
ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಸಂಸ್ಥೆಯು ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿದ ಸುದೀರ್ಘ ಪಯಣದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಅಭಯ ಸೇವಾ ಫೌಂಡೇಶನ್ನ ಸಂಸ್ಥಾಪಕ ಅಧ್ಯಕ್ಷ ಹಾಗೂ ದುರ್ಗಾಪರಮೇಶ್ವರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಉಮೇಶ್ ಶೆಟ್ಟಿ ಮಂದಾರ್ತಿ ಅವರಿಗೆ “ಸೇವಾರತ್ನ” ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಉಮೇಶ್ ಶೆಟ್ಟಿಯವರು ಮಾತನಾಡಿ, ನನಗೆ ನೀಡಿರುವ “ಸೇವಾರತ್ನ” ಪ್ರಶಸ್ತಿ ಕೇವಲ ಗೌರವವಲ್ಲ; ಮುಂದಿನ ದಿನಗಳಲ್ಲಿ ಸಮಾಜಸೇವೆಯ ಕ್ಷೇತ್ರದಲ್ಲಿ ಇನ್ನಷ್ಟು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕೆಂಬ ಹೊಸ ಪ್ರೇರಣೆ ಮತ್ತು ಹೊಣೆಗಾರಿಕೆಯನ್ನು ನೀಡಿದೆ. ಇದೇ ಉತ್ಸಾಹದಿಂದ ಅಭಯ ಸೇವಾ ಫೌಂಡೇಶನ್ನ ಸರ್ವ ಸದಸ್ಯರು ಹಾಗೂ ನಮ್ಮ ತಂಡದೊಂದಿಗೆ, ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಗ್ರಾಮೀಣ ಪ್ರದೇಶಗಳು ಹಾಗೂ ಹಳ್ಳಿಗಳಿಗೆ ತಲುಪಿ, ಅಗತ್ಯವಿರುವ ಜನರಿಗೆ ಇನ್ನಷ್ಟು ಸೇವೆ ಮಾಡುವ ಸೇವಾ ಕೈಂಕರ್ಯವನ್ನು ಮುಂದುವರಿಸುವ ಸಂಕಲ್ಪವನ್ನು ಕೈಗೊಂಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಎಂಜಿ ರೋಡ್ ಪ್ರಧಾನ ಕಚೇರಿಯ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಸಂಸ್ಥೆಯ ತಂಡದವರು ಉಪಸ್ಥಿತರಿದ್ದರು.


















































































































