ಕುಂದಾಪುರದ ಸೃಷ್ಟಿ ಇನ್ಫೋಟೆಕ್ ಕಂಪ್ಯೂಟರ್ ಸಂಸ್ಥೆಗೆ ‘ಕಿಯೋನಿಕ್ಸ್’ ವತಿಯಿoದ ನೀಡಲಾಗುವ ರಾಜ್ಯದ ಅತ್ಯುತ್ತಮ ನಿರ್ವಹಣಾ ಕೇಂದ್ರ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನಲ್ಲಿ ಜರುಗಿದ ಕಿಯೋನಿಕ್ಸ್ 50ನೇ ಸಂಸ್ಥಾಪನಾ ದಿನಾಚರಣೆ, ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸೃಷ್ಟಿ ಇನ್ಫೋಟೆಕ್ ಕಂಪ್ಯೂಟರ್ ಸಂಸ್ಥೆಯ ಮುಖ್ಯಸ್ಥ ಹರ್ಷವರ್ಧನ್ ಶೆಟ್ಟಿ ಕಟ್ಕೆರೆ ಅವರಿಗೆ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶಸ್ತಿ ನೀಡಿ ಶುಭ ಹಾರೈಸಿದರು. ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ನಿರ್ವಹಣೆಗಾಗಿ ಪ್ರಶಸ್ತಿಗೆ ಆಯ್ಕೆಗೊಂಡಿರುವ 21 ಕಿಯೋನಿಕ್ಸ್ ಕೇಂದ್ರಗಳ ಪೈಕಿ ಸೃಷ್ಟಿ ಇನ್ಫೋಟೆಕ್ ಕಂಪ್ಯೂಟರ್ ಕೇಂದ್ರವು 4ನೇ ಸ್ಥಾನ ಗಳಿಸಿದೆ.




ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಿಯೋನಿಕ್ಸ್ ಅಧ್ಯಕ್ಷ ಹಾಗೂ ಶಾಸಕ ಶರತ್ ಬಚ್ಚೇಗೌಡ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಿಎಂ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಯು.ಬಿ ವೆಂಕಟೇಶ, ಐಟಿ ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ| ಎನ್ ಮಂಜುಳಾ, ಕಿಯೋನಿಕ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ| ಅವಿನಾಶ ಮೆನನ್, ರಾಜೇಂದ್ರನ್ ಮತ್ತಿತರರು ಉಪಸ್ಥಿತರಿದ್ದರು.















































































































