ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಆ ಮನೆಯ ಚಿತ್ರಣವೇ ಬದಲಾಗುತ್ತದೆ. ಅದಕ್ಕಾಗಿಯೇ ಕೊಲ್ಲೂರು ದೇಗುಲದಿಂದ ಆ ಕಾಲದಲ್ಲಿ ಹಳ್ಳಿಗಳಲ್ಲಿ ಹೈಸ್ಕೂಲ್ ತೆರಿದಿದ್ದೆ. ಸಮುದಾಯದಲ್ಲಿರುವ ಅನುಕೂಲಸ್ಥರು ಬಡವರಿಗೆ ನೆರವಾದರೆ ಅವರನ್ನು ಕೂಡಾ ಮುಂದೆ ತರಲು ಸಾಧ್ಯ ಎಂದು ಬೈಂದೂರಿನ ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು. ಅವರು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಸಂಘದ ಸಂಕೀರ್ಣದ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆದ ಅರಿವು ಯೋಜನೆಯಡಿ ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ ಸರಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಗಳ ಬಂಟ ಸಮುದಾಯದ ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕಾ ಸಾಧನಗಳ ವಿತರಣೆ ಹಾಗೂ ಯುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ| ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು. ಅರಿವು ಯೋಜನೆಗೆ ಡಾ. ರಾಜೇಶ್ ಶೆಟ್ಟಿ ಆನಗಳ್ಳಿ ಚಾಲನೆ ನೀಡಿದರು.




ಉದ್ಯಮಿ ಉದಯಕುಮಾರ್ ಹೆಗ್ಡೆ ಗಿಳಿಯಾರು, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಂ ಮಹೇಶ್ ಹೆಗ್ಡೆ, ಉದ್ಯಮಿಗಳಾದ ಸಬ್ಲಾಡಿ ಮಂಜಯ್ಯ ಶೆಟ್ಟಿ, ಅರುಣ್ ಕುಮಾರ್ ಹೆಗ್ಡೆ ಯಡಾಡಿ ಮತ್ಯಾಡಿ, ಡಾ. ಸಫಲ್ ಕುಮಾರ್ ಶೆಟ್ಟಿ, ಬಂಟರ ಯಾನೆ ನಾಡವರ ಸಂಘದ ತಾಲೂಕು ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ ಕಾವ್ರಾಡಿ, ಲಯನ್ಸ್ ಜಿಲ್ಲಾ ಉಪ ಗವರ್ನರ್ ಹರಿಪ್ರಸಾದ್ ರೈ, ಬೈಂದೂರು ಬಂಟರ ಸಂಘದ ಅಧ್ಯಕ್ಷ ಗೋಕುಲ್ ಶೆಟ್ಟಿ ಉಪ್ಪುಂದ, ಪ್ರಮುಖರಾದ ಉಲ್ಲಾಸ್ ಹೆಗ್ಡೆ ಮೊಳಹಳ್ಳಿ, ರತ್ನಾಕರ ಶೆಟ್ಟಿ ಗಿಳಿಯಾರು, ಎಂ ಚಂದ್ರಶೇಖರ ಶೆಟ್ಟಿ,ಅಮರನಾಥ ಶೆಟ್ಟಿ ಕೆಂಜೂರು ಮನೆ, ಡಾ. ರಂಜಿತ್ ಕುಮಾರ್ ಶೆಟ್ಟಿ, ಸಟ್ಟಾಡಿ ವಿಜಯ ಶೆಟ್ಟಿ, ಶ್ರೀಧರ ಶೆಟ್ಟಿ ಚಿಕ್ಕಮಂಗಳೂರು, ಜಡ್ಡಾಡಿ ವಿಜಯ ಶೆಟ್ಟಿ, ರಘುರಾಮ ಶೆಟ್ಟಿ ಹಟ್ಟಿಯಂಗಡಿ, ಪ್ರಕಾಶ್ ಶೆಟ್ಟಿ ಹಾವೇರಿ, ಅಲ್ತಾರು ಸುಧಾಕರ ಶೆಟ್ಟಿ, ಹೈದರಾಬಾದಿನ ಆಲೂರು ಅಶೋಕ ಶೆಟ್ಟಿ, ಮಾಹಾಲಿಂಗ ಶೆಟ್ಟಿ, ಕೆ.ಟಿ ಶಂಕರ ಶೆಟ್ಟಿ, ಶಕೀಲಾ ಸುಕುಮಾರ್ ಶೆಟ್ಟಿ, ಸಂಘದ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಶೇರ್ಡಿ ಗೈನಾಡಿಮನೆ, ಪ್ರ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಹರ್ಕೂರು, ಕೋಶಾಧಿಕಾರಿ ಅರುಣ್ ಶೆಟ್ಟಿ ಕುಂದಾಪುರ, ಕಾರ್ಯಕ್ರಮ ಸಂಚಾಲಕ ಅವಿನಾಶ್ ಶೆಟ್ಟಿ ಹೊಸಮಠ, ಮಾಜಿ ಅಧ್ಯಕ್ಷರಾದ ಸುನಿಲ್ ಕುಮಾರ್ ಶೆಟ್ಟಿ, ಪ್ರವೀಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಹಿರಿಯ ಉದ್ಯಮಿ ಕೆಂಚನೂರು ಸೋಮಶೇಖರ ಶೆಟ್ಟಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು. ಅತ್ಯುತ್ತಮ ಚಿತ್ರ ಆಧಾರಿತ ಪುಸ್ತಕ ಪ್ರಶಸ್ತಿ ಪಡೆದ ಡಾ| ಕೆಂಚನೂರು ಪ್ರದೀಪ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಸಾಧಕರನ್ನು ಗೌರವಿಸಲಾಯಿತು. ಕುಂದಾಪುರ ಹಾಗೂ ಬೈಂದೂರು ತಾಲೂಕಿನ 450 ಮಂದಿ ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ಮೌಲ್ಯದ ಆಧುನಿಕ ಕಲಿಕಾ ಸಾಧನಗಳನ್ನು ವಿತರಿಸಲಾಯಿತು. ಸಂಘದ ಸ್ಥಾಪಕಾಧ್ಯಕ್ಷ ಡಾ| ಅoಪಾರು ನಿತ್ಯಾನಂದ ಶೆಟ್ಟಿ ಸ್ವಾಗತಿಸಿ, ಹಳ್ನಾಡು ಪ್ರತಾಪಚಂದ್ರ ಶೆಟ್ಟಿ ಪ್ರಸ್ತಾವನೆಗೈದರು. ಸಚಿನ್ ಕುಮಾರ್ ಶೆಟ್ಟಿ ಹುಂಚನಿ ಕಾರ್ಯಕ್ರಮ ನಿರೂಪಿಸಿದರು.















































































































