ಬಂಟರ ಸಂಘ ಪುಣೆ ಉತ್ತರ ಪ್ರಾದೇಶಿಕ ಸಮಿತಿ ಆಶ್ರಯದಲ್ಲಿ ರಕ್ತದಾನ ಮತ್ತು ಉಚಿತ ಅರೋಗ್ಯ ತಪಾಸಣಾ ಶಿಬಿರವು ಅಕ್ಟೋಬರ್ 2 ಶುಕ್ರವಾರದಂದು ಬೆಳಿಗ್ಗೆ ಗಂಟೆ 8.30ರಿಂದ ಮದ್ಯಾಹ್ನ ಗಂಟೆ 2 ರವರೆಗೆ ಪುಣೆ ಕನ್ನಡ ಸಂಘದ ಕಾವೇರಿ ವಿದ್ಯಾಲಯದ ಸಂಭಾಂಗಣದಲ್ಲಿ ನಡೆಯಲಿದೆ. ಈ ಶಿಬಿರವು ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಮತ್ತು ಅಧ್ಯಕ್ಷ ಕೆ ಅಜಿತ್ ಹೆಗ್ಡೆಯವರು ಗೌರವ ಉಪಸ್ಥಿತರಿದ್ದು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುಣೆಯ ಖ್ಯಾತ ಜಾಯಿಂಟ್ ರಿಪ್ಲೇಸ್ಮೆಂಟ್ ತಜ್ಞ ಮತ್ತು ಆರ್ಥೋಪೆಡಿಕ್ ತಜ್ಞರಾದ ಡಾ. ಪ್ರತೀಕ್ ಹೆಗ್ಡೆ ಮತ್ತು ಪುಣೆಯ ಅಪುಲ್ಕಿ ಅಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಧೀರ್ ಎಸ್ ರೈಯವರು ಉಪಸ್ಥಿತರಿರುವರು. ಡಾ. ಪ್ರತೀಕ್ ಹೆಗ್ಡೆಯವರು ಜಾಯಿಂಟ್ ರಿಪ್ಲೇಸ್ಮೆಂಟ್ ಮತ್ತು ಆರ್ಥೋಪೆಡಿಕ್ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಹಾಗೂ ಡಾ. ಸುಧೀರ್ ರೈಯವರು ಅರೋಗ್ಯ ರಕ್ಷಣೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ.




ರೂಬಿಹಾಲ್ ಕ್ಲಿನಿಕ್ ಆಸ್ಪತ್ರೆಯ ತಜ್ಞ ವೈದ್ಯರುಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಉಚಿತ ಅರೋಗ್ಯ ತಪಾಸಣಾ ಶಿಬಿರದಲ್ಲಿ ರಕ್ತದೊತ್ತಡ, ಡಯಾಬಿಟಿಸ್, ಕಣ್ಣಿನ ಪರೀಕ್ಷೆ, ಹಲ್ಲಿನ ತಪಾಸಣೆ, ಥೈರಾಯ್ಡ್ ತಪಾಸಣೆ ಮತ್ತು ಇನ್ನಿತರೇ ಆರೋಗ್ಯ ತಪಾಸಣೆ, ಆರೋಗ್ಯ ಮತ್ತು ಔಷದಿ ಬಗ್ಗೆ ಮಾಹಿತಿ ನೀಡಲಿದ್ದಾರೆ. ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ಆಯೋಜನೆಯಲ್ಲಿ ನಡೆಯಲಿರುವ ರಕ್ತದಾನ ಮತ್ತು ಆರೋಗ್ಯ ತಪಾಸಣೆ ಶಿಬಿರದಲ್ಲಿ ಎಲ್ಲಾ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡಿ ಉಚಿತ ಅರೋಗ್ಯ ತಪಾಸಣೆಯ ಸದುಪಯೋಗ ಪಡೆಯಬೇಕೆಂದು ಉತ್ತರ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆ, ಪ್ರಾದೇಶಿಕ ಸಮಿತಿಯ ಸಮನ್ವಯಕರಾದ ಗಣೇಶ್ ಪೂಂಜಾ, ಕಾರ್ಯದರ್ಶಿ ಪ್ರಸನ್ನ ಶೆಟ್ಟಿ, ಉಪಾದ್ಯಕ್ಷ ವಸಂತ ಶೆಟ್ಟಿ, ಉದಯ್ ಶೆಟ್ಟಿ, ಆರೋಗ್ಯ ಸಮಿತಿ ಕಾರ್ಯಾಧ್ಯಕ್ಷ ಆನಂದ್ ವಿ ಶೆಟ್ಟಿ, ಖಜಾಂಚಿ ಸಂತೋಷ್ ಶೆಟ್ಟಿ ಮತ್ತು ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರೇಮ ಆರ್ ಶೆಟ್ಟಿ ಮತ್ತು ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9850986645 ನಂಬರಿಗೆ ಸಂಪರ್ಕಿಸಬಹುದು.
ಚಿತ್ರ, ವರದಿ : ಹರೀಶ್ ಮೂಡುಬಿದ್ರಿ, ಪುಣೆ















































































































