
ಶ್ವೇತಾ ಪ್ರಸನ್ನ ಶೆಟ್ಟಿಯವರು ಎ.ಜೆ ತಾಂತ್ರಿಕ ಮಹಾವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕಿ ಹಾಗೂ ವಿಭಾಗ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ| ಶಾಂತಕುಮಾರಿ ಕೆ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ‘ಎ ಸ್ಟಡಿ ಆಫ್ ಸಿಂಗಲ್ ಆಂಡ್ ಡಬಲ್ ಇಂಟಿಗ್ರಲ್ಸ್ ಇನ್ವಾಲ್ವಿಂಗ್ ಹೈಪರ್ ಜಿಯೋಮೆಟ್ರಿಕ್ ಆಂಡ್ ಜನರಲೈಸ್ಡ್ ಹೈಪರ್ ಜಿಯೋಮೆಟ್ರಿಕ್ ಫಂಕ್ಷನ್ಸ್ ವಿತ್ ಅಪ್ಲಿಕೇಶನ್ಸ್’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯು 26ನೇ ವಾರ್ಷಿಕ ಘಟಕೋತ್ಸವದಲ್ಲಿ ಪಿ.ಎಚ್.ಡಿ ಪ್ರದಾನಿಸಲಾಯಿತು. ಮಂಗಳೂರಿನ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರ ಸಂಶೋಧನಾ ಪ್ರಬಂಧಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಗಣಿತಶಾಸ್ತ್ರದ ಜರ್ನಲ್ ಗಳಲ್ಲಿ ಪ್ರಕಟಗೊಂಡಿವೆ. ಪುಣೆಯ ಉದ್ಯಮಿ, ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಶೆಟ್ಟಿ ಪೆರ್ಡೂರು ಅವರ ಪತ್ನಿಯಾಗಿರುವ ಶ್ವೇತಾ ಮೂಲತಃ ಎರ್ಮಾಳು ಪುಚೊಟ್ಟು ದಿ. ಸುಂದರ ಶೆಟ್ಟಿ ಮತ್ತು ಪಾದೂರು ಕರ್ಮರಪಾಡಿ ವತ್ಸಲಾ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದಾರೆ.


















































































































