ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಸೆಪ್ಟೆಂಬರ್ 27 ಭಾನುವಾರ ಬೆಳಿಗ್ಗೆ 9:30 ರಿಂದ ಬಂಟರ ಯಾನೆ ನಾಡವರ ಸಂಕಿರ್ಣ ಆರ್. ಎನ್ ಶೆಟ್ಟಿ ಸಭಾಂಗಣದಲ್ಲಿ ‘ಅರಿವು’ ಯೋಜನೆಯಡಿ ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ಬಂಟ ಸಮುದಾಯದ ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕಾ ಸಾಧನಗಳ ವಿತರಣೆ ಹಾಗೂ ಯುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಅರಿವು ಯೋಜನೆಯ ಆಶ್ರಯದಾತರಾಗಿ ಹಿರಿಯ ಉದ್ಯಮಿ ಬೆಂಗಳೂರಿನ ಭವಾನಿ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕರಾದ ಆನಗಳ್ಳಿ ಜಯಕರ ಹೆಗ್ಡೆ ಸಹಕರಿಸಲಿದ್ದಾರೆ. ಮಾಜಿ ಶಾಸಕರಾದ ಬಿ.ಎಂ ಸುಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಧಾನ ಅಭ್ಯಾಗತರಾಗಿ ಕಿಶೋರ್ ಕುಮಾರ್ ಹೆಗ್ಡೆ ಕೈಲ್ಕೇರಿ ಸಿ.ಎಂ.ಡಿ ಲೈಫ್ ಲೈನ್ ಫೀಡ್ಸ್ ಚಿಕ್ಕಮಂಗಳೂರು, ಡಾ| ಕೆ. ಪ್ರಕಾಶ್ ಶೆಟ್ಟಿ ಸಿಎಂಡಿ ಎಮ್.ಆರ್.ಜಿ ಗ್ರೂಪ್ ಬೆಂಗಳೂರು, ಡಾ| ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಸಿಎಂಡಿ ಹೇರಂಬ ಆಗ್ರೋ ಇಂಡಸ್ಟ್ರೀಸ್ ಮುಂಬೈ, ಎಸ್.ಎಸ್ ಹೆಗ್ಡೆ ಸಿಎಂಡಿ ಸೌತ್ ಫೀಲ್ಡ್ ಪೈoಟ್ಸ್ ಇಂಡಿಯಾ ಬೆಂಗಳೂರು, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಸಿಎಂಡಿ, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ದುಬೈ, ಬೈಲೂರು ಉದಯಕುಮಾರ್ ಶೆಟ್ಟಿ ಸಿಎಂಡಿ ಯುವ ಮೆರಿಡಿಯನ್ ಕೋಟೇಶ್ವರ, ಜಯಶೀಲ ಎನ್ ಶೆಟ್ಟಿ ಕಾಳ್ತೋಡು ಹಿರಿಯ ಉದ್ಯಮಿಗಳು ಘಟಪ್ರಭಾ, ದಯಾನಂದ ಶೆಟ್ಟಿ ಸಿಎಂಡಿ ಮಂಜುಶ್ರೀ ಕನ್ಸ್ಟ್ರಕ್ಷನ್ ಅಂಕದ ಕಟ್ಟೆ ಇವರು ಭಾಗವಹಿಸಲಿದ್ದಾರೆ.




ಮುಖ್ಯ ಅತಿಥಿಗಳಾಗಿ ಕರುಣಾಕರ ಶೆಟ್ಟಿ ಸಿಎಂಡಿ ವಿ.ಕೆ ಡೆವಲಪರ್ಸ್ ಮುಂಬೈ, ಬೆಳ್ಳಾಡಿ ಅಶೋಕ್ ಶೆಟ್ಟಿ ಸಿಎಂಡಿ ಮೆರಿಟ್ ಹಾಸ್ಪಿಟಾಲಿಟಿ ಮುಂಬೈ, ಡಾ. ರಾಜೇಶ್ ಶೆಟ್ಟಿ ಆನಗಳ್ಳಿ ಮಿತ್ರ ಕ್ಲಿನಿಕ್ ಕೋಟೇಶ್ವರ, ಲಯನ್ ಅರುಣ್ ಕುಮಾರ್ ಹೆಗ್ಡೆ ಹಿರಿಯ ಉದ್ಯಮಿ ಯಡಾಡಿ- ಮತ್ಯಾಡಿ, ಡಾ. ಸಫಲ್ ಕುಮಾರ್ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ ಕಾವ್ರಾಡಿ, ಲಯನ್ ಹರಿಪ್ರಸಾದ್ ರೈ, ಗೋಕುಲ್ ಶೆಟ್ಟಿ ಉಪ್ಪುಂದ, ಉಲ್ಲಾಸ್ ಹೆಗ್ಡೆ ಮೊಳಹಳ್ಳಿ, ಬೈಲೂರು ಶ್ರೀನಿವಾಸ ಶೆಟ್ಟಿ, ರತ್ನಾಕರ ಶೆಟ್ಟಿ ಗಿಳಿಯಾರು ಬಡಾಮನೆ, ಸದಾನಂದ ಶೆಟ್ಟಿ ಹೇಸ್ಕುಂದ ಹೊಸಮನೆ, ಎಂ. ಚಂದ್ರಶೇಖರ್ ಶೆಟ್ಟಿ ಮೊರ್ಟು ಕೊಡ್ಲಾಡಿ, ಯುವ ಉದ್ಯಮಿ ಅಶೋಕ್ ಬಿ ಶೆಟ್ಟಿ, ಅಮರನಾಥ ಶೆಟ್ಟಿ ಕೆಂಜೂರು ಮನೆ ಭಾಗವಹಿಸಲಿದ್ದಾರೆ. ಜೊತೆಗೆ ಸಂಘದ ನಿರ್ದೇಶಕರು, ಪೋಷಕರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಹಿರಿಯ ಉದ್ಯಮಿ ಕೆಂಚನೂರು ಸೋಮಶೇಖರ ಶೆಟ್ಟಿ ಅವರಿಗೆ ವಿಶೇಷ ಗೌರವಾರ್ಪಣೆ ಸಲ್ಲಿಸಲಾಗುದು ಎಂದು ಸಂಘದ ಅಧ್ಯಕ್ಷ ಡಾ| ಚೇತನ್ ಶೆಟ್ಟಿ ಕೋವಾಡಿ, ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಶೇರ್ಡಿ ಗೈನಾಡಿಮನೆ, ಕಾರ್ಯಕ್ರಮ ಸಂಚಾಲಕ ಅವಿನಾಶ್ ಶೆಟ್ಟಿ ಹೊಸಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ














































































































