲ್ಲೇಖ ಮಾಡಿದ್ದು, ಈ ಸಲ ಅನುಮೋದನೆ ನೀಡುವ ಮೂಲಕ ಮುಖ್ಯಮಂತ್ರಿಯಾಗಿ ಅದೇ ವಿಜಯನಗರ ಬಂಟರ ಸಂಘದಲ್ಲಿ ವಿಜಯೋತ್ಸವ ಆಚರಿಸಿ ಅಬ್ಬರದಲ್ಲಿ ಭಾಷಣದಲ್ಲಿ ಉಲ್ಲೇಖಿಸಿದ್ದು ಸತ್ಯ. ಜೊತೆಗೆ ತುಳುವರ ಮೇಲಿನ ಅವರ ಗೌರವ ಮಾತುಗಳಿಂದ ತುಳುವರಿಗೆ ಅವರ ಮೇಲೆ ಅಭಿಮಾನ ಹೆಚ್ಚಾಗಿದೆ. ತುಳು ಭಾಷೆಯ ಮಾನ್ಯತೆಗೆ ಹೋರಾಟಗಳು ಎಷ್ಟೋ ಆಗಿದೆ. ತುಳುವರ ಎಷ್ಟೋ ವರ್ಷಗಳ ಕನಸದು. ಇದರಲ್ಲಿ ತುಳುನಾಡ ಜವನೆರ್ (ರಿ) ಬೆಂಗಳೂರು ಇವರ ಅಳಿಲ ಸೇವೆಯು ಇದೆ ಎಂದರೇ ತಪ್ಪಾಗಲಾರದು. ಇದು ಈ ತಂಡದ ಗೆಲುವಲ್ಲ ಬದಲಾಗಿ, ತುಳುವರ ಗೆಲುವು. ಯಾಕೆಂದರೆ ಸ್ವಾಭಿಮಾನಿ ತುಳುವ ಸದೃಢ ನಾಯಕತ್ವದ ಗುಣದವ. ಈ ತಂಡದ ಹಿಂದಿರುವ ಬಹುದೊಡ್ಡ ಪ್ರೋತ್ಸಾಹಕರು ಸಾಮಾನ್ಯರಲ್ಲ. ರಾಜ್ಯ ರಾಜಧಾನಿಯಲ್ಲಿ ಸಿಗುವ ಬಹು ದೊಡ್ಡ ವೇದಿಕೆ. ಮೊದಲಿಗೆ ಈ ಕಾರ್ಯಕ್ರಮಕ್ಕೆ ಬರಲೊಪ್ಪದ ಕೆಲ ನಾಯಕರು ಈಗೀಗ ತಾವೇ ಸೇರಿಕೊಳ್ಳುತ್ತಿದ್ದಾರೆ. ಯಾಕೆಂದರೆ ಈ ಕಾರ್ಯಕ್ರಮ ಅಷ್ಟರ ಮಟ್ಟಿಗೆ ಹೆಸರುವಾಸಿಯಾಗಿದೆ. ರಾಜ್ಯ ರಾಜಧಾನಿಯಲ್ಲಿ ತುಳು ಬಾವುಟ ಹಾರಿಸುವುದು ಅಷ್ಟು ಸುಲಭದ ಮಾತಲ್ಲ ಬದಲಾಗಿ ಅದೊಂದು ಮೌಂಟ್ ಎವರೆಸ್ಟ್ ಏರಿದ ಸಾಧನೆ ಸೈ. ಭವಿಷ್ಯದ ಕರಾವಳಿಯ ಬದಲಾವಣೆಗೆ ಕೋಟಿ ಕೋಟಿ ಹೂಡಿಕೆಯ ನಿರ್ಧಾರವು ಈ ವೇದಿಕೆಯಿಂದ ಮೊಳಗಿದೆಯೆಂದರೇ ಸಾಮಾನ್ಯ ವೇದಿಕೆಯಲ್ಲ ಎಂಬುದನ್ನು ಅರಿಯಬಹುದು. ಇಲ್ಲಿ ಯಾರ ಹೆಸರನ್ನು ಉಲ್ಲೇಖ ಮಾಡುವುದಿಲ್ಲ ಯಾಕೆಂದರೆ ಯಾರು ಗೆದ್ದು ಬೀಗಿದರು ಅವರು ತುಳುವರೇ ಎಂಬ ಹೆಮ್ಮೆಯಿದೆ.





ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ಈ ಕಾರ್ಯಕ್ರಮಕ್ಕೆ ಸ್ಥಳಾವಕಾಶ ಕಡಿಮೆಯಾಗುತ್ತಿದ್ದು ಮುಂದಿನ ವರ್ಷ ಭಾರಿ ಜನ ಸೇರುವ ಲಕ್ಷಣವಿದ್ದು ಮುಂದಿನ ವರ್ಷ ಅರಮನೆ ಮೈದಾನದಲ್ಲಿ ನಡೆಸುವ ಬಗ್ಗೆ ಲಾಂಛನವನ್ನು ಸಿಎಂ ಬಿಡುಗಡೆ ಮಾಡಿದ್ದು ದೂರದೃಷ್ಟಿಯ ಯೋಚನೆಯಾಗಿದೆ. ಪ್ರೋತ್ಸಾಹಕರು, ಜಾಗ ಎಲ್ಲವೂ ಸುಲಭದಲ್ಲಿ ಜಮೆಯಾದರು ಅಚ್ಚಕಟ್ಟಾದ ಕಾರ್ಯಕ್ರಮ ಅಯೋಜನೆ ಅಷ್ಟು ಸುಲಭವಲ್ಲ. ಆದರೆ ಇದು ತುಳುನಾಡ ಜವನೆರ್ ತಂಡಕ್ಕೆ ದೊಡ್ಡ ವಿಷಯವು ಅಲ್ಲ. ಅದರ ಬಗ್ಗೆ ತಲೆ ಕಡೆಸಿಕೊಳ್ಳುವರು ಅಲ್ಲ.ಯಾಕೆಂದರೆ ಯಾವುದೇ ಕೆಲಸ ಕೈಗೆತ್ತಿಕೊಂಡರೇ ನಮ್ಮದು ಎಂಬ ಭಾವನೆಯಿಂದ ಯಶಸ್ವಿನ ಗಡಿ ದಾಟಿಸಿಯೇ ವಿರಾಮ ಎನ್ನುವುದು ಈ ತಂಡದಲ್ಲಿರುವ ಪ್ಲಸ್ ಪಾಯಿಂಟ್. ಇಲ್ಲಿ ಯಾರು ನಾಯಕರಿಲ್ಲ, ಎಲ್ಲರೂ ಸಾಮಾನ್ಯರೇ ಮುಖ್ಯವಾಗಿ ತುಳುವರು ಎಂಬ ಹೆಮ್ಮೆಯ ಸಾರ್ಥಕ ಭಾವನೆ ಇದೆ. ಕಡೆಯದಾಗಿ ನಿಮ್ಮ ಇಡೀ ತಂಡಕ್ಕೆ ನನ್ನ ಹಾಗೂ ಇಡೀ ತುಳುವರ ಪರವಾಗಿ ಶತ ಕೋಟಿ ನಮನ. ಮೇಲೆ ಹೇಳಿದಂತೆ ಇಲ್ಲಿ ತುಳುನಾಡ ಜವನೆರ್ (ರಿ) ಬೆಂಗಳೂರು ಅಯೋಜನೆಯ ಅಷ್ಟಮಿ ಐಸಿರ ಯಶಸ್ವಿಯಾಗಿದೆ. ಅಷ್ಟಮಿದ ಐಸಿರ ಗೆದ್ದಿಲ್ಲ, ಬದಲಾಗಿ ತುಳುವರು ಗೆದ್ದಿದ್ದಾರೆ. ತುಳುವರಂದರೆ ಯಾರು ಅದು ತುಳುನಾಡ ಜವನೆರ್ (ರಿ) ಬೆಂಗಳೂರು. ಯಾಕೆಂದರೆ ತುಳುನಾಡ ಜವನೆರ್ (ರಿ) ಬೆಂಗಳೂರು ಇವರಿಗೆ ಅಷ್ಟಮಿ ಐಸಿರ ಕೇವಲ ಕಾರ್ಯಕ್ರಮವಲ್ಲ ಬದಲಾಗಿ ಅದೊಂದು ಕೂಡು ಕುಟುಂಬದ ತಪಸ್ಸು.
ಬರಹ : ಮನ್ಮಥ ಶೆಟ್ಟಿ ಪುತ್ತೂರು














































































































